ಕೆಲಸದ ಅಡ್ಡಿ ನಿವಾರಣೆ: ಮಾಡುವ ಕೆಲಸಲ್ಲಿ ಅಡಚಣೆ ಇದ್ದರೆ ತಂಬಿಗೆಯಲ್ಲಿ ನೀರು ತುಂಬಿಸಿ ಅದಕ್ಕೆ ಎಳ್ಳು ಹಾಕಿ ಶಿವಲಿಂಗಕ್ಕೆ ಅರ್ಪಿಸಬೇಕು. ಅಭಿಷೇಕದ ಸಂದರ್ಭ ಮಂತ್ರ ಜಪಿಸಿ, ಅರ್ಪಿಸಿದ ನಂತರ ಹೂ ಮತ್ತು ಬಿಲ್ವಪತ್ರೆ ಅರ್ಪಿಸಿ. ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ನಿಮ್ಮ ಜಾತಕದಲ್ಲಿ ಶನಿ ಕೆಟ್ಟ ಸ್ಥಾನದಲ್ಲಿದ್ದಾನೆ, ಇಲ್ಲಿದ್ದರೆ ಶುಭವಲ್ಲ ಎಂದು ಜ್ಯೋತಿಷಿಗಳು ಹೇಳುವುದನ್ನು ಕೇಳಿರಬಹುದು. ಇಂತಹ ಸಂದರ್ಭದಲ್ಲಿ ಪ್ರತಿ ಶನಿವಾರ ಕಪ್ಪು ಎಳ್ಳು ಪವಿತ್ರ ನದಿಗೆ ಸಮರ್ಪಿಸಿ. ಇದರಿಂದ ಶನಿದೋಷ ನಿವಾರಣೆಯಾಗುತ್ತದೆ.
ಹಾಲಿನಲ್ಲಿ ಕಪ್ಪು ಎಳ್ಳು ಬೆರೆಸಿ ಶನಿವಾರ ಜನರಿಗೆ ನೀಡುವುದರಿಂದ ನಮ್ಮ ಕೆಟ್ಟ ಸಮಯ ಹೋಗಿ ಒಳ್ಳೆ ಸಮಯ ಬರುತ್ತದೆ.
ರಾಹು-ಕೇತು ದೋಷ ಪರಿಹಾರಕ್ಕಾಗಿ ಎಳ್ಳನ್ನು ದಾನ ಮಾಡಬೇಕು. ಕಾಲಸರ್ಪ ಯೋಗ, ಸಾಡೇಸಾತಿ, ಪಿತೃ ದೋಷ ನಿವಾರಣೆಗೆ ಅನುಸರಿಸಬಹುದು.
ಹಣವನ್ನು ಕೂಡಿಡುವಾಗ ಕಪ್ಪು ಎಳ್ಳು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿ. ಇದರಿಂದ ಹಣದ ವ್ಯವಹಾರದ ಸಮಸ್ಯೆ ನಿವಾರಣೆಯಾಗುತ್ತದೆ.
ದೀರ್ಘ ಅನಾರೋಗ್ಯದಿಂದ ನೀವು ಸಂಕಟಪಡುತ್ತಿದ್ದರೆ ಕಪ್ಪೆಳ್ಳನ್ನು ಶಿವಲಿಂಗಕ್ಕೆ ಸಮರ್ಪಿಸಿ. ಇದರಿಂದ ರೋಗಗಳು ದೂರವಾಗಿ ಆರೋಗ್ಯ ವೃದ್ದಿಸುತ್ತದೆ.