Navratri colours: ನವರಾತ್ರಿ ನವರಂಗ್- ಯಾವ ದಿನ ಯಾವ ಬಣ್ಣ?

Published : Sep 21, 2022, 02:53 PM IST

ನವರಾತ್ರಿಯು ಜನತೆ ಕಾತರದಿಂದ ಕಾಯುವ ಹಿಂದೂ ಹಬ್ಬವಾಗಿದ್ದು, ದೇಶಾದ್ಯಂತ ಅದ್ಧೂರಿ ಆಚರಣೆ ಕಾಣುತ್ತದೆ. ಈ ಒಂಬತ್ತು ದಿನಗಳಲ್ಲಿ ಒಂಬತ್ತು ರೀತಿಯ ಬಣ್ಣಗಳಿಗೆ ಮಹತ್ವವಿದೆ. 

PREV
110
Navratri colours: ನವರಾತ್ರಿ ನವರಂಗ್- ಯಾವ ದಿನ ಯಾವ ಬಣ್ಣ?

ನಮ್ಮ ಜೀವನದಲ್ಲಿ ಬಣ್ಣಗಳಿಗೆ ಅದರದೇ ಆದ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಬಣ್ಣವೂ ಅಸ್ತಿತ್ವದ ನಿರ್ದಿಷ್ಟ ಆವರ್ತನವನ್ನು ಸೂಚಿಸುತ್ತದೆ. ನವರಾತ್ರಿಯ ದಿನಗಳನ್ನು ಬಣ್ಣದ ಸ್ವಭಾವದಿಂದ ನಿರ್ಧರಿಸಲಾಗುತ್ತದೆ. ಒಂಬತ್ತು ದಿನಗಳು ಜೀವನದ ಒಂಬತ್ತು ವಿಭಿನ್ನ ಬಣ್ಣಗಳಿಂದ ಸೂಚಿಸಲ್ಪಡುತ್ತವೆ. ಹೌದು, ಇನ್ನೇನು ನವರಾತ್ರಿ ಹತ್ತಿರದಲ್ಲಿದೆ.. ಇದೊಂದು ಬಹು ದಿನಗಳ ಆಚರಣೆ ಕಾಣುವ ವಿಜೃಂಭಣೆಯ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯವನ್ನು ಸಂಭ್ರಮಿಸಲಾಗುತ್ತದೆ. ನವರಾತ್ರಿಯಲ್ಲಿ ಯಾವ ದಿನ ಯಾವ ಬಣ್ಣಕ್ಕೆ ಮಹತ್ವವಿದೆ ನೋಡೋಣ. 
 

210

ಮೊದಲ ನವರಾತ್ರಿ ಬಣ್ಣ - ಬೂದು
ನವರಾತ್ರಿಯ ಮೊದಲ ದಿನದಂದು ತಾಯಿ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನವನ್ನು ಬೂದು ಬಣ್ಣದಿಂದ ಸೂಚಿಸಲಾಗುತ್ತದೆ. ಬೂದು ಜೀವನದಲ್ಲಿ ಸಮತೋಲನ ಮತ್ತು ಪ್ರಶಾಂತತೆಯನ್ನು ಸೂಚಿಸುತ್ತದೆ.

310

ಎರಡನೇ ದಿನ - ಕಿತ್ತಳೆ
ನವರಾತ್ರಿಯ ಎರಡನೇ ದಿನದ ಬಣ್ಣ ಕಿತ್ತಳೆ. ಇದು ಶಕ್ತಿಯ ಹೆಚ್ಚಿನ ತೀವ್ರತೆ ಮತ್ತು ಅದರ ಮೇಲೆ ನಿಯಂತ್ರಣವನ್ನು ಸೂಚಿಸುತ್ತದೆ. ಈ ದಿನ ಮಾ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಸಮಾಜದ ತಪ್ಪುಗಳಿಗೆ ಶೂನ್ಯ-ಸಹಿಷ್ಣು ನೀತಿಯನ್ನು ಈ ದೇವಿಯ ಪಾತ್ರದಿಂದ ವ್ಯಾಖ್ಯಾನಿಸಲಾಗುತ್ತದೆ.

410

ಮೂರನೇ ದಿನ - ಬಿಳಿ
ಶಕ್ತಿಯಲ್ಲಿನ ಶುದ್ಧತೆಯನ್ನು ಚಂದ್ರಘಂಟಾ ದೇವಿಯು ಸೂಚಿಸುತ್ತಾಳೆ. ಬಿಳಿ ಬಣ್ಣವು ಯಾವುದೇ ಅಶುದ್ಧತೆಯನ್ನು ಸ್ಪರ್ಶಿಸುವುದಿಲ್ಲ. ಏನನ್ನೂ ರಚಿಸಬಹುದಾದ ಶುದ್ಧತೆ ಬಿಳಿ ಕ್ಯಾನ್ವಾಸ್‌ನದು. ಶುದ್ಧ ಮತ್ತು ಶಕ್ತಿಯುತವಾದ ಮನಸ್ಸು ಶೂನ್ಯದಿಂದ ಏನನ್ನೂ ಸೃಷ್ಟಿಸಬಲ್ಲದು ಎಂಬುದನ್ನು ಇದು ಸೂಚಿಸುತ್ತದೆ.

510

ನಾಲ್ಕನೇ ದಿನ - ಕೆಂಪು
ಕೆಂಪು ಬಣ್ಣವು ಕೋಪ ಮತ್ತು ವಿಪರೀತ ಸಾಮರ್ಥ್ಯವನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಬೆಂಕಿಯು ಜೀವನದಲ್ಲಿ ಕೆಟ್ಟದ್ದನ್ನು ಸುಡುವ ಬೆಂಕಿಯನ್ನು ಸೂಚಿಸುತ್ತದೆ. ದೇವಿ ಕೂಷ್ಮಾಂಡಾ ಶಕ್ತಿಯ ರೂಪವನ್ನು ಪ್ರತಿನಿಧಿಸುತ್ತಾಳೆ, ಅಲ್ಲಿ ತಪ್ಪುಗಳ ಮೇಲಿನ ಸರಿಯಾದ ಕೋಪವು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ.

610

ಐದನೇ ದಿನ - ಗಾಢ ನೀಲಿ(Royal blue)
ಗಾಢವಾದ ನೀಲಿ ಬಣ್ಣವು ಬ್ರಹ್ಮಾಂಡದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಪ್ರಕೃತಿಯ ಬಣ್ಣ ಇದಾಗಿದೆ. ಸ್ಕಂದ ಮಾತಾ ದೇವಿಯು ಅಸ್ತಿತ್ವದ ಭೌತಿಕ ರೂಪಕ್ಕೆ ನಮ್ಮನ್ನು ಸೀಮಿತಗೊಳಿಸದೆ ಇರುವ ವಿಧಾನವನ್ನು ಸೂಚಿಸುತ್ತದೆ.

710

ಆರನೇ ದಿನ - ಹಳದಿ
ಹಳದಿ ಬೆಳಕು, ಜ್ಞಾನ ಮತ್ತು ಸೂರ್ಯನ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತದೆ. ಪ್ರಕೃತಿಯ ಸೃಷ್ಟಿಗಳಲ್ಲಿ ಯಾವುದೇ ವ್ಯತ್ಯಾಸವನ್ನು ಸೃಷ್ಟಿಸದೆ ತನ್ನ ಶಕ್ತಿಯನ್ನು ಒದಗಿಸುವ ಗುಣವನ್ನು ಸೂರ್ಯನು ಹೊಂದಿದ್ದಾನೆ. ಕಾತ್ಯಾಯನಿ ದೇವಿಯು ಎಲ್ಲರಲ್ಲೂ ಸಮಾನತೆಯ ಸ್ವರೂಪವನ್ನು ಸೂಚಿಸುತ್ತಾಳೆ.

810

ಏಳನೇ ದಿನ - ಹಸಿರು
ನಿತ್ಯಹರಿದ್ವರ್ಣ ಸ್ವಭಾವವನ್ನು ಕಾಳರಾತ್ರಿ ದೇವತೆ ಪ್ರತಿನಿಧಿಸುತ್ತಾಳೆ. ಹಸಿರು ಬಣ್ಣವು ನವರಾತ್ರಿಯ ಏಳನೇ ದಿನದ ಬಣ್ಣವಾಗಿದೆ. ಇದು ಜೀವನವನ್ನು ಸೃಷ್ಟಿಸುವ ಫಲವತ್ತತೆ ಮತ್ತು ಪ್ರಕೃತಿಯ ಸಮನ್ವಯವನ್ನು ಪ್ರತಿನಿಧಿಸುತ್ತದೆ.
 

910

ಎಂಟನೇ ದಿನ - ನವಿಲು ಹಸಿರು
ಮಹಾ ಗೌರಿ ದೇವಿಯು ಶಿವನ ಪತ್ನಿ. ಭಾರತದಲ್ಲಿ ವಿವಾಹಿತ ಮಹಿಳೆಯರು ದೇವಿಯನ್ನು ಪೂಜಿಸುತ್ತಾರೆ. ಏಕೆಂದರೆ ಅವಳು ಶಿವ-ಶಕ್ತಿಯ ತಾಳ್ಮೆ, ಪ್ರತ್ಯೇಕತೆ ಮತ್ತು ಶಕ್ತಿಯನ್ನು ವಿವರಿಸುವ ನವಿಲು ನೀಲಿ ಬಣ್ಣವನ್ನು ಪ್ರತಿನಿಧಿಸುತ್ತಾಳೆ. 
 

1010

ಒಂಬತ್ತನೇ ದಿನ - ನೇರಳೆ
ನೇರಳೆ ಬಣ್ಣವು ರಾಯಲ್ ಬಣ್ಣವಾಗಿದೆ. ಇದು ಶಿಷ್ಟಾಚಾರ ಮತ್ತು ಸಂಘಟಿತ ಸ್ವಭಾವವನ್ನು ಪ್ರದರ್ಶಿಸುತ್ತದೆ. ಸಿದ್ಧಿದಾತ್ರಿ ದೇವಿಯು ಐಷಾರಾಮಿ, ಶಕ್ತಿ, ಜೀವನ ಮತ್ತು ಸಾವಿನ ಚಕ್ರದಿಂದ ಸ್ವಾತಂತ್ರ್ಯವನ್ನು ಸೂಚಿಸುತ್ತಾಳೆ..

click me!

Recommended Stories