ತ್ರಿಪುರಾ ಸಿಎಂ ಬಿಪ್ಲವ್ ದೇವ್ ಬಿದಿರಿನ ಕ್ಯಾಂಡಲ್‌ಗಳನ್ನು ಲಾಂಚ್ ಮಾಡಿದ್ದಾರೆ.
ಸಿಪಿಜಾಲದ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಬಿದಿರಿನ ಕ್ಯಾಂಡೆಲ್‌ಗಳನ್ನು ಮುಖ್ಯಮಂತ್ರಿ ಲಾಂಚ್ ಮಾಡಿದ್ದಾರೆ.
ಸಿಪಿಜಾಲಾ ಮ್ಯಾಜಿಸ್ಟ್ರೇಟ್ ವಿಶ್ವಶ್ರೀ ಬಿ ಹಾಗೂ ಸ್ವಸಹಾಯ ಸಂಘದ ಮಹಿಳೆಯ ಸಮ್ಮುಖದಲ್ಲಿ ತಮ್ಮದೇ ಚೇಂಬರ್‌ನಲ್ಲಿ ಸರಳ ಕಾರ್ಯಕ್ರಮ ನಡೆಸಿದ್ದಾರೆ.
ಸಿಂಪಲ್ ಆದ ಕಾರ್ಯಕ್ರಮವನ್ನು ಮಾಡಿ ಬಿದಿರಿನ ಕ್ಯಾಂಡೆಲ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಇದರ ಜೊತೆಗೇ ನೇಸರ್ಗಿಕ ಸಕ್ಕರೆ ಬೆಲ್ಲ, ಮನೆಯಲ್ಲೇ ತಯಾರಿಸಿದ ಅನನಾಸು ಜಾಮ್ ಕೂಡಾ ಲಾಂಚ್ ಮಾಡಿದ್ದಾರೆ
ಪ್ರಧಾನಿ ಮೋದಿ ಅವರಿಂದ ಪ್ರೇರೇಪಿತಾಗಿ ದಕ್ಷಿಣ ತೈಬಂದಲ್‌ನ ಮಹಿಳೆಯರು ಬಿದಿನ ಕ್ಯಾಂಡೆಲಲ್ ತಯಾರಿಸಿದ್ದಾರೆ ಎಂದು ಸಿಎಂ ಬಿಪ್ಲವ್ ಬರೆದಿದ್ದಾರೆ.
ಈ ದೀಪಾವಳಿಗೆ ಈ ದೀಪಗಳನ್ನು ಖರೀದಿಸಿ ಮೋದಿ ಅವರ ವಿಷನ್ ಪೂರ್ತಿಗೊಳಿಸಲು ನೆರವಾಗಿ ಎಂದು ಕೇಳಿಕೊಂಡಿದ್ದಾರೆ.
ಇದು ಸ್ಥಳೀಯ ವಸ್ತುಗಳನ್ನು ಬೆಂಬಲಿಸುವ ಸಮಯ ಎಂದೂ ಅವರು ಹೇಳಿದ್ದಾರೆ
Suvarna News