Samudrik Shastra: ಈ ರೀತಿ ಹಣೆ ಇರುವ ಹುಡುಗಿಯರು ಪತಿಗೆ ತರ್ತಾರೆ ಅದೃಷ್ಟ!

Published : Sep 22, 2022, 11:36 AM IST

ಸಾಮುದ್ರಿಕಾ ಶಾಸ್ತ್ರವು ದೈಹಿಕ ರಚನೆಗಳು, ವಿಶೇಷ ಚಿಹ್ನೆಗಳನ್ನಾಧರಿಸಿ ಭವಿಷ್ಯ ಹೇಳುತ್ತದೆ. ಅದರಂತೆ ಹುಡುಗಿಯ ಮೈ ಮೇಲಿನ ಈ ರೀತಿಯ ರಚನೆಗಳು ಆಕೆ ಅದೃಷ್ಟದೇವತೆ ಎಂಬುದನ್ನು ಸೂಚಿಸುತ್ತವೆ. 

PREV
16
Samudrik Shastra: ಈ ರೀತಿ ಹಣೆ ಇರುವ ಹುಡುಗಿಯರು ಪತಿಗೆ ತರ್ತಾರೆ ಅದೃಷ್ಟ!

ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಕೇವಲ ಹಸ್ತದ ರೇಖೆಗಳಷ್ಟೇ ಅಲ್ಲದೆ ದೇಹದ ಗುಣಲಕ್ಷಣಗಳ ಆಧಾರದ ಮೇಲೆ ಮಹಿಳೆ ಅಥವಾ ಪುರುಷನ ಸ್ವಭಾವ ಮತ್ತು ಭವಿಷ್ಯವನ್ನು ಹೇಳಬಹುದು. ಅಂತೆಯೇ, ಇಂದು ನಾವು ನಿಮಗೆ ಹೇಳಲಿರುವುದು ತನ್ನ ಗಂಡನಿಗೆ ತುಂಬಾ ಅದೃಷ್ಟವನ್ನು ನೀಡುವ ಹುಡುಗಿಯರ ದೈಹಿಕ ರಚನೆಗಳ ಬಗ್ಗೆ.. ಹುಡುಗಿ ಕೆಲ ಅಂಗ ಲಕ್ಷಣಗಳನ್ನು ಹೊಂದಿದ್ದರೆ, ಆಕೆ ತನ್ನ ಪತಿಗೆ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ಆಕೆಯು ತನ್ನ ಅತ್ತೆಯ ಕಡೆಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾಳೆ.. ಅಂಥ ಹುಡುಗಿಯರ ದೈಹಿಕ ಲಕ್ಷಣಗಳೇನು ಎಂದು ತಿಳಿಯೋಣ...

26

 ಮುಂಭಾಗದಲ್ಲಿ ಬೆಳೆದ ಬೆರಳು(Raised toe in the front)
ಹುಡುಗಿಯ ಕಾಲ್ಬೆರಳು ದುಂಡಾಗಿ, ಕೆಂಪಾಗಿದ್ದರೆ ಮತ್ತು ಮುಂಭಾಗದಿಂದ ಮೇಲಕ್ಕೆತ್ತಿದಂತಿದ್ದರೆ, ಅಂಥ ಹುಡುಗಿಯರು ಮದುವೆಯ ನಂತರ ತಮ್ಮ ಗಂಡನ ಅದೃಷ್ಟವನ್ನು ಉಜ್ವಲಗೊಳಿಸುತ್ತಾರೆ. ಈ ಹುಡುಗಿಯರ ಅದೃಷ್ಟವು ಅವರ ಪತಿಗೂ ಪ್ರಯೋಜನಕಾರಿಯಾಗಿದೆ. ಆತ ಜೀವನದಲ್ಲಿ ಏಳ್ಗೆಯನ್ನು ಕಾಣುತ್ತಾನೆ.

36

 ಮೂಗಿನ ಮೇಲೆ ಮಚ್ಚೆ(Mole on nose)
ಮೂಗಿನ ಮೇಲೆ ಮಚ್ಚೆ ಇರುವ ಹುಡುಗಿಯರನ್ನು ಕೂಡ ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅಂತಹ ಮಹಿಳೆಯರ ಜೀವನದಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ. ಅವರ ಜೀವನ ಸುಖಮಯವಾಗಿರುತ್ತದೆ. ಅವರನ್ನು ಗಂಡನಿಗೆ ತುಂಬಾ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

46

ಅಂಗೈಯಲ್ಲಿ ಶುಕ್ರ ಮತ್ತು ಗುರು ಪರ್ವತ(Shukra and Guru mountain on the palm)
ಯಾರ ಅಂಗೈಯಲ್ಲಿ ಶುಕ್ರ ಮತ್ತು ಗುರು ಪರ್ವತವಿದೆಯೋ ಆ ಹುಡುಗಿಯ ವೈವಾಹಿಕ ಜೀವನವು ತುಂಬಾ ಸಂತೋಷದಾಯಕವಾಗಿರುತ್ತದೆ ಎಂದು ಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಈ ಹುಡುಗಿಯರು ತಮ್ಮ ಗಂಡನನ್ನು ಸಂತೋಷವಾಗಿಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ.

56

 ಕಣ್ರೆಪ್ಪೆಗಳು ಮತ್ತು ಕಣ್ಣುಗಳ ಅಡಿಯಲ್ಲಿ ಕೆಂಪು(Redness under the eyelids and eyes)
ಸಮುದ್ರಶಾಸ್ತ್ರದ ಪ್ರಕಾರ, ಹುಡುಗಿಯರಿಗೆ ಕಣ್ಣುಗಳ ಕೆಳಗೆ ಚರ್ಮದ ಮೇಲೆ ಸ್ವಲ್ಪ ಕೆಂಪಾಗಿದ್ದರೆ ಮತ್ತು ಕಣ್ಣುರೆಪ್ಪೆಗಳ ಕೆಳಗೆ ಕೊಂಚ ಕೆಂಪಿದ್ದರೆ, ಅದೃಷ್ಟವಂತರಾದ ಈ ಹುಡುಗಿಯರು ಮದುವೆಯ ನಂತರ ತಮ್ಮ ಗಂಡನಿಂದ ಬಹಳಷ್ಟು ಪ್ರೀತಿಯನ್ನು ಪಡೆಯುತ್ತಾರೆ ಮತ್ತು ಅವರಿಗೆ ಅತ್ತೆಯ ಜೊತೆ ಹೊಂದಾಣಿಕೆ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ.
 

66

ಅಗಲ ಹಣೆಯಿರುವ ಹುಡುಗಿಯರು(Girls with a broad forehead)
ಹಣೆಯು ಅಗಲವಾದ ಅಥವಾ ಅರ್ಧಚಂದ್ರಾಕೃತಿಯಂತೆ ಕಾಣುವಂತಿದ್ದರೆ ಈ ಹುಡುಗಿಯರು ಮದುವೆಯಾದ ನಂತರ ಯಾವುದೇ ಕುಟುಂಬಕ್ಕೆ ಹೋದರೂ ಅವರ ಪತಿ ಮತ್ತು ಕುಟುಂಬದ ಸದಸ್ಯರಿಗೆ ಅತ್ಯಂತ ಅದೃಷ್ಟಶಾಲಿಯಾಗುತ್ತಾರೆ. ಈ ಹುಡುಗಿಯರನ್ನು ಮದುವೆಯಾಗುವ ಹುಡುಗರು ಮದುವೆಯ ನಂತರ ಪ್ರತಿ ಕೆಲಸದಲ್ಲಿ ಬಡ್ತಿ ಪಡೆಯುತ್ತಾರೆ.

Read more Photos on
click me!

Recommended Stories