ನವದುರ್ಗೆಯರ ಅಲಂಕಾರದಲ್ಲಿ ಪುಟ್ಟ ಸುಂದರಿ..! ಇಲ್ನೋಡಿ ಫೋಟೋಸ್

First Published | Oct 14, 2021, 5:18 PM IST

ಎಲ್ಲಾ ಕಡೆ ಈಗ ನವರಾತ್ರಿ ಸಂಭ್ರಮ. ನವದುರ್ಗೆಯರ ಅಲಂಕಾರ, ಆರಾಧನೆಯ ಹಬ್ಬ. ಈ ಸಂದರ್ಭ ಬೆಂಗಳೂರಿನ ಪುಟ್ಟ ಹುಡುಗಿಯೊಬ್ಬಳು ನವದುರ್ಗೆಯ ಅವತಾರಗಳ ಅಲಂಕಾರದಲ್ಲಿ ಕಂಗೊಳಿಸಿದ್ದಾಳೆ. ಇಲ್ನೋಡಿ ಫೋಟೋಸ್

ಪಾಡ್ಯ - ಬಾಲಾ ತ್ರಿಪುರಸುಂದರಿ: ಬೆಂಗಳೂರಿನ ನವೀನ್ ಪುರುಷೋತ್ತಮ್ ಹಾಗೂ ವಿದ್ಯಾ ನವೀನ್ ದಂಪತಿ ಈ ಬಾರಿಯ ನವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಬಿದಿಗೆ - ಕನ್ಯಾಕುಮಾರಿ : ತಮ್ಮ 4 ವರ್ಷದ ಮುದ್ದಿನ ಮಗಳು ಸನ್ನಿಧಿಗೆ ಅವರು ನವರಾತ್ರಿಯ ಮೊದಲ ದಿನವಾದ ಪಾಡ್ಯದಿಂದ ಹಿಡಿದು ಕೊನೆಯ ದಿನವಾದ ನವಮಿಯವರೆಗಿನ ಒಂಭತ್ತು ದಿನಗಳ ಕಾಲ ಪ್ರತಿದಿನ ದುರ್ಗಾಮಾತೆಯ ಒಂದೊಂದು ಅವತಾರದ ಅಲಂಕಾರ ಮಾಡಿ ಪೂಜಿಸಿದ್ದಾರೆ.

Latest Videos


ತದಿಗೆ - ಕಾಳಿ:  ನವರಾತ್ರಿಯಲ್ಲಿ ಹೆಣ್ಣುಮಕ್ಕಳನ್ನು ಸಾಕ್ಷಾತ್ ದೇವಿಯ ಅವತಾರವೆಂದೇ ಪರಿಗಣಿಸಿ ಪೂಜಿಸುವ ಸಂಪ್ರದಾಯ ಹಿಂದೂಗಳಲ್ಲಿದೆ.

ಚೌತಿ -  ಮಹಾಲಕ್ಷ್ಮೀ:  ಅದರಂತೆ ನವೀನ್ ಮತ್ತು ವಿದ್ಯಾ ದಂಪತಿ ತಮ್ಮ ಮಗಳಿಗೆ ಸುಂದರವಾಗಿ ನವದುರ್ಗೆಯ ರೂಪ ತೊಡಿಸಿ, ಅದನ್ನು ಅಚ್ಚುಕಟ್ಟಾಗಿ ಫೋಟೋಶೂಟ್ ಹಾಗೂ ವಿಡಿಯೋ ಶೂಟ್ ಕೂಡ ಮಾಡಿಸಿದ್ದಾರೆ.

ಪಂಚಮಿ - ಅಂಡಾಳ್:   ಅದರ ಜೊತೆಗೆ ಅವರು ಪ್ರತಿಯೊಂದು ದಿನದ ಶಕ್ತಿಪೂಜೆಯ ಮಹತ್ವವನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಷಷ್ಠಿ - ಮನೋನ್ಮಣಿ ದರ್ಪಣ ಸುಂದರಿ: ಆ ಪೋಸ್ಟ್‌ಗಳು ವೈರಲ್ ಆಗಿವೆ. ಈ ಫೋಟೋ ಮತ್ತು ವಿಡಿಯೋ ಶೂಟ್ ಮಾಡಿದವರು ಶಿವು ಫೋಟೋಗ್ರಾಫ್. ಸನ್ನಿಧಿಗೆ ವಸ್ತ್ರಾಲಂಕಾರ ಮಾಡಿದ್ದು ತಾಯಿ ವಿದ್ಯಾ ನವೀನ್.

ಸಪ್ತಮಿ - ಮಾತಂಗಿ: ನವರಾತ್ರಿಯ 9 ದಿನಗಳು ತಾಯಿಯ ಭಕ್ತರಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದ ತಾಯಿಯ ಪೂಜೆಯಲ್ಲಿ ಕೆಲವು ನಿಯಮಗಳಿಗೆ ವಿಶೇಷ ಕಾಳಜಿ ವಹಿಸಬೇಕು

ಅಷ್ಟಮಿ - ಅನ್ನಪೂರ್ಣೇಶ್ವರಿ: ನವರಾತ್ರಿಯಲ್ಲಿ ದುರ್ಗಾ ಮಾತೆಯನ್ನು (Durga Puja) ಪೂಜಿಸುವಾಗ ವಿಶೇಷ ಗಮನ ಹರಿಸಬೇಕಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ನಿಯಮಗಳನ್ನು ನೋಡಿಕೊಳ್ಳುವ ಮೂಲಕ, ನಮ್ಮ ಅಭ್ಯಾಸವು ತ್ವರಿತವಾಗಿ ಪೂರ್ಣಗೊಳ್ಳುತ್ತದೆ ಮತ್ತು ತಾಯಿಯ ಆಶೀರ್ವಾದವು ನಮ್ಮೆಲ್ಲರ ಮೇಲೆ ಸುರಿಯುತ್ತದೆ.

ನವಮಿ - ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ: ದುರ್ಗಾ ಮಾತೆಗೆ ಕೆಂಪು ಬಣ್ಣ (Red color) ತುಂಬಾ ಇಷ್ಟವಾದರೆ ಈ 9 ದಿನಗಳಲ್ಲಿ ಮಾತಾರಾಣಿಯ ಪೂಜೆಯಲ್ಲಿ ಕೆಂಪು ಹೂವುಗಳನ್ನು ಅರ್ಪಿಸಿ ಮತ್ತು ತಾಯಿಗೆ ಕೆಂಪು ಚುನ್ನಿಯನ್ನು ಅರ್ಪಿಸಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು (red dress) ಧರಿಸಿ. ಇದರಿಂದ ದೇವಿ ಬೇಗನೆ ಒಲಿಯುವಳು ಎನ್ನಲಾಗುತ್ತದೆ. 

click me!