ಮಂಗಳನ ವಿಸ್ಮಯ: 4 ರಾಶಿಯವರ ಬಾಳಲ್ಲಿ ಹೊಸ ತಿರುವು

Published : Oct 23, 2025, 09:28 PM IST

Mars Transit October 2025: ಅಕ್ಟೋಬರ್ 27 ರಂದು ಮಂಗಳನು ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದು, ಇದರಿಂದ 4 ರಾಶಿಗಳಿಗೆ ವಿಶೇಷ ಶುಭಫಲಗಳು ಲಭಿಸಲಿವೆ. ಮೇಷ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಧನಲಾಭ, ವೃತ್ತಿಯಲ್ಲಿ ಯಶಸ್ಸು ಮತ್ತು ಕೌಟುಂಬಿಕ ನೆಮ್ಮದಿಯಂತಹ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ.

PREV
15
4 ರಾಶಿಯವರಿಗೆ ತುಂಬಾ ಶುಭ

ಮಂಗಳನು ಕ್ರೂರ ಗ್ರಹವಾದರೂ ಶುಭ ಫಲ ನೀಡಿದಾಗ ವ್ಯಕ್ತಿಯ ಭಾಗ್ಯವೇ ಬದಲಾಗುತ್ತದೆ. ಅಕ್ಟೋಬರ್ 27 ರಂದು ಮಂಗಳನು ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದು, 4 ರಾಶಿಯವರಿಗೆ ತುಂಬಾ ಶುಭವಾಗಲಿದೆ. ಆ ನಾಲ್ಕು ರಾಶಿಗಳು ಯಾವವು? ಯಾವುದೆಲ್ಲಾ ಲಾಭ ಸಿಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

25
ಮೇಷ ರಾಶಿ

ಮೇಷ ರಾಶಿಯ ಅಧಿಪತಿ ಮಂಗಳ. ಹಾಗಾಗಿ ಮೇಷ ರಾಶಿ ಅವರಿಗೆ ಉತ್ತಮ ಧನಲಾಭ ಯೋಗವಿದೆ. ಹೊಸ ಮನೆ ಅಥವಾ ಭೂಮಿ ಖರೀದಿಸಬಹುದು. ಪೂರ್ವಜರ ಆಸ್ತಿ ವಿವಾದ ಬಗೆಹರಿಯಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಈ ಸಮಯದಲ್ಲಿ ಮೇಷ ರಾಶಿಯವರ ಆದಾಯದ ಮೂಲಗಳು ಹೆಚ್ಚಾಗಲಿವೆ. ಉದ್ಯೋಗಿಗಳು ಬೋನಸ್‌ನಂತಹ ಆರ್ಥಿಕ ಲಾಭಗಳನ್ನು ತಮ್ಮದಾಗಿಸಿಕೊಂಡು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.

35
ಸಿಂಹ ರಾಶಿ

ಈ ರಾಶಿಯವರಿಗೆ ಮಂಗಳನ ರಾಶಿ ಬದಲಾವಣೆಯಿಂದ ದೊಡ್ಡ ಯಶಸ್ಸು ಸಿಗಲಿದೆ. ಲವ್ ಲೈಫ್‌ನಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಸಂತಾನದ ಕಡೆಯಿಂದ ಶುಭ ಸುದ್ದಿ ಸಿಗಬಹುದು. ಕೋಪ ಕಡಿಮೆಯಾಗೋದರಿಂದ ಕುಟುಂಬ ಮತ್ತು ಉದ್ಯೋಗದ ಸ್ಥಳದಲ್ಲಿ ನೆಮ್ಮದಿ ನೆಲೆಸಲಿದೆ. ಸಂಗಾತಿ ಜೊತೆಗಿನ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ.

45
ವೃಶ್ಚಿಕ ರಾಶಿ

ಮಂಗಳನು ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಈ ರಾಶಿಯವರಿಗೆ ಹಠಾತ್ ಧನಲಾಭದ ಯೋಗವಿದೆ. ದೊಡ್ಡ ಆರ್ಥಿಕ ಅಥವಾ ಕೌಟುಂಬಿಕ ಚಿಂತೆಯೊಂದು ದೂರವಾಗಲಿದೆ. ಅವಿವಾಹಿತರಿಗೆ ಸೂಕ್ತ ಸಂಬಂಧಗಳು ಬರಬಹುದು. ಪ್ರೇಮ ಸಂಬಂಧ ಯಶಸ್ವಿಯಾಗಲಿದೆ. ಮನೆಗಳಲ್ಲಿ ಮಂಗಳಕರ ಕಾರ್ಯಗಳು ನಡೆಯಲಿದ್ದು, ಇದರಿಂದ ಸಂಭ್ರಮ ಮನೆ ಮಾಡಲಿದೆ.

ಇದನ್ನೂ ಓದಿ: ಮಂಗಳ ಗ್ರಹವು ಹಿಮ್ಮುಖ, 4 ರಾಶಿಗೆ ಜೀವನದಲ್ಲಿ ಉತ್ತಮ ಹೆಜ್ಜೆ, ಸಂಪತ್ತು

55
ಮೀನ ರಾಶಿ

ಮೀನ ರಾಶಿಯವರಿಗೆ ಶುಭ ಸುದ್ದಿ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಆಸ್ತಿ ವಿಷಯಗಳಲ್ಲಿ ಜಯ. ಆರೋಗ್ಯ ಸುಧಾರಿಸಲಿದೆ. ಒಟ್ಟಿನಲ್ಲಿ ಮಂಗಳನ ಗೋಚರದಿಂದ ಮೀನ ರಾಶಿಯರಿಗೆ ಹಲವು ಶುಭಕರ ಸುದ್ದಿಗಳು ಸಿಗಲಿವೆ.

ಇದನ್ನೂ ಓದಿ: ಅಕ್ಟೋಬರ್ 24 ರಿಂದ ಈ ಜನರಿಗೆ ನೋಟುಗಳ ಸುರಿಮಳೆ,ಈ ರಾಶಿಗೆ ಎಲ್ಲಾ ಕೆಲಸದಲ್ಲೂ ಯಶಸ್ಸು

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories