Navratri 2026: ನವರಾತ್ರಿಯ ರಾತ್ರಿ ಈ ಒಂದು ಕೆಲಸ ಮಾಡಿ, ನಿಮ್ಮ ಮನೆಯಿಂದ ಬಡತನ ದೂರ ಓಡುತ್ತೆ!

Published : Oct 14, 2026, 06:36 PM IST

Shardiya Navratri 2026: ಈ ಬಾರಿ ನವರಾತ್ರಿಯಲ್ಲಿ ಗಜಕೇಸರಿ, ಸರ್ವಾರ್ಥಸಿದ್ಧಿ, ಬುಧಾದಿತ್ಯ ಮತ್ತು ಲಕ್ಷ್ಮೀನಾರಾಯಣ ಸೇರಿ ಹಲವು ಶುಭ ಯೋಗಗಳು ರೂಪುಗೊಳ್ಳಲಿವೆ. ನವರಾತ್ರಿಯಲ್ಲಿ ಕೆಲವು ವಿಶೇಷ ಪರಿಹಾರಗಳನ್ನು ಮಾಡುವುದರಿಂದ ಧನ-ಧಾನ್ಯ ವೃದ್ಧಿಯಾಗುತ್ತದೆ.

PREV
15
ನವರಾತ್ರಿ ಹಬ್ಬ

ನವರಾತ್ರಿ ಹಬ್ಬ ನಡೆಯುತ್ತಿದೆ. ಈ ವರ್ಷ ನವರಾತ್ರಿ ಅಕ್ಟೋಬರ್ 11ರಿಂದ ಅಕ್ಟೋಬರ್ 19ರವರೆಗೆ ಇರಲಿದೆ. ಈ ಬಾರಿ ನವರಾತ್ರಿಯಲ್ಲಿ ಗಜಕೇಸರಿ, ಸರ್ವಾರ್ಥಸಿದ್ಧಿ, ಬುಧಾದಿತ್ಯ ಮತ್ತು ಲಕ್ಷ್ಮೀನಾರಾಯಣದಂತಹ ಅನೇಕ ಶುಭ ಯೋಗಗಳು ರೂಪುಗೊಳ್ಳಲಿವೆ. ಇಂತಹ ಸಂದರ್ಭದಲ್ಲಿ ದುರ್ಗಾದೇವಿಯ ಜೊತೆಗೆ ಲಕ್ಷ್ಮಿದೇವಿಯ ಆಶೀರ್ವಾದವನ್ನೂ ಪಡೆಯಬಹುದು. ಜ್ಯೋತಿಷಿಗಳ ಪ್ರಕಾರ, ನವರಾತ್ರಿಯ ಪವಿತ್ರ ರಾತ್ರಿಗಳಲ್ಲಿ ಕೆಲವು ವಿಶೇಷ ಪರಿಹಾರಗಳನ್ನು ಮಾಡುವುದರಿಂದ ಧನ-ಧಾನ್ಯ ವೃದ್ಧಿಯಾಗುತ್ತದೆ ಮತ್ತು ಅದೃಷ್ಟ ಬಲಗೊಳ್ಳುತ್ತದೆ. ಅದಕ್ಕಾಗಿ ಯಾವ ಪರಿಹಾರ ಮಾಡಬೇಕು ನೋಡೋಣ.

25
ಹಣದ ಸಮಸ್ಯೆ ನಿವಾರಣೆಗೆ ಈ ಪರಿಹಾರ ಮಾಡಿ

ನವರಾತ್ರಿಯ ಯಾವುದೇ ಒಂದು ರಾತ್ರಿ ದುರ್ಗಾದೇವಿಗೆ ಅರಿಶಿನದ ಎರಡು ಕೊಂಬುಗಳನ್ನು ಅರ್ಪಿಸಿ. ನಂತರ ದೇವಿಯ ಮುಂದೆ ಕುಳಿತು ಶ್ರೀಸೂಕ್ತವನ್ನು ಪಠಿಸಿ, ಹಣಕಾಸಿನ ಸಮಸ್ಯೆಗಳು ದೂರವಾಗಲಿ ಎಂದು ಪ್ರಾರ್ಥಿಸಿ. ನವರಾತ್ರಿ ಮುಗಿದ ನಂತರ ಆ ಎರಡು ಅರಿಶಿನದ ಕೊಂಬುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ಹಣ ಇಡುವ ಸ್ಥಳದಲ್ಲಿ ಅಥವಾ ಮನೆಯ ತಿಜೋರಿಯಲ್ಲಿ ಸುರಕ್ಷಿತವಾಗಿ ಇರಿಸಿ. ಹೀಗೆ ಮಾಡುವುದರಿಂದ ವರ್ಷವಿಡೀ ಲಕ್ಷ್ಮಿದೇವಿಯ ಕೃಪೆ ದೊರೆಯುತ್ತದೆ ಮತ್ತು ಬಡತನ ಮನೆಬಾಗಿಲಿನಿಂದಲೇ ಹಿಂದಿರುಗುತ್ತದೆ.

35
ಬಾಕಿ ಉಳಿದ ಹಣ ಮರಳಿ ಪಡೆಯಲು ಪರಿಹಾರ

ನಿಮ್ಮ ಹಣ ಎಲ್ಲಾದರೂ ಸಿಲುಕಿಕೊಂಡಿದೆಯೇ ಅಥವಾ ಕೊಟ್ಟ ಹಣ ಮರಳಿ ಸಿಗುತ್ತಿಲ್ಲವೇ? ಹಾಗಿದ್ದರೆ ನವರಾತ್ರಿಯ ಶುಕ್ರವಾರ ಸಂಜೆ ಈ ಪರಿಹಾರ ಮಾಡಿ. ತುಳಸಿ ಗಿಡದ ಮುಂದೆ ಒಂದು ದೀಪ ಹಚ್ಚಿ, ಲಕ್ಷ್ಮಿದೇವಿಗೆ ಕೈಮುಗಿದು ಬಾಕಿ ಉಳಿದಿರುವ ಹಣ ಮರಳಿ ಸಿಗಲಿ ಎಂದು ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿ ನಿಮ್ಮ ಮನವಿಯನ್ನು ಆಲಿಸಿ, ಹಣ ಮರಳಿ ಸಿಗುವಂತೆ ಅನುಗ್ರಹಿಸುತ್ತಾರೆ.

45
ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿಗಾಗಿ ಪರಿಹಾರ

ನವರಾತ್ರಿಯ ಪವಿತ್ರ ದಿನಗಳಲ್ಲಿ 27 ವೀಳ್ಯದೆಲೆಗಳನ್ನು ತೆಗೆದುಕೊಂಡು, ಅವುಗಳನ್ನು ಕೆಂಪು ದಾರದಲ್ಲಿ ಪೋಣಿಸಿ ಒಂದು ಹಾರವನ್ನು ತಯಾರಿಸಿ. ನಂತರ ರಾತ್ರಿ ಆ ಹಾರವನ್ನು ದುರ್ಗಾದೇವಿಗೆ ಅರ್ಪಿಸಿ, ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ ಹಾಗೂ ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿ. ಉದ್ಯೋಗ ದೊರೆತ ನಂತರ ಆ ಹಾರವನ್ನು ನೀರಿನಲ್ಲಿ ವಿಸರ್ಜಿಸಿ. ಈ ಪರಿಹಾರವನ್ನು ಮಾಡುವುದರಿಂದ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಾಣಬಹುದು ಮತ್ತು ಉದ್ಯೋಗದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುತ್ತದೆ.

55
ಮದುವೆಯಲ್ಲಿನ ಅಡೆತಡೆ ನಿವಾರಣೆಗೆ ಪರಿಹಾರ

ನಿಮ್ಮ ಮದುವೆ ನಿಶ್ಚಯವಾಗಲು ಅಡೆತಡೆಗಳು ಎದುರಾಗುತ್ತಿದ್ದರೆ, ಒಂದು ಸಂಪೂರ್ಣ ಅಡಿಕೆಗೆ ಸುತ್ತಲೂ ಸಿಂಧೂರವನ್ನು ಹಚ್ಚಿ. ನಂತರ ಅದನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ದುರ್ಗಾದೇವಿಯ ಪಾದಗಳಿಗೆ ಅರ್ಪಿಸಿ, ಶೀಘ್ರದಲ್ಲೇ ವಿವಾಹ ನೆರವೇರಲಿ ಎಂದು ಪ್ರಾರ್ಥಿಸಿ. ನವರಾತ್ರಿ ಮುಗಿದ ನಂತರ ಆ ಅಡಿಕೆಯನ್ನು ಬಟ್ಟೆಯ ಸಮೇತ ನಿಮ್ಮ ಮಲಗುವ ಕೋಣೆಯಲ್ಲಿ ಇರಿಸಿ. ಈ ಪರಿಹಾರವನ್ನು ಮಾಡುವುದರಿಂದ ಮದುವೆಗೆ ಸಂಬಂಧಿಸಿದ ಅಡೆತಡೆಗಳು ದೂರವಾಗುತ್ತದೆ.

Read more Photos on
click me!

Recommended Stories