ಈ ಜನರು ಸೂರ್ಯಗ್ರಹಣವನ್ನು ನೋಡಬಾರದು
ಈ ಸೂರ್ಯಗ್ರಹಣವು ತುಲಾ ಮತ್ತು ಸ್ವಾತಿ ನಕ್ಷತ್ರದಲ್ಲಿ ಸಂಭವಿಸುತ್ತಿದೆ. ಈ ಕಾರಣದಿಂದಾಗಿ, ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಜನರು ಈ ಸೂರ್ಯಗ್ರಹಣವನ್ನು ನೋಡಬಾರದು. ಅಮಾವಾಸ್ಯೆ(Amavasye) ತಿಥಿಯಂದು ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತೆ, ಇದನ್ನು ಕಂಕಣ ಸೂರ್ಯಗ್ರಹಣ ಎಂದೂ ಕರೆಯಲಾಗುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಂತಹ ಗ್ರಹಣದಲ್ಲಿ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು ಹೆಚ್ಚಾಗಿರುತ್ತೆ, ಸೂರ್ಯನ ಬೆಳಕು ಭೂಮಿಯನ್ನು ತಲುಪುವ ಮೊದಲು, ಚಂದ್ರನು ಮಧ್ಯದಲ್ಲಿ ಬರುತ್ತಾನೆ, ಇದರಿಂದಾಗಿ ಸೂರ್ಯನ ಕೆಲವು ಭಾಗವು ಮಾತ್ರ ಗೋಚರಿಸುತ್ತೆ.