ದೇವಸ್ಥಾನದಿಂದ ಹೊರಗೆ ಹೋಗುವಾಗಲೂ ಗಂಟೆ ಬಾರಿಸಬೇಕೇ? ಬೇಡವೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ನಿಮ್ಮ ಮನಸಿನಲ್ಲೂ ಆ ಪ್ರಶ್ನೆ ಇದೆಯೇ? ಹಾಗಿದ್ರೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ (temple) ಹೋದಾಗ, ಮೊದಲು ಗಂಟೆ ಬಾರಿಸುತ್ತೇವೆ, ನಂತರ ದೇವ ಮುಂದೆ ನಿಂತು ಕೈ ಮುಗಿದು ಬೇಡಿಕೊಳ್ಳುತ್ತೇವೆ. ಇದರಿಂದ ದೇವರು ನಮ್ಮ ಪ್ರಾರ್ಥನೆಯನ್ನು ಬೇಗನೆ ಕೇಳಿಸಿಕೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ.
26
ದೇವಸ್ಥಾನ ಪ್ರವೇಶಿಸುವಾಗ ಗಂಟೆ ಬಾರಿಸಬೇಕು (ring bell) ಅನ್ನೋದು ನಿಜಾ. ಆದರೆ ದೇವಸ್ಥಾನದಿಂದ ಹೊರ ಬರುವಾಗ ಗಂಟೆ ಬಾರಿಸಬೇಕೇ? ದೇವಾಲಯದಲ್ಲಿ ಗಂಟೆ ಬಾರಿಸುವುದಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಮತ್ತೊಂದು ನಿಯಮವಿದೆ. ಅದರ ಬಗ್ಗೆ ಮಾಹಿತಿ ತಿಳಿಯೋಣ.
36
ವಾಸ್ತು ಶಾಸ್ತ್ರದ ಪ್ರಕಾರ, ದೇವಸ್ಥಾನದಿಂದ ಹೊರಡುವಾಗ ಗಂಟೆ ಬಾರಿಸಬಾರದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಏಕೆ ಗೊತ್ತಾ? ದೇವಸ್ಥಾನದ ಗಂಟೆ ಬಾರಿಸಿದಾಗಲೆಲ್ಲಾ, ಗಂಟೆ ಬಾರಿಸುವ ವ್ಯಕ್ತಿಗೆ ಮತ್ತು ಅದರ ಸುತ್ತಲಿನ ಜನರಿಗೆ ಶಕ್ತಿಯು ವರ್ಗಾವಣೆಯಾಗುತ್ತದೆ.
ದೇವಸ್ಥಾನದ ಗಂಟೆ ಬಾರಿಸಿದಾಗ, ಅದು 'ಓಂ' ಎಂಬ ಶಬ್ದವನ್ನು ಹೊರಸೂಸುತ್ತದೆ. ಆ ಕಂಪನದಿಂದ ಪಾಸಿಟಿವ್ ಎನರ್ಜಿ (positive energy) ಸೃಷ್ಟಿ ಆಗುತ್ತದೆ ಜೊತೆಗೆ ನಮ್ಮ ಮನಸನ್ನು ಜಾಗೃತಗೊಳಿಸುತ್ತೆ ಅನ್ನೋದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ.
56
ಅಷ್ಟೇ ಅಲ್ಲ ದೇವಾಲಯದಲ್ಲಿ ಗಂಟೆ ಬಾರಿಸುವುದರಿಂದ ವಾತಾವರಣದಲ್ಲಿ ಬಲವಾದ ಕಂಪನಗಳು ಉಂಟಾಗುತ್ತವೆ, ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ನಾಶವಾಗುತ್ತವೆ.
66
ವಾಸ್ತು ಶಾಸ್ತ್ರದ ಪ್ರಕಾರ, ನೀವು ದೇವಸ್ಥಾನದಿಂದ ಹೊರಡುವಾಗ ಗಂಟೆ ಬಾರಿಸಬಾರದು. ಹೀಗೆ ಮಾಡುವುದರಿಂದ ನೀವು ದೇವಾಲಯದ ಸಕಾರಾತ್ಮಕ ಶಕ್ತಿಯನ್ನು ಅಲ್ಲಿಯೇ ಬಿಡುತ್ತೀರಿ. ಆದ್ದರಿಂದ, ದೇವಸ್ಥಾನದಿಂದ ಹೊರಡುವಾಗ ಗಂಟೆ ಬಾರಿಸುವ ತಪ್ಪು ಮಾಡಬಾರದು.