ಇಡಗುಂಜಿ ದ್ವಭುಜ ವಿನಾಯಕ ಮಹಿಮೆ ಅಪಾರ!

Suvarna News   | Asianet News
Published : Aug 22, 2020, 11:24 AM IST

ಇಡಗುಂಜಿ ವಿನಾಯಕ ದೇವಾಲಯ ಭಕ್ತರ ಶೃದ್ಧೆ, ಭಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದು. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ನೆರವೇರಿಸುತ್ತಾರೆ.

PREV
17
ಇಡಗುಂಜಿ ದ್ವಭುಜ ವಿನಾಯಕ ಮಹಿಮೆ ಅಪಾರ!

ಇಡಗುಂಜಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿದೆ. ಪ್ರತಿ ದಿನ ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

27

ಹರಕೆ ಹೊತ್ತ ಭಕ್ತರ ಬೇಡಿಕೆಗಳು ಅತಿ ಶೀಘ್ರವಾಗಿ ಈಡೇರುತ್ತವೆ ಎಂಬ ಪ್ರತೀತಿ ಇದೆ. ಅದರಲ್ಲೂ ಬಹುತೇಕ ಭಕ್ತರು ಇಲ್ಲಿ ಗಣಹವನ ನೆರವೇರಿಸುತ್ತಾರೆ. ಯಾವುದೆ ಮಹತ್ವದ ಕೆಲಸ ಕಾರ್ಯಗಳಿಗಾಗಿ, ವಿವಾಹಕ್ಕಾಗಿ ದೇವರಲ್ಲಿ ಪ್ರಸಾದ ಕೇಳಲಾಗುತ್ತದೆ.

37

ದ್ವಿಭುಜ ಗಣಪತಿ ಇಲ್ಲಿಯ ವಿಶೇಷ. ಗಣಪತಿ ಮೂರ್ತಿ 88 ಸೆಂ.ಮೀ. ಎತ್ತರ, 59 ಸೆಂ.ಮೀ.ಅಗಲ ಇದೆ.

47

ಪೌರಾಣಿಕ ಹಿನ್ನೆಲೆ: ತಪಸ್ಸಿಗೆ ರಾಕ್ಷಸರಿಂದ ಭಂಗ ಉಂಟಾಗುತ್ತಿರುವುದರಿಂದ ವಾಲಖಿಲ್ಯ ಮುನಿಗಳು ನಾರದರಲ್ಲಿ ನಿವೇದಿಸಿಕೊಂಡಾಗ ನಾರದರು ಪಾರ್ವತಿದೇವಿಯಲ್ಲಿ ಬಾಲ ಗಣಪನನ್ನು ಕಳುಹಿಸುವಂತೆ ಕೋರಿದಾಗ ಪಾರ್ವತಿ ಬಾಲ ಗಣಪನನ್ನು ಕಳುಹಿಸುತ್ತಾಳೆ.

57

ಹೀಗೆ ಬಾಲ ಗಣಪ ಇಡಗುಂಜಿಯಲ್ಲಿ ನೆಲೆಯಾಗುತ್ತಾನೆ. ಮುನಿಗಳ ತಪ್ಪಸ್ಸು ನಿರ್ವಿಘ್ನವಾಗಿ ಮುಂದುವರಿಯುತ್ತದೆ. 1500 ವರ್ಷಗಳ ಇತಿಹಾಸ ಈ ದೇವಾಲಯಕ್ಕಿದೆ.

67

ಹೊನ್ನಾವರದಿಂದ 15 ಕಿ.ಮೀ., ಭಟ್ಕಳದಿಂದ 32 ಕಿ.ಮೀ. ದೂರ ಇದೆ ಇಡಗುಂಜಿ. ಬಸ್‌ ಸಂಚಾರ ಇದೆ. ಸಮೀಪದಲ್ಲಿ ಹೊನ್ನಾವರ, ಮುರ್ಡೇಶ್ವರ ರೈಲು ನಿಲ್ದಾಣ ಇದೆ.

77

 ಇಲ್ಲಿ ಪ್ರಸಾದದ ರೂಪದಲ್ಲಿ ಭೋಜನ ದೊರೆಯುತ್ತದೆ. ಮುಂಗಡ ಬುಕಿಂಗ್‌ ಮಾಡಿದಲ್ಲಿ ವಾಸ್ತವ್ಯಕ್ಕೂ ಅವಕಾಶ ಇದೆ.

click me!

Recommended Stories