ಮೇಷ ರಾಶಿಗೆ ಶನಿ ದೃಷ್ಟಿ ದೋಷ ಕಳೆಯುತ್ತೆ. ಗ್ರಹ ಶಾಂತಿ ಪೂಜೆಗಳನ್ನು ಮಾಡಿ ಒಳ್ಳೆಯದಾಗುತ್ತದೆ, ಜನ್ಮ ಶನಿ ಆರಂಭವಾಗುತ್ತೆ.
ವೃಷಭ ರಾಶಿಯವರು ಏಕಾದಶ ಶನಿಯ ವಿಶೇಷ ಫಲವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಆದಾಯ ವೃದ್ದಿ, ಆದರೆ ಜಾಗ್ರತೆಯಿಂದ್ದರೆ ಒಳ್ಳೆಯದು.
ಮಿಥುನ ರಾಶಿಗೆ ದಶಮ ಶನಿಯಿಂದ ವ್ಯಾಪಾರ ವಹಿವಾಟೂ ವೃದ್ದಿ, ಸಾಧು ಸಜ್ಜನರ ಸಂಗ, ರಾಹು ಬದಲಾವಣೆಯಿಂದ ಜಾಗ್ರತೆ ಇರಿ. ಶ್ರೀ ನರಸಿಂಹ ದೇವರ ಸೇವೆ ಮಾಡಿ.
ಕರ್ಕ ರಾಶಿ ಸ್ತ್ರೀಯರಿಗೆ ಶುಭ, ಅಷ್ಟಮ ಶನಿ ದೋಷ ಪರಿಹಾರ, ದೇಶವಿದೇಶವ್ಯಾಪಾರದಲ್ಲಿ ಅನುಕೂಲ. ಶ್ರೀ ದುರ್ಗಾ ಪೂಜೆ ಮಾಡಿ.
ಸಿಂಹ ರಾಶಿಗೆ ಶನಿ ರಾಹು ಸಪ್ತಮಾಷ್ಟಮ ವರ್ಷ ವಾಗಿದೆ, ಕಷ್ಟಕರವೇ . ಶುಭ ಕಾರ್ಯ ವಿಳಂಬ. ಶ್ರೀ ನರಸಿಂಹ ದೇವರ ಸೇವೆ ಮಾಡಿ.
ಕನ್ಯಾ ರಾಶಿಗೆ ಸಪ್ತಮಾಷ್ಟಮ ದೋಷವಿದ್ದು ಶುಭ ಕಾರ್ಯ ವಿಳಂಬ ಸಾಧ್ಯತೆ, ಆರೋಗ್ಯದಲ್ಲಿ ಜಾಗೃತೆಯಿಂದ ಇರಿ. ಶ್ರೀನಿವಾಸನ ಸೇವೆ ಮಾಡಿ.
ತುಲಾ ರಾಶಿಗೆ ಪಂಚಮ ಶನಿ ಪರಿಹಾರವಾಗುತ್ತದೆ. ಕೆಲಸ ಕಾರ್ಯದಲ್ಲಿ ಚೈತನ್ಯ. ಪಂಚಮ ರಾಹು ದೋಷವಿದೆ. ಶ್ರೀ ಸುಬ್ರಮಣ್ಯ ಸೇವೆ ಮಾಡಿ.
ವೃಶ್ಚಿಕ ರಾಶಿಗೆ ಪಂಚಮ ಶನಿ ಆರಂಭ. ಚತುರ್ಥ ಹಾಹುನಿಂದ ಅನುಕೂಲ. ಮಿತ್ರ ಶತ್ರುಗಳ ಮೇಲೆ ಗಮನವಿರಲಿ. ಶ್ರೀ ಗುರುವಿನ ಪೂಜೆ ಮಾಡಿ.
ಧನು ರಾಶಿಗೆ ಚತುರ್ಥ ಶನಿ, ತೃತೀಯ ರಾಹು ಯೋಗ. ಕೆಲಸ ಜೊತೆ ಸಂಬಂಧಗಳು ಬದಲಾಗುವ ಸಾಧ್ಯತೆ ಇದೆ. ಪ್ರಯಾಣ ಪ್ರಯಾಸವಾದೀತು. ಶ್ರೀ ನಾಗ ಮತ್ತು ಮಹಾದೇವನ ಸೇವೆ ಮಾಡಿ.
ಮಕರ ರಾಶಿಗೆ ಜನ್ಮ ಶನಿ ಪರಿಹಾರ, ದ್ವಿತೀಯ ರಾಗು ದೋಷ ವರ್ಷ , ಹಲವು ಅವಕಾಶಗಳು ಬರುತ್ತೆ ಬಳಸಿಕೊಳ್ಳಿ. ಶ್ರೀ ದೊರ್ಗಾ ಸೇವೆ ಮಾಡಿ.
ಕುಂಭ ರಾಶಿಗೆ ಜನ್ಮ ಶನಿ ಕಳೆದಂತೆ, ಜನ್ಮ ರಾಹು ದೋಷವು ಹಲವು ಬದಲಾವಣೆಗೆ ಕಾರಣವಾದೀತು, ಆರೋಗ್ಯ, ಮಾತು, ಖರ್ಚುಗಳ ಮೇಲೆ ಗಮನವಿರಲಿ. ಶ್ರೀ ಸುಬ್ರಮಣ್ಯ ಸೇವೆಮಾಡಿ.
ಮೀನ ರಾಶಿಗೆ ಜನ್ಮ ಶನಿ ವ್ಯಯದ ರಾಹುವಿನ ವರ್ಷ. ಬಹಳ ಜಾಗ್ರತೆ ಬೇಕು. ಬಂಧುಗಳೆ ಶತ್ರುವಾಗುತ್ತಾರೆ. ವ್ಯವಹಾರದಲ್ಲಿ ತಾಳ್ಮೆ ಇರಲಿ, ಗ್ರಹ ನಾಗ ಶಾಂತಿಗಳಾಗಲಿ.
Sushma Hegde