ಕರ್ನಾಟಕದ ಕುಂಭ ಮೇಳಕ್ಕೆ ಸಜ್ಜಾಗಿದೆ ನಂಜನಗೂಡು

First Published Feb 16, 2019, 1:36 PM IST

ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ಫೆ.17 ರಿಂದ 19ರವರೆಗೆ ನಡೆಯುವ 11ನೇ ಕುಂಭಮೇಳಕ್ಕೆ ದಶಕದ ಇತಿಹಾಸವಿದೆ...

ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ಫೆ.17 ರಿಂದ 19ರವರೆಗೆ ನಡೆಯುವ 11ನೇ ಕುಂಭಮೇಳಕ್ಕೆ ದಶಕದ ಇತಿಹಾಸವಿದೆ.
undefined
ಅಗಸ್ತ್ಯ ಮುನಿಗಳ ತಪಸ್ಸುಗೈದ ತಿರುಮಕೂಡಲು ಪುರಾಣ ಪ್ರಸಿದ್ಧ ಶ್ರೀ ಗುಂಜಾ ನರಸಿಂಹಸ್ವಾಮಿ, ಶ್ರೀ ಅಗಸ್ತೇಶ್ವರಸ್ವಾಮಿ, ಹರಿಯುವ ನದಿ ಮಧ್ಯದಲ್ಲಿರುವ ಶ್ರೀ ನಡುಹೊಳೆ ಬಸಪ್ಪ ನೆಲೆಸಿರುವ ಪವಿತ್ರ ಕ್ಷೇತ್ರವಾಗಿದೆ.
undefined
1989ರಲ್ಲಿ ಪ್ರಥಮ ಬಾರಿಗೆ ಶ್ರೀ ಕೈಲಾಸಾಶ್ರಮದ ತಿರುಚ್ಚಿ ಸ್ವಾಮೀಜಿ, ಶ್ರೀ ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮೈಸೂರು ಅವಧೂತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಅವರು ಕುಂಭಮೇಳವನ್ನು ಆರಂಭಿಸಿದರು.
undefined
ಫೆ.17ರ ಬೆಳಗ್ಗೆ 9 ಗಂಟೆಗೆ ತ್ರಯೋದಶಿ, ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ ಅಭಿಷೇಕ, ಮಹಾಮಂಗಳಾರತಿ, ಸಂಜೆ 5 ಗಂಟೆಗೆ ಧರ್ಮಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ.
undefined
ಫೆ.18ರ ಬೆಳಗ್ಗೆ 9 ಗಂಟೆಗೆ ಚತುರ್ದಶಿ, ನದಿ ಪಾತ್ರದಲ್ಲಿ ಪುಣ್ಯಾಹ, ನವಗ್ರಹ ಹೋಮ, ಸುದರ್ಶನ ಹೋಮ, ರುದ್ರಹೋಮ, ಪೂರ್ಣಾಹುತಿ, ಇತ್ಯಾದಿ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 6 ಗಂಟೆಗೆ ಮಹಾತ್ಮ ಸಂತರ ಮಹಾಮಂಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ, ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಸಂಜೆ 7 ಗಂಟೆಗೆ ಶ್ರೀರುದ್ರ ಹೋಮ ಹಾಗೂ ಪೂರ್ಣಾಹುತಿ ಹಾಗೂ ಸಂಜೆ ೭ ಗಂಟೆಗೆ ವಾರಾಣಾಸಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ.
undefined
ಫೆ. 19ರಂದು ಪೂರ್ಣಿಮಾ ಬೆಳಗ್ಗೆ ನದಿ ಪಾತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ ಪುಣ್ಯಸ್ನಾನ, ಧರ್ಮ ಸಭೆ ಜರುಗಲಿದ್ದು, ಮಹೋದಯ ಪುಣ್ಯಕಾಲದ ಮಹಾಮಾಘ ಸ್ನಾನಕ್ಕೆ ಮೀನ ಲಗ್ನ ಪ್ರಾತಕಾಲ 9.35ರಿಂದ 9.50ರವರೆಗೆ ಹಾಗೂ ವೃಷಭ ಲಗ್ನ ಮಧ್ಯಾಹ್ನ 11.30ರಿಂದ 12ರವರೆಗೆ ಪ್ರಶಸ್ತ ಕಾಲವಾಗಿದೆ.
undefined
ಪುಣ್ಯಸ್ನಾನಕ್ಕೆ ಜನರು ನದಿಗಿಳಿಯುವುದರಿಂದ ನದಿಯ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಮುಂಜಾಗ್ರತಾ ಕ್ರಮವಾಗಿ 80 ಮಂದಿ ನುರಿತ ಈಜುಗಾರರು ಹಾಗೂ 3 ಮೋಟಾರ್ ಬೋಟ್ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿ.
undefined
ತ್ರಿವೇಣಿ ಸಂಗಮ ಕ್ಷೇತ್ರ ಕ್ಕೆ ಮೂರು ತಾತ್ಕಾಲಿಕ ನಿಲ್ದಾಣಗಳಿಂದ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರಿಗಾಗಿ ಐದು ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.
undefined
ನಾಲ್ಕೈದು ಕಡೆಗಳಲ್ಲಿ ಮಹಿಳೆಯರು ವಸ್ತ್ರ ಬದಲಿಸುವ 200 ಕೊಠಡಿಗಳು ತಲೆಯೆತ್ತಿವೆ. ತ್ರಿವೇಣಿ ಸಂಗಮ ಕ್ಷೇತ್ರ ಕ್ಕೆ ಮೂರು ತಾತ್ಕಾಲಿಕ ನಿಲ್ದಾಣಗಳಿಂದ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
undefined
click me!