ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ಸುಮಾರು 11 ಅಡಿ ಉದ್ದ ಹಾಗೂ 18 ಅಡಿ ಅಗಲದ ಗಣೇಶ ವಿಗ್ರಹ ಇರುವ ಈ ದೇವಾಲಯವನ್ನು ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಕ್ರಿ.ಶ.1536ರಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ ನಿರ್ಮಿಸಿದರೆಂದು ಹೇಳಲಾಗಿದೆ.
ಶಂಖ, ಚಕ್ರ, ಮುರಿದ ದಂತ ಮತ್ತು ಪ್ರಸಾದವನ್ನು ಹಿಡಿದುಕೊಂಡಿರುವ ಚತುರ್ಭುಜ ಗಣಪತಿ ವಿಗ್ರಹವನ್ನು ಆಕರ್ಷಕವಾಗಿ ಕೆತ್ತಲಾಗಿದೆ.
ಈ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಬಸವನಗುಡಿ ದೇವಾಲಯದಲ್ಲಿ ಪ್ರತಿ ವರ್ಷ ಇತಿಹಾಸ ಪ್ರಸಿದ್ಧ ಕಡಲೇಕಾಯಿ ಪರಿಷೆ ಮಾಡಲಾಗುತ್ತದೆ.
ಈ ಪರಿಷೆ ಆರಂಭದ ದಿನ ಈ ದೊಡ್ಡಗಣಪತಿಗೂ ಕಡಲೆಕಾಯಿ ಅಭಿಷೇಕ ನೆರವೇರಿಸಲಾಗುತ್ತದೆ. ಅಂತೆಯೆ ಇದೊಂದು ಪ್ರೇಕ್ಷಣಿಯ ಸ್ಥಳವಾಗಿದ್ದು, ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.
ದಾರಿ- ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್‌ನಿಂದ 4.5 ಕಿ.ಮೀ. ದೂರದಲ್ಲಿದೆ. ಬಸವನಗುಡಿ, ರಾಮಕೃಷ್ಣ ಆಶ್ರಮ, ಹನುಮಂತನಗರ, ಗಾಂಧಿ ಬಜಾರ್, ತ್ಯಾಗರಾಜನಗರ, ಎನ್.ಆರ್.ಕಾಲೋನಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಿಗೆ ಈ ದೇವಾಲಯ ಸಮೀಪದಲ್ಲಿದೆ.