ಕೆಲವು ಜನರು ತಮ್ಮ ವಿನಮ್ರ ವರ್ತನೆ ಮತ್ತು ಸಕಾರಾತ್ಮಕ ಮನೋಭಾವದಿಂದ ಎಲ್ಲರ ಹೃದಯವನ್ನು ಗೆದ್ದರೆ, ಇತರರು ತಮ್ಮ ನಕಾರಾತ್ಮಕ ಮನೋಭಾವದಿಂದಾಗಿ ಗಮನಾರ್ಹ ಸಾಧ್ಯತೆಗಳನ್ನು ಕಳೆದುಕೊಳ್ಳುತ್ತಾರೆ. ಅವರು ಗಮನಾರ್ಹವಾದ ನಷ್ಟವನ್ನು ಅನುಭವಿಸುತ್ತಿದ್ದರೂ ತಮ್ಮ ವರ್ತನೆಯಲ್ಲಿ ಏನಾದರೂ ತಪ್ಪಿರಬಹುದು ಎಂದು ತಿಳಿಯುವುದಿಲ್ಲ. ಅವರ ಅಹಂ, ಹೆಮ್ಮೆ, ಸ್ವಾರ್ಥ ಮನೋಭಾವ, ಯಾರಿಗೂ ಕೇರ್ ಮಾಡದ ವರ್ತನೆ, ತಾವು ಹೇಳಿದ್ದೇ ಸರಿ ಎಂಬ ಭಾವ, ತಾವು ಹೇಳಿದ್ದೇ ನಡೆಯಬೇಕೆನ್ನೋ ಹಟ ಇವನ್ನೆಲ್ಲ ಜೊತೆಗಿರುವವರು ತಡೆದುಕೊಳ್ಳೋದು ಕಷ್ಟ. ಇಂಥ ಕೆಟ್ಟ ಮನೋಭಾವದವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?
ಮೇಷ ರಾಶಿ(Aries)
ಮೇಷ ರಾಶಿಯವರು ಒರಟು ಸ್ವಭಾವದವರು. ಅವರ ಟೀಕೆಗಳಿಂದ ಇತರರನ್ನು ಗಾಯಗೊಳಿಸುವುದಕ್ಕೆ ಅಥವಾ ಮತ್ತೊಬ್ಬರನ್ನು ನೋಯಿಸುವುದಕ್ಕೆ ಯಾವುದೇ ಹಿಂಜರಿಕೆಯನ್ನು ಹೊಂದಿರುವುದಿಲ್ಲ. ಈ ಸ್ವಭಾವವೇ ಅವರಿಗೆ ಅಧಿಕಾರ ಮತ್ತು ಶಕ್ತಿಯ ಪ್ರಜ್ಞೆಯನ್ನು ನೀಡುತ್ತದೆ. ಅವರು ಆಗಾಗ್ಗೆ ತಮ್ಮ ಅಹಂಕಾರವನ್ನು ಪೋಷಿಸುವ ವಿಧಾನಗಳನ್ನು ಹುಡುಕುತ್ತಾರೆ ಮತ್ತು ಅವುಗಳನ್ನು ಮುಖ್ಯವೆಂದು ಭಾವಿಸುತ್ತಾರೆ. ಅವರ ನಕಾರಾತ್ಮಕ ಮನೋಭಾವವನ್ನು ಅವರ ಸುತ್ತಲಿರುವ ಪ್ರತಿಯೊಬ್ಬರೂ ಆಗಾಗ್ಗೆ ಚರ್ಚಿಸುತ್ತಾರೆ.
ಕನ್ಯಾ ರಾಶಿ(Virgo)
ಕಠೋರ ಟೀಕೆಗಳು ಮತ್ತು ಅಸಹ್ಯವಾಗಿ ಕೂಗಾಡುವ ಮೂಲಕ ಕನ್ಯಾ ರಾಶಿಯವರು ಇತರರಿಗೆ ಹಾನಿ ಮಾಡಬಹುದು. ಅವರು ತಮ್ಮದು ಯಾವತ್ತಿಗೂ ಸರಿಯೇ ಎಂದು ಭಾವಿಸುತ್ತಾರೆ. ಅವರು ತಮ್ಮ ಅಸಮಾಧಾನವನ್ನು ಬೇಕಾಬಿಟ್ಟಿ ವ್ಯಕ್ತಪಡಿಸುತ್ತಾರೆ.
ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ಅಹಂಕಾರಿ ವ್ಯಕ್ತಿಗಳು. ಅವರು ತಮ್ಮ ಶಕ್ತಿ, ಆಕರ್ಷಣೆ, ಸ್ಥಾನ, ಹಣ ಅಥವಾ ಕುಶಲತೆಯನ್ನು ಇತರರನ್ನು ಬೆದರಿಸುವ ಮಟ್ಟಕ್ಕೆ ಪ್ರದರ್ಶಿಸುತ್ತಾರೆ. ಇದರ ಪರಿಣಾಮವಾಗಿ ಅವರು ಸಂತೋಷವನ್ನು ಅನುಭವಿಸುತ್ತಾರೆ. ಸ್ಕಾರ್ಪಿಯನ್ನರು ಜನರಿಗೆ ಅಹಿತಕರವೆಂದು ಹೆಸರುವಾಸಿಯಾಗಿದ್ದಾರೆ. ಸಾಮಾನ್ಯವಾಗಿ ಅವರಿಗೆ ಗೆಳೆಯರು ಕಡಿಮೆಯೇ.
ಧನು ರಾಶಿ(Sagittarius)
ಧನು ರಾಶಿಯು ನಕಾರಾತ್ಮಕ ಮನೋಭಾವ ಹೊಂದಲು ಹೆಸರುವಾಸಿಯಾಗಿದೆ. ಅವರು ತಮ್ಮ ಕೃತ್ಯಗಳ ಪರಿಣಾಮಗಳನ್ನು ಅರಿತುಕೊಳ್ಳದಿದ್ದರೂ, ಆಗಾಗ್ಗೆ ಇತರರ ಸ್ವಾಭಿಮಾನಕ್ಕೆ ಹಾನಿ ಮಾಡುತ್ತಾರೆ. ಅವರು ಎಲ್ಲರಿಗಿಂತ ಉತ್ತಮರು ಮತ್ತು ಯಾರೂ ತಮ್ಮನ್ನು ಮೀರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ.
ಈ 3 ರಾಶಿಚಕ್ರಗಳು ಉತ್ತಮ ಮನೋಭಾವ ಹೊಂದಿವೆ..
ಆತ್ಮವಿಶ್ವಾಸ, ಮೋಡಿ, ನಮ್ರತೆ ಮತ್ತು ಸಹಾನುಭೂತಿ ಇವೆಲ್ಲವೂ ಜನರು ಮೆಚ್ಚುವ ಗುಣಗಳು. ಕೌಶಲ್ಯ ಮತ್ತು ಆತ್ಮವಿಶ್ವಾಸ ಎರಡನ್ನೂ ಹೊಂದಿರುವ ವ್ಯಕ್ತಿಯನ್ನು ಕಾಣುವುದು ಅಪರೂಪ. ಜೊತೆಗೆ ಇತರರಿಗೆ ಒಳ್ಳೆಯವರಾಗಿದ್ದರಂತೂ ಅವರದೇ ಅತ್ಯುತ್ತಮ ವ್ಯಕ್ತಿತ್ವ. ಎಲ್ಲಾ ಉತ್ತಮ ವ್ಯಕ್ತಿತ್ವದ ಗುಣಗಳು ಒಬ್ಬರಲ್ಲೇ ಇರುವುದು ಕಷ್ಟಕರವಾಗಿದ್ದರೂ, ಜ್ಯೋತಿಷ್ಯದ ಪ್ರಕಾರ, ಉತ್ತಮ ಮನೋಭಾವವನ್ನು ಹೊಂದಿರುವ ಮತ್ತು ಹೆಚ್ಚಿನ ಸಕಾರಾತ್ಮಕ ವ್ಯಕ್ತಿತ್ವ ಗುಣಲಕ್ಷಣಗಳನ್ನು ಹೊಂದಿರುವ ಆಯ್ದ ರಾಶಿಚಕ್ರ ಚಿಹ್ನೆಗಳು ಇವೆ.
ಸಿಂಹ ರಾಶಿ(Leo)
ಸಿಂಹ ರಾಶಿಯವರು ತಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಗೂ ತಮ್ಮ ಆಕರ್ಷಣೆಯನ್ನು ಹರಡುವ ಸಾಮರ್ಥ್ಯ ಹೊಂದಿದ್ದಾರೆ. ಸಿಂಹ ರಾಶಿಯವರು ಕೆಲವರಿಗೆ ಅಹಂಕಾರಿಯಾಗಿ ಕಾಣಿಸಬಹುದು, ಆದರೆ ಅವರು ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಅತ್ಯಂತ ವಿನಯಶೀಲರಾಗಿದ್ದಾರೆ. ಅವರು ಹುಟ್ಟು ನಾಯಕರಾಗಿದ್ದರೂ, ಅವರ ಅಧಿಕಾರ ಮತ್ತು ಶಕ್ತಿ ಅವರ ಮೆದುಳಿಗೆ ಎಂದಿಗೂ ಏರುವುದಿಲ್ಲ. ಅವರು ಸಾಮಾನ್ಯವಾಗಿ ಸಭ್ಯ ಮತ್ತು ಸಾಧಾರಣವಾಗಿ ತೋರುತ್ತಾರೆ. ಅವರು ಕೊಡುವವರು. ಕ್ಷಮೆ ಯಾಚಿಸುವುದು ಸಂಬಂಧವನ್ನು ಉಳಿಸುತ್ತದಾದರೆ, ಅವರು ಹಾಗೆ ಮಾಡಲು ಸಿದ್ಧರಿರುವವರು. ಅವರು ಅತ್ಯಂತ ಸಕಾರಾತ್ಮಕ ಮನೋಭಾವ ಮತ್ತು ಬಹಳಷ್ಟು ಮಾನವೀಯತೆ ಹೊಂದಿದ್ದಾರೆ.
ಕುಂಭ ರಾಶಿ(Aquarius)
ಕುಂಭ ಸಹ ಅತ್ಯಂತ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಚಿಹ್ನೆ. ಇರು ಜನರನ್ನು ಸರಿಯಾಗಿ ಮೌಲ್ಯೀಕರಿಸುತ್ತಾರೆ. ಇತರರಿಗೆ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತಾರೆ. ಕುಂಭ ರಾಶಿಯವರು ಯಾರಿಗಾದರೂ ಉದ್ದೇಶಪೂರ್ವಕವಾಗಿ ಹಾನಿ ಮಾಡಲಾರರು, ಆದರೆ ಅವರ ಪ್ರಾಮಾಣಿಕತೆಯನ್ನು ಎಲ್ಲರೂ ಮೆಚ್ಚದಿರಬಹುದು. ಏಕೆಂದರೆ, ಅವರು ತಮ್ಮನ್ನು ತಾವು ಹೆಚ್ಚು ವ್ಯಕ್ತಪಡಿಸುವುದಿಲ್ಲ ಮತ್ತು ಸಾಮಾನ್ಯವಾಗಿ ಜನರ ಬೆನ್ನಿನ ಹಿಂದೆ ಅವರು ಸಾಧ್ಯವಿರುವ ರೀತಿಯಲ್ಲಿ ಜನರಿಗೆ ಸಹಾಯ ಮಾಡುವಲ್ಲಿ ನಿರತರಾಗಿರುತ್ತಾರೆ.
ಮೀನ ರಾಶಿ(Pisces)
ಮೀನ ರಾಶಿಯವರು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಬಹಳ ಜನರಿಂದ ಸುತ್ತುವರೆದಿರುವಾಗ, ಅವರು ಹೆಚ್ಚು ಉನ್ನತ ಸ್ಥಾನದಲ್ಲಿದ್ದರೂ ಸಹ, ದಯೆಯಿಂದ ವರ್ತಿಸುತ್ತಾರೆ. ಮೀನ ರಾಶಿಯವರು ತಮ್ಮ ಸಾಧನೆಗಳ ಬಗ್ಗೆ ಎಂದಿಗೂ ಹೆಮ್ಮೆ ಪಡುವುದಿಲ್ಲ, ಆದರೆ ಅವರು ಇತರರನ್ನು ತಾವು ಹೇಗೆ ಗೌರವಿಸಬೇಕೆಂದು ತಿಳಿದಿದ್ದಾರೆ.