ನಡೆದಾಡುವ ದೇವರೆಂದೇ ಖ್ಯಾತರಾದ ಸಾಯಿ ಬಾಬಾ ಸಮಾಧಿಯಾಗಿ ಅಕ್ಟೋಬರ್ 15, 2019ಕ್ಕೆ 101 ವರ್ಷಗಳು ಕಳೆದಿವೆ.
ತಮ್ಮ 16ನೇ ವಯಸ್ಸಿನಲ್ಲಿಯೇ ಶಿರಡಿಗೆ ಬಂದ ಸಾಯಿ ಬಾಬಾ, ದಸರಾದಂದು ಸಮಾಧಿಯಾದರೆನ್ನಲಾಗುತ್ತದೆ.
ಸಾಯಿಬಾಬಾರವರ ನೈಜ ನಾಮ, ಜನ್ಮಸ್ಥಳ ಮತ್ತು ಹುಟ್ಟಿದ ದಿನ ಯಾರಿಗೂ ತಿಳಿದಿಲ್ಲ. ಆದರೂ ಅವರ ಜೀವಿತಾವಧಿ 1838-1918ರ ಕಾಲ ಎಂದು ನಂಬಲಾಗಿದೆ.
ಶಿರಡಿಯಲ್ಲಿ ಸಾಯಿ ಬಾಬಾರಿಗೆ ಬೃಹತ್ ದೇವಾಲಯವಿದೆ. ಸಾಯಿ ಅವರನ್ನು ಭೇಟಿ ಮಾಡಲು ತನ್ನ ನ್ಯಾಯಾಲಯಕ್ಕೆ ಬರುವ ಯಾವುದೇ ವ್ಯಕ್ತಿಯು ಬಡವನಾಗಲಿ ಅಥವಾ ಶ್ರೀಮಂತನಾಗಲಿ ಬರಿಗೈಯಲ್ಲಿ ಹಿಂದಿರುಗುವುದಿಲ್ಲ ಎಂದೇ ನಂಬುತ್ತಾರೆ. ಈ ದೇವಾಲಯ ದೇಶದ ಐದು ಸಿರಿವಂತ ಯಾತ್ರಾಸ್ಥಳಗಳಲ್ಲಿ ಒಂದು.
ಮಹಾರಾಷ್ಟ್ರದ ಅಹ್ಮದ್‌ನಗರದ ಶಿರಡಿಯಲ್ಲಿ ಸಾಯಿ ಮಂದಿರವಿದೆ. ಪವಾಡಗಳಿಂದಲೇ ಬಾಬಾ ಪ್ರಸಿದ್ಧಿ.
ಅನೇಕ ಸಮಾಜಿಮುಖ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನರಿಗೆ ನೆರವಾಗುತ್ತಲೇ ಶಿರಡಿಯಲ್ಲಿ ಬಾಬಾ ತಮ್ಮ ಜೀವನ ಕಳೆದರು.
ಬಾಬಾ ಬಳಸಿದ ವಸ್ತುಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಶಿರಡಿಯಲ್ಲಿರುವ ಸಾಯಿ ಧಾಮ್ ದೇವಾಲಯ ಭಕ್ತರಿಗೆ ಬೆಳಗ್ಗೆ 5ಕ್ಕೆ ತೆರೆಯಲಾಗುತ್ತದೆ.
ಹಿಂದು- ಮುಸ್ಲಿಮ್ ಎಂಬ ಧರ್ಮ ಭೇದವಿಲ್ಲದೇ ಪೂಜಿಸುವ ಅವತಾರ ಪುರುಷ ಸಾಯಿ ಬಾಬಾ. ಇವರ ಆತ್ಮಚರಿತ್ರೆಯು ವಿವಿಧ ಭಾಷೆಗಳಿಗೆ ತರ್ಜುಮೆಗೊಂಡಿದೆ
ದಿನದ ಊಟಕ್ಕೆ ಸಾಯಿ ಬಾಬಾ ಮನೆ ಮನೆಗೂ ಭಿಕ್ಷೆ ಬೇಡುತ್ತಿದ್ದರು. ಆಗ ನೆರೆಹೊರೆಯವರು ತಾವು ತಿನ್ನುತ್ತಿದ್ದ ಜುಂಕ್ ಭುಕಾರ (ಜೋಳದ ರೋಟಿ) ಮಾಡಿಕೊಡುತ್ತಿದ್ದರು.
ಬಾಬಾಗೆ ಮಕ್ಕಳೆಂದರೆ ಅಚ್ಚು- ಮೆಚ್ಚು. ಜಾತಿ ವರ್ಗ ನೋಡದೇ ಕಂಡ್ ಕಂಡ ಮಕ್ಕಳನ್ನೆಲ್ಲಾ ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಪ್ರೀತಿ ತೋರುತ್ತಿದ್ದರು. ಕೈಯಲ್ಲೊಂದು ಗುಲಾಬಿ ಹಿಡಿದು ಬಂದರೂ ಕೇಳಿದ್ದನ್ನು ಕೊಡವ ದಯಾಳು ಈ ಬಾಬಾ.