ಈ ರಾಶಿಯವರು ಮದುವೆಯಾದರೆ ಜಗಳವೇ ಗತಿ!

First Published | Aug 13, 2020, 5:37 PM IST

ನೀವು ರಾಶಿ, ನಕ್ಷತ್ರಗಳನ್ನು ನಂಬಿ, ನಂಬದೆಯೇ ಇರಿ, ಸಂಬಂಧಗಳ ವಿಷಯದಲ್ಲಿ ಅವುಗಳು ಮೂಗು ತೂರಿಸುವುದಂತೂ ಖಚಿತ. ನಿಮ್ಮ ವ್ಯಕ್ತಿತ್ವ ಹೇಳುವ ರಾಶಿ ನಕ್ಷತ್ರಗಳು ಅದರ ಆಧಾರದ ಮೇಲೆ ಎಂಥ ಸ್ವಭಾವದ ವ್ಯಕ್ತಿಯೊಂದಿಗೆ ನಿಮಗೆ ತಾಳಮೇಳಗಳು ಹೊಂದುತ್ತವೆ, ಎಂಥವರೊಂದಿಗೆ ಹೊಂದುವುದಿಲ್ಲ ಎಂದೂ ಹೇಳುತ್ತವೆ. ಉದಾಹರಣೆಗೆ ಇಬ್ಬರೂ ಹಠಮಾರಿಗಳಾದರೆ, ಸಂಬಂಧದ ನಡುವೆ ಬರುವ ಯಾವ ವಿಷಯಕ್ಕೂ ಇಬ್ಬರೂ ಸೋಲಲ್ಲೊಪ್ಪುವುದಿಲ್ಲ. ಕಡೆಗೆ ಆ ಸಂಬಂಧ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ. ಹಾಗಾಗಿ, ಎಲ್ಲ ಆರಂಭವಾಗುವ ಮೊದಲೇ ಯಾವ ರಾಶಿಯವರಿಗೆ ಇನ್ಯಾವ ರಾಶಿಯವರೊಡನೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ತಿಳಿದುಕೊಂಡಿದ್ದರೆ, ಸಂಬಂಧ ಹಳಿ ತಪ್ಪದಂತೆ ನೋಡಿಕೊಳ್ಳಬಹುದು. ಅಂಥ 8 ಮಿಸ್‌ಮ್ಯಾಚ್‌‍ಗಳಾಗುವ ರಾಶಿಗಳಿಲ್ಲಿವೆ.

ಮಿಥುನ ಮತ್ತು ಮೀನಈ ಎರಡೂ ರಾಶಿಯವರು ಭಾವನೆಗಳನ್ನು ನೋಡುವ ದೃಷ್ಟಿಕೋನವೇ ಬೇರೆ ಬೇರೆ ರೀತಿಯದ್ದು. ಮೀನ ರಾಶಿಯವರಿಗೆ ಸೂಕ್ಷ್ಮತೆ ಹಾಗೂ ಭಾವನೆಗಳೇ ಎಲ್ಲವೂ ಆದರೆ, ಮಿಥುನದವರಿಗೆ ಸಂಬಂಧದಲ್ಲಿ ಇದೇನು ಅಂಥ ಮುಖ್ಯವಲ್ಲ. ಈ ಎರಡು ರಾಶಿಯವರು ಒಟ್ಟಾದರೆ ಒಬ್ಬರನ್ನೊಬ್ಬರು ನೋಯಿಸುತ್ತಲೇ ಇರುತ್ತಾರೆ.
undefined
ಮಕರ ಮತ್ತು ಸಿಂಹಸಿಂಹ ರಾಶಿಯವರು ಬಹಳ ಬುದ್ಧಿವಂತರು ಜೊತೆಗೆ ತಮ್ಮ ಕೆಲಸವನ್ನು ಬಹಳ ಪ್ರೀತಿಸುವವರು. ಮಕರ ರಾಶಿಯವರು ತಮ್ಮ ಕೆಲಸ ಮುಗಿಸುವುದು ಹೇಗೆಂದು ಬಲ್ಲವರು. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಪ್ರೀತಿಯಾಗಬಹುದು. ಆದರೆ, ಸಮಯ ಸರಿದಂತೆ ಸಿಂಹ ರಾಶಿಯವರು ಅದೆಷ್ಟು ಹಿಡಿತ ಸಾಧಿಸಿ ಅಧಿಕಾರ ಚಲಾಯಿಸುತ್ತಾರೆಂಬುದು ತಿಳಿಯುತ್ತದೆ. ಹಾಗೆಯೇ ಮಕರ ರಾಶಿಯವರು ಉದಾಸೀನರು ಹಾಗೂ ಯಾವುದಕ್ಕೂ ಸೀರಿಯಸ್ ಆಗಿಲ್ಲದವರು ಎಂಬುದು ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಅವರಿಬ್ಬರೂ ಒಳ್ಳೆಯ ಜೋಡಿಯಾಗಲಾರರು.
undefined

Latest Videos


ಕರ್ಕಾಟಕ ಮತ್ತು ಧನುಕರ್ಕಾಟಕ ರಾಶಿಯವರು ಭಾವನೆಗಳ ಮೂಟೆ ಜೊತೆಗೆ, ಅವು ಪದೇ ಪದೆ ಬದದಲಾಗುವಂಥವು. ಆದರೆ, ಧನು ರಾಶಿಯವರು ಸ್ವತಂತ್ರವಾಗಿಯೂ ಸಾಹಸಿಯಾಗಿಯೂ ಇರಬಯಸುವವರು. ಕರ್ಕಾಟಕ ರಾಶಿಯವರು ಸಮಯ ಕಳೆದಂತೆಲ್ಲ ಸಂಗಾತಿಯ ಮೇಲೆ ಸಂಪೂರ್ಣ ಅವಲಂಬಿತರಾಗುವವರಾದರೆ, ಧನು ರಾಶಿಯವರು ಇಂಥದರಿಂದ ದೂರ ಉಳಿಯಲು ಬಯಸುವವರು.
undefined
ಕನ್ಯಾ ಹಾಗೂ ಮಿಥುನಈ ರಾಶಿಯವರು ಜೋಡಿಯಾದರೆ ಆರಂಭದಲ್ಲಿ ಎಲ್ಲ ಚೆನ್ನಾಗೆನಿಸಿದರೂ, ನಿಧಾನವಾಗಿ ದೂರ ಸರಿಯುವವರು. ಇದಕ್ಕೆ ಕಾರಣ ಅವರ ತದ್ವಿರುದ್ಧ ವ್ಯಕ್ತಿತ್ವಗಳು. ಮಿಥುನ ರಾಶಿಯವರು ತಮಾಷೆಯಾಗಿರುವ ಜೊತೆಗೆ, ಯಾವ ವಿಷಯದಲ್ಲೂ ಗಂಭೀರವಾಗಿ ನಿರ್ಧಾರ ಕೈಗೊಳ್ಳಲಾರದವರು. ಆದರೆ ಈ ಗುಣ ಕನ್ಯಾದವರಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ಅವರು ಪರ್ಫೆಕ್ಷನಿಸ್ಟ್. ಎಡವಟ್ಟುಗಳು, ಎಡಬಿಡಂಗಿಗಳನ್ನು ಸಹಿಸಲಾರದವರು.
undefined
ಮೇಷ ಹಾಗೂ ವೃಷಭಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬುದು ಬಿಟ್ಟರೆ ಇಬ್ಬರ ನಡುವೆ ಸಮಾನ ಅಂಶಗಳೊಂದೂ ಇಲ್ಲ. ಮೇಷ ರಾಶಿಯವರು ಚುರುಕಾಗಿದ್ದು, ವೇಗದ ಜೀವನ ನಡೆಸುತ್ತಿದ್ದರೆ, ವೃಷಭ ರಾಶಿಯವರು ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರುವವರಲ್ಲ. ಆರಂಭದಲ್ಲಿ ಇವರಿಬ್ಬರ ಜೋಡಿ ಎಲ್ಲ ಸರಿಯಾಗಿದ್ದಂತೆನಿಸಿದರೂ ಧೀರ್ಘಕಾಲದಲ್ಲಿ ಆ ಬಾಂಡಿಂಗ್ ಉಳಿಯುವುದಿಲ್ಲ.
undefined
ಸಿಂಹ ಮತ್ತು ವೃಷ್ಚಿಕಈ ಎರಡೂ ರಾಶಿಗಳ ಗುಣಸ್ವಭಾವ ಒಂದೇ ಆಗಿರುವುದೇ ಇವರಿಗೆ ಸಮಸ್ಯೆಯಾಗುತ್ತದೆ. ಇಬ್ಬರೂ ಬಹಳ ಡಾಮಿನೇಟಿಂಗ್ ಸ್ವಭಾವದ ಜೊತೆಗೆ, ಅತಿಯಾಗಿ ಸ್ವಂತ ಅಭಿಪ್ರಾಯ ಹೊಂದುವವರು. ಹೀಗಾಗಿ, ಒಬ್ಬರು ಮತ್ತೊಬ್ಬರ ಅಭಿಪ್ರಾಯಗಳನ್ನು ಒಪ್ಪುವವರಲ್ಲ.
undefined
ವೃಷಭ ಹಾಗೂ ಧನುಧನು ರಾಶಿಯವರು ಸಾಹಸೀ ಆತ್ಮಗಳು. ಸದಾ ಕಾಲ ಹೊಸತನ್ನು ಹುಡುಕುವವರು, ಎಕ್ಸೈಟ್‌ಮೆಂಟ್‌ಗಾಗಿ ಹಪಹಪಿಸುವವರು. ಆದರೆ, ವೃಷಭ ರಾಶಿಯವರು ಕಂಫರ್ಟ್ ಬಿಟ್ಟು ಹೊರಬರದವರು. ಧನು ರಾಶಿಯವರು ಜಗತ್ತನ್ನೇ ಶೋಧಿಸ ಬಯಸಿದರೆ ವೃಷಭದವರು ಮನೆಯಲ್ಲೇ ಕೆಲ ಆತ್ಮೀಯರೊಂದಿಗೆ ಇರಬಯಸುವವರು.
undefined
ಕುಂಭ ಹಾಗೂ ಕರ್ಕಾಟಕಕುಂಭ ರಾಶಿಯವರು ಸ್ವಾತಂತ್ರ್ಯ ಬಯಸುವವರು. ಎಷ್ಟೇ ಆಳವಾಗಿ ಇನ್ನೊಬ್ಬರೊಂದಿಗೆ ಪ್ರೀತಿಗೆ ಬಿದ್ದರೂ ತಮ್ಮತನವನ್ನು ಬಿಟ್ಟುಕೊಡದವರು. ಆದರೆ, ಕರ್ಕಾಟಕ ರಾಶಿಯವರು ಅತಿಯಾಗಿ ಭಾವನೆಗಳನ್ನವಲಂಬಿಸುವವರು ಹಾಗೂ ಒಂಟಿಯಾಗಿರುವ ಯೋಚನೆಯೇ ಸಾಧ್ಯವಿಲ್ಲದವರು. ಹಾಗಾಗಿ ಈ ಕಾಂಬಿನೇಶನ್ ವರ್ಕ್ ಆಗುವುದಿಲ್ಲ.
undefined
click me!