Plants And Luck : ಮನೆಯಲ್ಲಿ ಯಾವ ಸಸ್ಯಗಳನ್ನು ನೆಡುವುದು ಅಶುಭ ಎಂದು ತಿಳಿಯಿರಿ

First Published Dec 28, 2021, 11:09 AM IST

ಮನೆಯಲ್ಲಿ ಗಿಡ, ಮರಗಳನ್ನು ನೆಡುವುದು ಅನೇಕರಿಗೆ ಇಷ್ಟ. ಕೆಲವರು 2-4 ಗಿಡಗಳನ್ನು ನೆಟ್ಟು ಖುಷಿಪಟ್ಟರೆ, ಇನ್ನು ಕೆಲವರು ಮನೆಯಲ್ಲಿ ಇಡೀ ತೋಟವನ್ನು ಮಾಡುತ್ತಾರೆ. ಆದರೆ ಕೆಲವು ಗಿಡಗಳನ್ನು ಮನೆಯಲ್ಲಿ ನೆಡುವುದರಿಂದ ಸಮಸ್ಯೆಗಳು ಉಂಟಾಗಬಹುದು ಅನ್ನೋದು ನಿಮಗೆ ತಿಳಿದಿದೆಯೇ? 

ಮನೆಯಲ್ಲಿ ಎಷ್ಟೇ ಗಿಡಗಳಿದ್ದರೂ ಅವುಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಏಕೆಂದರೆ ಕೆಲವು ಸಸ್ಯಗಳನ್ನು ಮನೆಯಲ್ಲಿ ನೆಡುವುದು ತುಂಬಾ ಅಶುಭವೆಂದು (bad luck ) ಪರಿಗಣಿಸಲಾಗುತ್ತದೆ. ಈ ಗಿಡಗಳನ್ನು ಮನೆಯಲ್ಲಿ ನೆಡುವುದು ನಿಮಗೆ ನೀವೇ ತೊಂದರೆ ಬರಮಾಡಿಕೊಂಡಂತೆ.

ಹಾಲು ಬರುವ ಸಸ್ಯಗಳು (milk producing plants)
ಎಲೆಗಳು ಅಥವಾ ಕಾಂಡಗಳಿಂದ ಹಾಲನ್ನು ಉತ್ಪಾದಿಸುವ ಸಸ್ಯಗಳನ್ನು ಮನೆಯಲ್ಲಿ ತಪ್ಪಾಗಿ ನೆಡಬಾರದು. ಈ ಸಸ್ಯಗಳು ಮನೆಗೆ ನಕಾರಾತ್ಮಕತೆಯನ್ನು ತರುತ್ತವೆ. ಇದರಿಂದ ಮನೆಯ ನೆಮ್ಮದಿಗೆ ಭಂಗ ಉಂಟಾಗುತ್ತದೆ. 

rose

ಮುಳ್ಳಿನ ಸಸ್ಯಗಳು (Thorn plants)
ಮನೆಯಲ್ಲಿ ಮುಳ್ಳಿನ ಗಿಡಗಳನ್ನು ನೆಡುವುದು ತುಂಬಾ ಅಶುಭ. ಇದರಿಂದ ಮನೆಯಲ್ಲಿ ಜನರ ನಡುವೆ ಅನಗತ್ಯ ಜಗಳಗಳು ಆಗುತ್ತವೆ. ಆದುದರಿಂದ ಸಾಧ್ಯವಾದಷ್ಟು ಅದನ್ನು ಇಡದೆ ಇದ್ದರೆ ಉತ್ತಮ  ಎಂದು ಹೇಳಲಾಗುತ್ತದೆ. 

ನಿಂಬೆ ಸಸ್ಯ (lemon plant)
ನಿಂಬೆ ಗಿಡವನ್ನು ತಪ್ಪಾಗಿ ಮನೆಯಲ್ಲಿ ನೆಡಬಾರದು. ಹಾಗೆ ಮಾಡುವುದು ಅನೇಕ ತೊಂದರೆಗಳಿಗೆ ಒಂದು ನೆಪವಾಗಬಹುದು.ಆದುದರಿಂದ ನಿಂಬೆ ಗಿಡ ಬೆಳೆಸುವಾಗ ಸರಿಯಾದ ಜಾಗದಲ್ಲಿ ಇರುವಂತೆ ನೋಡಿಕೊಳ್ಳಿ. ಇದು ಸಮಸ್ಯೆಗಳನ್ನು ದೂರ ಮಾಡುತ್ತದೆ. 

ದೊಡ್ಡ ಮರಗಳು(Big trees)
ಮನೆಯಲ್ಲಿ ದೊಡ್ಡ ಮರಗಳನ್ನು ಎಂದಿಗೂ ನೆಡಬಾರದು. ಮನೆಯಲ್ಲಿ ದೊಡ್ಡ ಮರದ ನೆರಳು ಇರುವುದು ಒಳ್ಳೆಯದಲ್ಲ. ಇಂತಹ ಪರಿಸ್ಥಿತಿ ಕುಟುಂಬದ ಸದಸ್ಯರ ಹಿತಾಸಕ್ತಿಯನ್ನು ತಡೆಯುತ್ತದೆ ಮತ್ತು ಹಣದ ನಷ್ಟಕ್ಕೂ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ .

ಕಪ್ಪು ಗುಲಾಬಿ (black rose)
ಮನೆಯಲ್ಲಿ ಗುಲಾಬಿ ಗಿಡ ನೆಡುವುದು ತುಂಬಾ ಶುಭಕರ. ಆದರೆ ಕಪ್ಪು ಗುಲಾಬಿಗಳನ್ನು ನೆಡುವುದು  ಮನೆಯವರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಆಕಸ್ಮಿಕವಾಗಿ ಮನೆಯಲ್ಲಿ ಕಪ್ಪು ಗುಲಾಬಿಗಳನ್ನು ನೆಡಬೇಡಿ.

click me!