Published : Apr 15, 2023, 05:03 PM ISTUpdated : Apr 15, 2023, 06:05 PM IST
ಗ್ರಹಗಳ ಚಲನೆಯು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಕೊಡುಗೆ ನೀಡುತ್ತೆ. ಗ್ರಹ-ನಕ್ಷತ್ರಪುಂಜದ ಚಲನೆಯ ಪ್ರಕಾರ, ರಾಶಿಗಳಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಈ ಬಾರಿ ಮೇಷ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ, ಈ ರಾಶಿಗಳು ಅದ್ಭುತ ಪ್ರಯೋಜನಗಳನ್ನು ಹೊಂದಲಿವೆ, ನೀವು ಸಹ ಪ್ರಯೋಜನ ಪಡೆಯುತ್ತೀರಾ ಎಂದು ನೋಡಿಕೊಳ್ಳಿ
ಏಪ್ರಿಲ್ 20 ರಂದು, ವರ್ಷದ ಮೊದಲ ಸೂರ್ಯ ಗ್ರಹಣ (Solar eclipse) ಸಂಭವಿಸಲಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳಲ್ಲೂ ಕಂಡುಬರಲಿದೆ. ಈ ಸೂರ್ಯಗ್ರಹಣದ ನಂತರ, ಕೆಲವು ರಾಶಿಗಳಲ್ಲಿ ಸಕರಾತ್ಮಕ ಪರಿಣಾಮಗಳನ್ನು ಕಾಣಬಹುದು. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
28
ಮಿಥುನ ರಾಶಿ
ಮಿಥುನ ರಾಶಿಯ ಜನ ಯಾವುದೋ ಕೆಲಸವನ್ನು ಆರಂಭಿಸಿದ್ದು, ಅದು ಸ್ಥಗಿತಗೊಂಡಿದ್ದರೆ, ಆ ಕೆಲಸವನ್ನು(Work) ಪೂರ್ಣಗೊಳಿಸಬಹುದು. ಕೆಲಸದ ಕ್ಷೇತ್ರದಲ್ಲಿ ಮಿಥುನ ರಾಶಿಯ ಜನರು ಗೌರವವನ್ನು ಪಡೆಯುತ್ತಾರೆ. ಪ್ರಯಾಣದಿಂದ ಲಾಭ ಪಡೆಯುವ ಸಾಧ್ಯತೆಗಳಿವೆ.
38
ಮಿಥುನ ರಾಶಿಯವರ ಆದಾಯ(Income) ಹೆಚ್ಚಾಗುವ ಸಾಧ್ಯತೆ ಇದೆ. ಇವರು ಮಾಡಿದ ಕೆಲಸವನ್ನು ಪ್ರಶಂಸಿಸಲಾಗುವುದು. ಮಿಥುನ ರಾಶಿಯವರು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕೆಲಸ ಮತ್ತು ವ್ಯವಹಾರಕ್ಕೆ ಇದು ಉತ್ತಮ ಸಮಯ.
48
ಸಿಂಹ ರಾಶಿ(Leo)
ಈ ಸಮಯದಲ್ಲಿ, ಸಿಂಹ ರಾಶಿಯವರಿಗೆ ಕೆಲಸದಲ್ಲಿ ಬಡ್ತಿ ಸಿಗಲಿದೆ. ಗೌರವ ಹೆಚ್ಚಾಗಬಹುದು. ಈ ರಾಶಿಯವರು ವಾಹನವನ್ನು ಖರೀದಿಸಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಿಂಹ ರಾಶಿಯವರ ವೈವಾಹಿಕ ಜೀವನವು ಸಂತೋಷಕರವಾಗಿರಲಿದೆ. ಈ ರಾಶಿಯವರು ಕುಟುಂಬ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುವಿರಿ. ಇವರಿಗೆ ವ್ಯವಹಾರದಿಂದ ಲಾಭವಾಗಲಿದೆ.
58
ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಆದಾಯದ ಹೆಚ್ಚಳವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬಹುದು. ಈ ರಾಶಿಯವರು ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ, ಇದು ವೈವಾಹಿಕ ಜೀವನವನ್ನು ಸಂತೋಷಗೊಳಿಸುತ್ತೆ.
68
ಈ ಸಮಯವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವರದಾನಕ್ಕಿಂತ ಕಡಿಮೆಯೇನಿಲ್ಲ. ಈ ಅವಧಿಯಲ್ಲಿ ಹೂಡಿಕೆ ಮಾಡುವುದು ವೃಶ್ಚಿಕ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಹೂಡಿಕೆಯಿಂದ(Investment) ಹೆಚ್ಚಿನ ಲಾಭ ಪಡೆಯುವಿರಿ. ಅಷ್ಟೆ ಅಲ್ಲದೇ ಆರೋಗ್ಯ ಉತ್ತಮವಾಗಿರಲಿದೆ.
78
ಈ ಸಮಯದಲ್ಲಿ ಮೇಲೆ ತಿಳಿಸಿದ ಎಲ್ಲಾ ರಾಶಿಯವರು ಉತ್ತಮ ಫಲಿತಾಂಶಗಳನ್ನು(Result) ಪಡೆಯುತ್ತಾರೆ. ಈ ಸಮಯದಲ್ಲಿ, ಕೆಲಸದಲ್ಲಿ ಬಡ್ತಿ ಪಡೆಯುತ್ತಾರೆ. ಇವರು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವ್ಯಾಪಾರಿಗಳು ಲಾಭ ಗಳಿಸಬಹುದು.
88
ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಇವರಿಗೆ ಅವಕಾಶವಿದೆ. ಲಾಭ ಮತ್ತು ಹಣ(Money) ಸಿಗಲಿದೆ, ಇದು ಆರ್ಥಿಕ ಭಾಗವನ್ನು ಬಲಪಡಿಸುತ್ತೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಶುಭವೆಂದು ಹೇಳಬಹುದು.