ಗಂಡನೇ ಹೆಂಡ್ತಿಗೆ ಶತ್ರು ಆಗ್ತಾನಾ? ಚಾಣಕ್ಯ ನೀತಿ ಹೇಳುವುದೇನು?

Published : Apr 07, 2025, 11:50 AM ISTUpdated : Apr 07, 2025, 11:55 AM IST

ಚಾಣಕ್ಯ ಹೇಳುವ ಪ್ರಕಾರ ತಿಳುವಳಿಕೆ ಕೊರತೆ, ದುಷ್ಟ ಬುದ್ಧಿ, ಸಾಲಗಾರನಾಗುವುದು, ಕುಡುಕನಾದರೆ ಹಾಗೂ ದುರಾಸೆಯು ಗಂಡ-ಹೆಂಡ್ತಿ ನಡುವೆ ವೈಮನಸ್ಸನ್ನು ಸೃಷ್ಟಿಸಬಹುದು. ಇಂಥ ಸಂದರ್ಭಗಳಲ್ಲಿ ಅವರು ಪರಸ್ಪರ ಶತ್ರುಗಳಾಗಬಹುದಂತೆ.

PREV
18
 ಗಂಡನೇ ಹೆಂಡ್ತಿಗೆ ಶತ್ರು ಆಗ್ತಾನಾ? ಚಾಣಕ್ಯ ನೀತಿ ಹೇಳುವುದೇನು?

ಅರಿವಿನ ಕೊರತೆ: ಪರಸ್ಪರ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹಾದೂ ಪ್ರಬುದ್ಧತೆ ಮೇಲೆ ಪತಿ-ಪತ್ನಿಯ ಸಂಬಂಧ ನಿರ್ಧಾರವಾಗುತ್ತದೆ. ಪರಸ್ಪರ ಸಮನ್ವಯತೆ ಕೊರತೆ ಇರುವ ಮನೆಗಳಲ್ಲಿ ಸದಾ ಜಗಳ, ವಿವಾದಗಳು ಸಹಜ. ಈ ವಿಷಯದ ಕೊರತೆಯಿರುವ ಮನೆಗಳಲ್ಲಿ ಶಾಂತಿ ದೂರದ ಮಾತು. ದುಃಖದ ವಾತಾವರಣವಿರುತ್ತದೆ. ಅಶಾಂತಿ ಮತ್ತು ಮಾನಸಿಕ ಉದ್ವಿಗ್ನತೆ ಹೆಚ್ಚಿದರೆ, ಗಂಡ ಮತ್ತು ಹೆಂಡತಿ ಪರಸ್ಪರರನ್ನು ತಮ್ಮ ಶತ್ರುಗಳೆಂದೇ ಪರಿಗಣಿಸುತ್ತಾರೆ. 
 

28

ದುಷ್ಟ ಬುದ್ಧಿ: ಆಚಾರ್ಯ ಚಾಣಕ್ಯರ ಪ್ರಕಾರ ಕಟ್ಟಿ ಕೊಂಡವಳು ದುಷ್ಟ ಸ್ವಭಾವದವಳಾಗಿದ್ದರೆ, ಬೇಡದ ಕೆಲಸಗಳನ್ನು ಮಾಡುತ್ತಿದ್ದರೆ, ಪರ ಪುರುಷರತ್ತ ಆಕರ್ಷಿತಳಾಗಿದ್ದರೆ, ಆಕೆಗೆ ಪತಿಯೇ ಫಸ್ಟ್ ಎನಿಮಿ. ಅಪ್ರಸ್ತುತವಾಗಿ ವರ್ತಿಸುವ ಗಂಡನು ತನ್ನ ಮಡದಿಯನ್ನು ತಡೆದರೆ ಪತ್ನಿ ತನ್ನ ಪತಿಯನ್ನು ವೈರಿಯಂತೆಯೇ ಕಾಣುತ್ತಾಳೆ. 

38

ಗಂಡ ಹಿಂದು ಮುಂದಿಲ್ಲದೇ ಸಾಲ ಮಾಡಿದರೆ: ಗಂಡ ಮಿತಿ ಮೀರಿ ಸಾಲ ಮಾಡಿದರೆ ಅವನೇ ಪತ್ನಿಯ ಮಹಾಶತ್ರುವಾಗುತ್ತಾನೆ. ಇವನು ಪತ್ನಿಯ ತಾಳಿ ಕರಿಮಣಿಗಳನ್ನೂ ಅಡವಿಟ್ಟು ಸಾಲ ತೆಗೆಯಲು ಹೇಸುವುದಿಲ್ಲ. ಪತ್ನಿಯ ಸೌಭಾಗ್ಯವನ್ನೇ ಅಡವಿಡುವವನು ನೆಮ್ಮದಿ ಹೇಗೆ ತಂದಾನು? 
 

48

ಕುಡಿತ ಅಭ್ಯಾಸವಿದ್ದರೆ: ಇವನು ಕುಡಿದು ತನ್ನ ಮನಸ್ವಾಸ್ಥ್ಯ ಹಾಳು ಮಾಡಿಕೊಳ್ಳುವುದಲ್ಲದೆ, ಆರೋಗ್ಯವನ್ನೂ ಕಡೆಗಣಿಸುತ್ತಾನೆ. ಕುಡಿದು ಬಂದು ಹೆಂಡತಿಗೂ ಹಲ್ಲೆ ಮಾಡಬಹುದು. ಇಂಥವನ ಪತ್ನಿಯ ಬದುಕು ನಿತ್ಯ ನರಕವಾಗುವುದರಲ್ಲಿ ಅನುಮಾನವೇ ಇಲ್ಲ. 

58

ದಂಪತಿಗಳಿಬ್ಬರೂ ದುಷ್ಟರಾಗಿಬಿಟ್ಟರೆ? ಆಗ ಇಬ್ಬರೂ ಬರೀ ಕಚ್ಚಾಡಬೇಕಾಗುತ್ತದೆ. ಹೆಂಡತಿ ಮಾಡೋ ತಪ್ಪುಗಳಿಗೆ ಪತಿ ಶಿಕ್ಷೆ ಅನುಭವಿಸಬೇಕಾಗುತ್ತದೆ.  ಮತ್ತು ಗಂಡನ ತಪ್ಪುಗಳಿಗೆ ಹೆಂಡತಿಗೆ ಶಿಕ್ಷೆ ತಪ್ಪಿದ್ದಲ್ಲ. ಈ ಕಾರಣಕ್ಕಾಗಿ, ಗಂಡ ಮತ್ತು ಹೆಂಡತಿ ಇಬ್ಬರೂ ವಿವಾಹಿತ ಜೀವನದಲ್ಲಿ ಸನ್ಮಾನರ್ಗದಲ್ಲಿ ಸಾಗಬೇಕು. 

68

ದುರಾಸೆಯುಳ್ಳವನಿಗೆ ಮನಸ್ಸು ಯಾವಾಗಲೂ ಸಂಪತ್ತಿನ ಬಗ್ಗೆ ಯೋಚನೆ ಇರುತ್ತದೆ. ಅಂತವರು ತಮ್ಮ ಜೀವನಕ್ಕಿಂತ ಹಣದ ಮೇಲೆಯೇ ಹೆಚ್ಚು ವ್ಯಾವೋಹ ಹೊಂದಿರುತ್ತಾರೆ. ಯಾರಾದರೂ ಅವರ ಬಳಿ ಹಣ ಕೇಳಿದರೆ, ಅವರು ಸಾಲ ಕೇಳಲು ಬಂದವರನ್ನು ಶತ್ರುಗಳಂತೆ ಭಾವಿಸುತ್ತಾರೆ. ಅದೇ ಸಮಯದಲ್ಲಿ, ದಾನ ಮತ್ತು ದಾನ ಕಾರ್ಯಗಳನ್ನು ನಿಷ್ಪ್ರಯೋಜಕವೆಂದೇ ಅವರು ಭಾವಿಸುತ್ತಾರೆ.

78

 ಧರ್ಮೋಪದೇಶವನ್ನು ನೀಡುವ ವ್ಯಕ್ತಿಯನ್ನು ಮೂರ್ಖರು ಹಾಗೂ ಶತ್ರು ಎಂದು ಚಾಣಕ್ಯ ಪರಿಗಣಿಸುತ್ತಾನೆ. ಮೂರ್ಖರ ಮುಂದೆ ಯಾರಾದರೂ ಧರ್ಮೋಪದೇಶ ಮಾಡಿದರೆ, ಅವರು ಕಲಿತವರನ್ನೇ ಬದ್ಧವೈರಿಗಳೆಂದುಕೊಳ್ಳುತ್ತಾರೆ. ಜ್ಞಾನದ ಮಾತುಗಳು ಮೂರ್ಖನನ್ನು ಚುಚ್ಚುತ್ತವೆ. ಏಕೆಂದರೆ ಅವನು ಈ ವಿಷಯಗಳನ್ನು ಅನುಸರಿಸಲು ಒಪ್ಪುವುದಿಲ್ಲ. ಮೂರ್ಖನನನ್ನು ಜ್ಞಾನದಿಂದ ಅವನ  ಸ್ವಭಾವವೇ ದೂರವಿರಿಸುತ್ತದೆ.

88

ಎದುರಿಗೆ ಸಿಹಿಯಾಗಿ ಮಾತನಾಡಿ, ಬೆನ್ನ ಹಿಂದೆ ಕೆಟ್ಟದ್ದನ್ನು ಮಾತನಾಡುವ ವ್ಯಕ್ತಿಗಳನ್ನು ಎಂದಿಗೂ ಫ್ರೆಂಡ್ಸ್ ಮಾಡಿಕೊಳ್ಳಬಾರದು. ಅಥವಾ ಸ್ನೇಹವನ್ನು ಮಾಡಬಾರದು. ಈ ಗುಣವುಳ್ಳವರು ಯಾವುದೇ ಸಮಯದಲ್ಲಿ ಮೋಸ ಮಾಡಬಹುದು. ಮನಸ್ಸಿನಲ್ಲಿ ಅಸೂಯೆ ಪಡುವವರ ಜೊತೆಗಿದ್ದರೆ ದೂರವಿರಬೇಕು. ಅಂತಹ ಸ್ನೇಹಿತರ ಸ್ನೇಹಪರತೆ ಶತ್ರುಗಳಿಗಿಂತ ಹೆಚ್ಚಾಗಿರುತ್ತದೆ ಎನ್ನುತ್ತಾನೆ ಚಾಣಕ್ಯ. ಆದ್ದರಿಂದ, ಅಂತಹ ಜನರೊಂದಿಗೆ ಸ್ನೇಹವನ್ನು ಉಳಿಸಿಕೊಳ್ಳುವುದನ್ನು ತಪ್ಪಿಸಬೇಕು.

Read more Photos on
click me!

Recommended Stories