ಈ ವಸ್ತುಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ !

First Published | Dec 31, 2021, 9:14 AM IST

ಒಬ್ಬರಿಗೊಬ್ಬರು ಸಹಾಯ ಮಾಡುವುದು, ತೊಂದರೆಯಲ್ಲಿರುವ ಯಾರನ್ನಾದರೂ ಬೆಂಬಲಿಸುವುದು ಒಳ್ಳೆಯದು. ಆದರೆ ಕೆಲವೊಂದು ವಸ್ತುಗಳನ್ನು ಇತರರೊಂದಿಗೆ ಹಂಚಿಕೊಂಡರೆ ತೊಂದರೆಯನ್ನು ಎದುರಿಸುವಂತಹ ಸಂದರ್ಭಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ. 

ವಾಸ್ತವವಾಗಿ, ಶಾಸ್ತ್ರಗಳು ಕೆಲವು ನಿಯಮಗಳನ್ನು ಒದಗಿಸುತ್ತವೆ ಮತ್ತು ಕೆಲವು ವಿಷಯಗಳನ್ನು ಇತರರಿಗೆ ನೀಡಲು ನಿರಾಕರಿಸುತ್ತವೆ. ಈ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು  ಹಣ ನಷ್ಟ (money problem) ಮತ್ತು ಅನಗತ್ಯ ಕಷ್ಟಗಳಿಗೆ (problems) ಕಾರಣವಾಗುತ್ತದೆ. 
 

ಬಾಚಣಿಗೆ (comb)
ಬಾಚಣಿಗೆಗಳು ಮನೆಗೆ ಬೇಕೇ ಬೇಕು. ತುಂಬಾ ಸಾಮಾನ್ಯವಾಗಿ ಒಂದೇ ಬಾಚಣಿಗೆಯನ್ನು ಮನೆಗಳಲ್ಲಿ ಕುಟುಂಬದ ಅನೇಕ ಸದಸ್ಯರು ಬಳಸುತ್ತಾರೆ. ಮನೆಗೆ ಬರುವ ಅತಿಥಿಗಳು ಅಥವಾ ನಿಕಟವರ್ತಿಗಳು ಸಹ ಅವುಗಳನ್ನು ಬಳಸುತ್ತಾರೆ. ಹೀಗೆ ಮಾಡುವುದು ಕೂದಲಿನ ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ, ವಾಸ್ತವವಾಗಿ ಅಶುಭವೆಂದು ಪರಿಗಣಿಸಲಾಗುತ್ತದೆ. 

Tap to resize

ಬಟ್ಟೆಗಳು (clothes)
ಅನೇಕ ಮನೆಗಳಲ್ಲಿ, ಕುಟುಂಬ ಸದಸ್ಯರು ಅಥವಾ ಸಂಬಂಧಿಕರು ಪರಸ್ಪರರ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಹಾಗೆ ಮಾಡುವುದು ದುರದೃಷ್ಟಕರ ಎಂದು ಕರೆಯಲಾಗುತ್ತದೆ. ಇದು ಭಾಗ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಅಲರ್ಜಿಯಂತಹ (allergy) ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. 

ವೆಡ್ಡಿಂಗ್ ರಿಂಗ್ (wedding ring)
ನಿಮ್ಮ ಮದುವೆಯ ಉಂಗುರವನ್ನು ಬೇರೆಯವರು ಅಪ್ಪಿ ತಪ್ಪಿಯೂ ಧರಿಸಲು ಎಂದಿಗೂ ಬಿಡಬೇಡಿ. ಜೊತೆಗೆ , ಮಹಿಳೆಯರು ತಮ್ಮ ಸೌಭಾಗ್ಯದ ಚಿಹ್ನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಿಡದಿರಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿ ತೊಂದರೆಗಳು ತರುತ್ತವೆ. 

ವಾಚ್  (watch)
ಇತರರ ಕೈಗಡಿಯಾರಗಳನ್ನು ಧರಿಸುವುದು ಅಥವಾ ಇತರರಿಗೆ ಧರಿಸಲು ನಿಮ್ಮ ಗಡಿಯಾರವನ್ನು ನೀಡುವುದು ನಿಮ್ಮ ವೃತ್ತಿಜೀವನದಲ್ಲಿ ಕೆಟ್ಟ ವಿಷಯಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ಕೆಲಸವನ್ನು ಮಾಡುವುದನ್ನು ತಪ್ಪಿಸಿ. 

ಪಾದರಕ್ಷೆಗಳು 
ಶೂ ಮತ್ತು ಚಪ್ಪಲಿಗಳು ಶನಿಗೆ ಸಂಬಂಧಿಸಿವೆ. ಪರಸ್ಪರರ ಶೂ, ಚಪ್ಪಲಿ ಧರಿಸುವುದರಿಂದ ಶನಿ ದೋಷದ ಅನುಭವವಾಗುತ್ತದೆ ಮತ್ತು ಶನಿಯ ದೋಷವು ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತದೆ. 

Latest Videos

click me!