ಪತ್ನಿ ಜೊತೆ ಗುಡಿ ಪಾಡ್ವಾ ಆಚರಿಸಿದ ಜಹೀರ್ ಖಾನ್‌ ವಿರುದ್ಧ ಸಿಟ್ಟಿಗೆದ್ದ ಸಮುದಾಯದ ಜನ

First Published | Apr 11, 2024, 1:39 PM IST

ಮಾಜಿ ಕ್ರಿಕೆಟಿಗ ಜಾಹೀರ್ ಖಾನ್ ಅವರು ಪತ್ನಿ, ನಟಿ ಸಾಗರಿಕಾ ಘಾಟ್ಗೆ ಜೊತೆ ಸೇರಿ ಯುಗಾದಿ ಗುಡಿಪಾಡ್ವ ಹಬ್ಬವನ್ನು ಆಚರಿಸಿದ್ದು, ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಮಾಜಿ ಕ್ರಿಕೆಟಿಗ ಜಾಹೀರ್ ಖಾನ್ ಅವರು ಪತ್ನಿ, ನಟಿ ಸಾಗರಿಕಾ ಘಾಟ್ಗೆ ಜೊತೆ ಸೇರಿ ಯುಗಾದಿ ಗುಡಿಪಾಡ್ವ ಹಬ್ಬವನ್ನು ಆಚರಿಸಿದ್ದು, ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಫೋಟೋಗಳಲ್ಲಿ ದಂಪತಿಗಳಿಬ್ಬರು ಸಾಂಪ್ರದಾಯಿಕ ಧಿರಿಸು ಧರಿಸಿ ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿದ್ದಾರೆ. ಆದರೆ ಫೋಟೋಗಳನ್ನು ನೋಡಿದ ಕೆಲವರು ಜಾಹೀರ್ ಖಾನ್‌ ವಿರುದ್ಧ ಕೆಂಡ ಕಾರಿದ್ದರೆ ಮತ್ತೆ ಕೆಲವರು ಅವರನ್ನು ಬೆಂಬಲಿಸಿದ್ದಾರೆ. 

Tap to resize

ಲವ್ ಜಿಹಾದ್, ಮತಾಂತರ ಮುಂತಾದ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಆರೋಪಗಳ ಮಧ್ಯೆಯೇ ಮುಸ್ಲಿಂ ಸಮುದಾಯದವರಾದ ಕ್ರಿಕೆಟಿಗ ಜಾಹೀರ್ ಖಾನ್ ಅವರು ಹಿಂದೂ ನಟಿ ಸಾಗರಿಕಾ ಘಟ್ಕೆ ಅವರನ್ನು ಮದ್ವೆಯಾಗಿ ಈ ಆರೋಪಗಳೆಲ್ಲವನ್ನು ಸುಳ್ಳು ಮಾಡಿದವರು. 

ನಮ್ಮ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಬಹಳ ಸುಂದರವಾಗಿ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ಈ ಜೋಡಿ ಇನ್ಸ್ಟಾದಲ್ಲಿ ಹೇಳಿಕೊಂಡಿದೆ. ಜೊತೆಗೆ ಇಂದು ಮುಸ್ಲಿಂ ಸಮುದಾಯದ ಹಬ್ಬವಾಗಿರುವ ಈದ್ ಮಿಲಾದ್ ಹಬ್ಬಕ್ಕೂ ಈ ಜೋಡಿ ಫೋಟೋಗಳೊಂದಿಗೆ ಶುಭಾಶಯ ತಿಳಿಸಿದೆ.

ಆದರೆ ಗುಡಿಪಾಡ್ವಾದ ಫೋಟೋಗಳಿಗೆ ಮಾತ್ರ ಅನೇಕರು ಆಕ್ರೋಶಭರಿತರಾಗಿ ಕಾಮೆಂಟ್ ಮಾಡಿದ್ದಾರೆ. ರಂಜಾನ್‌ನ ಈ ಪವಿತ್ರ ಮಾಸದಲ್ಲಿ ನೀವು ಈ ರೀತಿ ಮಾಡುವುದನ್ನು ಸಹಿಸಲಾಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ನಿಮ್ಮ ಬಗ್ಗೆ ನಾಚಿಕೆ ಎನಿಸುತ್ತಿದೆ. ರಂಜಾನ್ ಪವಿತ್ರ ಮಾಸದಲ್ಲಿಯೂ ನೀವು ಈ ರೀತಿ ಮಾಡುತ್ತಿರಲ್ಲ, ಮುಸ್ಲಿಂ ಹಬ್ಬಗಳ ಬಗ್ಗೆಯೂ ಪೋಸ್ಟ್ ಮಾಡಿ ಎಂದರೆ ಮತ್ತೊಬ್ಬರು ನೀವು ಹಿಂದೂ ಯಾವಾಗ ಆದೀರಿ ಎಂದು ಪ್ರಶ್ನೆ ಮಾಡಿದ್ದಾರೆ. 

ಮತ್ತೆ ಕೆಲವರು ಈ ಜೋಡಿಯನ್ನು ಸಮರ್ಥಿಸಿಕೊಂಡಿದ್ದು, ಇವರು ಭಾರತದ ನಿಜವಾದ ಜಾತ್ಯಾತೀತ ಜೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸಾಗರಿಕಾ ತನ್ನ ಮೂಲವನ್ನು ಮರೆತಿಲ್ಲ ಎಂದು ಖುಷಿಪಟ್ಟಿದ್ದಾರೆ.  ಮತ್ತೆ ಕೆಲವರು ಆತನನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಿದ್ದಾರೆ. 

ಇತ್ತ ಇಂದು ಈದ್ ಹಬ್ಬದ ಹಿನ್ನೆಲೆಯಲ್ಲಿಯೂ ಈ ಜೋಡಿ ಜೊತೆಯಾಗಿ ಹಬ್ಬದ ಆಚರಣೆಯ ಪೋಸ್ಟ್ ಮಾಡಿದೆ. ಅನೇಕ ಅಭಿಮಾನಿಗಳು ಈ ಜೋಡಿಗೆ ಈದ್ ಹಬ್ಬದ ಶುಭ ಹಾರೈಸಿದ್ದಾರೆ. 

ಜಾಹೀರ್ ಖಾನ್ ಅವರನ್ನು ಮದ್ವೆಯಾಗಿರುವ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರು ಶಾರುಖ್ ಖಾನ್ ಅವರ ಚಕ್ ದೇ ಇಂಡಿಯಾ ಸಿನಿಮಾ ಮೂಲಕ ಜನಪ್ರಿಯರಾದವರು. ಆದರೆ 2017ರಲ್ಲಿ ಜಾಹೀರ್ ಖಾನ್ ಅವರನ್ನು ಮದ್ವೆಯಾಗುವ ಮೂಲಕ ಸಿನಿಮಾದಿಂದ ದೂರ ಉಳಿದಿದ್ದಾರೆ. 

ಸಾಗರಿಕಾ ಘಾಟ್ಗೆ ಅವರ ತಂದೆ ವಿಜಯೇಂದ್ರ ಘಾಟ್ಗೆ ಚಿತ್ರರಂಗದಲ್ಲಿ ಹೆಸರಾಂತ ವ್ಯಕ್ತಿ. ಹಾಗೆಯೇ ಅವರ ಅಜ್ಜಿ ಸೀತಾ ರಾಜೇ ಘಾಟ್ಗೆ ಇಂದೋರ್‌ನ ಮಹಾರಾಜ ತುಕೋಜಿರಾವ್ ಹೋಳ್ಕರ್ ಅವರ ಮಗಳು. ಇದರಿಂದಾಗಿ ಸಾಗರಿಕಾ ರಾಜಮನೆತನಕ್ಕೆ ಸೇರಿದ್ದಾರೆ.

ಸುಮಾರು 9 ತಿಂಗಳ ಡೇಟಿಂಗ್ ನಂತರ, ಸಾಗರಿಕಾ ಮತ್ತು ಜಹೀರ್ ಐಪಿಎಲ್-2017 ರ ಸಮಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.. 23 ನವೆಂಬರ್ 2017 ರಂದು, ಇಬ್ಬರೂ ಮುಂಬೈನ ತಾಜ್ ಪ್ಯಾಲೇಸ್‌ನಲ್ಲಿ ಆರತಕ್ಷತೆಯ ನಂತರ ಕೋರ್ಟ್‌ ಮ್ಯಾರೇಜ್‌ ಮಾಡಿಕೊಂಡರು. ಇದಾದ ಬಳಿಕ ಬಹುತೇಕ ಸಿನಿಮಾ ಲೋಕಕ್ಕೆ ವಿದಾಯ ಹೇಳಿದ್ದಾರೆ ಸಾಗರಿಕಾ ಘಾಟ್ಗೆ.
 

Latest Videos

click me!