ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ. ಅತ್ಯಂತ ನಂಬಿಕಾರ್ಯ ಜೀವಿ. ಅನ್ನ ಹಾಕಿದವನ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸುತ್ತದೆ. ಹಾಗಾಗಿಯೇ ವೈದ್ಯರು, ವಿಶೇಷವಾಗಿ ಅತಿಯಾದ ದುಃಖ, ಆತಂಕ ಅಥವಾ ಖಿನ್ನತೆಗೆ ಒಳಗಾದ ಜನರಿಗೆ ಸಾಕುಪ್ರಾಣಿಗಳನ್ನು ಚಿಕಿತ್ಸೆಯಾಗಿ ಇರಿಸಿಕೊಳ್ಳಲು ಸೂಚಿಸುತ್ತಾರೆ. ನಾಯಿಗಳು ವ್ಯಕ್ತಿಯನ್ನು ಒತ್ತಡದಿಂದ ದೂರಾಗಿಸಿ ಹೃದಯದ ಆರೋಗ್ಯ ಕಾಪಾಡುತ್ತವೆ ಎಂಬುದು ಅಧ್ಯಯನಗಳಲ್ಲಿ ಸಾಬೀತಾಗಿದೆ. ಹೀಗೆ ಮನುಷ್ಯನ ಜೀವನದಲ್ಲಿ ಅತಿ ಪ್ರಮುಖ ಪಾತ್ರ ಹೊಂದಿರುವ ಈ ನಾಯಿಗಳು ಜ್ಯೋತಿಷ್ಯದಲ್ಲೂ ಸ್ಥಾನಮಾನ ಹೊಂದಿವೆ ಎಂಬುದು ನಿಮಗೆ ತಿಳಿದಿದೆಯೇ?
ಹೌದು, ಜ್ಯೋತಿಷ್ಯದಲ್ಲಿ ನಾಯಿಗಳನ್ನು ಸಾಕಲು ಪ್ರೇರೇಪಿಸಲಾಗುತ್ತದೆ. ಅವು ಸಾಕುವವನ ಹಲವು ಗ್ರಹ ದೋಷ ನಿವಾರಣೆ ಜೊತೆಗೆ ಆತನ ಮನೆಗೆ ಸಂಪತ್ತು ತರುತ್ತವೆ ಎಂಬ ವಿವರಣೆಗಳಿವೆ.