ಕೆಲ ರಾಶಿಚಕ್ರಗಳು ಉತ್ತಮ ಕೆಲಸಗಾರರಾಗಿದ್ದರೂ ಅವರಿಗೆ ಸರಿಯಾದ ಗುರುತಿಸುವಿಕೆ ಸಿಗೋದಿಲ್ಲ. ಅವರು ತಮ್ಮ ಪ್ರಯತ್ನಗಳಿಗೆ ಪ್ರಶಂಸೆ ಪಡೆಯೋದಿಲ್ಲ. ಅಥವಾ ಅವರ ಕೆಲಸಕ್ಕೆ ಮತ್ಯಾರೋ ಪ್ರಶಂಸೆ ಪಡೆಯುತ್ತಾರೆ. ಈ ರೀತಿ 4 ರಾಶಿಯವರಿಗೆ ಸದಾ ಆಗುತ್ತದೆ. ಹೀಗೆ ಮಾಡಿದ ಕೆಲಸಕ್ಕೆ ಕ್ರೆಡಿಟ್ ಸಿಗದ 4 ರಾಶಿಗಳಿವು..
ವೃಶ್ಚಿಕ ರಾಶಿ
ಅವರು ಕೆಲಸ ಮಾಡುವ ಸಂಸ್ಥೆಯಲ್ಲಿ ಧನಾತ್ಮಕ ಪ್ರಭಾವ ಬೀರಲು ಅಚಲವಾದ ಬದ್ಧತೆಯನ್ನು ಹೊಂದಿರುವ ವಿನಮ್ರ ವ್ಯಕ್ತಿಗಳು. ಅವರು ಬಾಸ್ ಮೆಚ್ಚಿಸಲು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಮಾಡದ ಕೆಲಸಕ್ಕೆ ಕ್ರೆಡಿಟ್ ಕೇಳುವುದಿಲ್ಲ. ಆದರೆ, ಮಾಡಿದ ಕೆಲಸಕ್ಕೂ ಕ್ರೆಡಿಟ್ ಸಿಗೋದಿರೋದು ಅವರ ಹಣೆಬರಹ.
ಹೌದು, ವೃಶ್ಚಿಕ ರಾಶಿಯವರು ಏನೇ ಸಾಧನೆ ಮಾಡಿದರೂ ಅದರ ಕ್ರೆಡಿಟ್ ಮಾತ್ರ ಅವರಿಗೆ ದಕ್ಕೋದಿಲ್ಲ. ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿರುವ ವೃಶ್ಚಿಕದವರು, ಅವುಗಳನ್ನು ಸಾಧಿಸಲು ಸದ್ದಿಲ್ಲದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ಗುರಿ ಸಾಧಿಸಿದರೆ ಗುರುತಿಸೋರು ಮಾತ್ರ ಇರೋದಿಲ್ಲ.
ಹಾಗಾಗಿ, ಅವರು ಗುರುತಿಸೋ ಆಸೆ ಬಿಟ್ಟು, ತಮ್ಮ ಪಾಡಿಗೆ ಕೆಲಸದಲ್ಲಿ ಸಂತೋಷ ಕಂಡುಕೊಳ್ಳುವುದೇ ಉತ್ತಮ ಆಯ್ಕೆ.
ಮೀನ ರಾಶಿ
ಮೀನ ರಾಶಿಯವರು ಗಮನವನ್ನು ಸೆಳೆಯುವ ಕಲೆ ಗೊತ್ತಿಲ್ಲದವರು. ಅವರ ಪರಹಿತಚಿಂತನೆಗೆ ಯಾವುದೇ ಮಿತಿಯಿಲ್ಲ. ಅವರು ತಮ್ಮ ಸಮಯ, ವೈಯಕ್ತಿಕ ಸಂಪನ್ಮೂಲಗಳು ಮತ್ತು ಶಕ್ತಿಯನ್ನು ಮತ್ತೊಬ್ಬರ ಒಳಿತಿಗಾಗಿ ವ್ಯಯಿಸುತ್ತಾರೆ. ಆದರೆ, ಜನರು ಅವರನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುವುದೇ ಹೆಚ್ಚು.
ವಾಸ್ತವವಾಗಿ, ಮೀನವು ತಮ್ಮ ಸುತ್ತಲಿನ ಜನರಿಗೆ ಸಹಾಯ ಮಾಡುತ್ತದೆ ಮತ್ತು ಅವರ ಪ್ರಯತ್ನಗಳು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದರೆ ಶ್ಲಾಘನೆ ಸಿಗುವುದಿಲ್ಲ. ಪ್ರತಿಯಾಗಿ ಏನನ್ನೂ ನಿರೀಕ್ಷಿಸದಿರುವುದೊಂದೇ ಅವರು ಮಾಡಬೇಕಿರುವುದು.
ಮೇಷ ರಾಶಿ
ಮೇಷ ರಾಶಿಯವರು ತಮ್ಮ ನಮ್ರತೆ ಮತ್ತು ಪ್ರಾಯೋಗಿಕತೆಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಗುರಿಗಳನ್ನು ಪಟ್ಟುಬಿಡದೆ ಬೆನ್ನಟ್ಟಲು ಏನು ಬೇಕಾದರೂ ಮಾಡುತ್ತಾರೆ. ತಮ್ಮ ಕೆಲಸ ತಾವೇ ಮಾಡಬೇಕೆಂದು ನಂಬಿದವರು. ಅವರು ತಮ್ಮ ರೆಕಗ್ನಿಶನ್‌ಗಾಗಿ ಹಾತೊರೆಯುವುದೂ ಇಲ್ಲ, ಅದು ಅವರಿಗೆ ಸಿಗುವುದೂ ಇಲ್ಲ!
ಮೇಷ ರಾಶಿಯ ಕ್ರಿಯೆಗಳು ಸಾಮಾನ್ಯವಾಗಿ ಅವರ ನೈತಿಕ ದಿಕ್ಸೂಚಿ ಮತ್ತು ಸರಿಯಾದದ್ದನ್ನು ಮಾಡುವ ನಿಜವಾದ ಬಯಕೆಯಿಂದ ಮಾರ್ಗದರ್ಶಿಸಲ್ಪಡುತ್ತವೆ. ಅವರ ಕಾರ್ಯಗಳಲ್ಲಿ ಪ್ರಾಮಾಣಿಕತೆ ಇರುತ್ತದೆ. ಆದರೆ, ಮನ್ನಣೆ ಮಾತ್ರ ಮರೀಚಿಕೆಯೇ ಸರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಕಷ್ಟಪಟ್ಟು ದುಡಿಯುವ ಆತ್ಮಗಳಾಗಿದ್ದು, ಅವರು ತಮ್ಮ ವೃತ್ತಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ. ತಮ್ಮ ಗುರಿಗಳನ್ನು ಸಾಧಿಸುವತ್ತ ಗಮನ ಹರಿಸುತ್ತಾರೆ. ಆದರೆ ಅವರಿಗೆ ಬಾಸ್ ಅಥವಾ ಮಾರ್ಗದರ್ಶಕರಿಂದ ಮೌಲ್ಯೀಕರಣ ಸಿಗೋದಿಲ್ಲ. ಯಾವ ಗೆಲುವಿಗೂ ಹೊಗಳಿಸಿಕೊಳ್ಳಲು ಸಾಧ್ಯವಾಗೋದಿಲ್ಲ.