ಈ ದಿನಾಂಕಗಳಲ್ಲಿ ಹುಟ್ಟಿದವರು ಯಾರನ್ನೂ ಮೋಸ ಮಾಡಲ್ಲ

ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ, ಸಮಯ ಬಹಳ ಮುಖ್ಯ. ಇವುಗಳ ಮೂಲಕ ವ್ಯಕ್ತಿಗಳ ಗುಣಗಾನಗಳು, ಭವಿಷ್ಯತ್, ಇತರ ವಿಷಯಗಳನ್ನು ತಿಳಿಯಬಹುದು. ನ್ಯೂಮರಾಲಜಿ ಪ್ರಕಾರ ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಬಹಳ ವಿಶೇಷವಾಗಿರುತ್ತಾರೆ. 

Birth Dates That Reveal Super Trustworthy People suh

ಜ್ಯೋತಿಷ್ಯ ಶಾಸ್ತ್ರದಂತೆಯೇ ಸಂಖ್ಯಾ ಶಾಸ್ತ್ರ ಕೂಡ ಬಹಳ ವಿಶೇಷವಾಗಿದೆ. ಹುಟ್ಟಿದ ದಿನಾಂಕ, ಸಮಯ ಆಧಾರದ ಮೇಲೆ ವ್ಯಕ್ತಿಗಳ ಬಗ್ಗೆ ಬಹಳ ವಿಷಯಗಳನ್ನು ತಿಳಿಯಬಹುದು. ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಬಹಳ ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಅವರು ಬಹಳ ಧೈರ್ಯವಂತರು. ನೀತಿ ನಿಜಾಯಿತಿಯಿಂದ ಬದುಕುತ್ತಾರೆ. ಯಾರನ್ನೂ ಮೋಸ ಮಾಡಲು ಇಷ್ಟಪಡುವುದಿಲ್ಲ. ಇಷ್ಟು ಒಳ್ಳೆಯ ಕ್ವಾಲಿಟಿಸ್ ಇರುವವರು ಹುಟ್ಟಿದ ದಿನಾಂಕಗಳೇನು ಎಂದು ಒಮ್ಮೆ ನೋಡೋಣ.

ತುಂಬಾ ಧೈರ್ಯಶಾಲಿಗಳು

ನ್ಯೂಮರಾಲಜಿ ಪ್ರಕಾರ ಯಾವುದೇ ತಿಂಗಳಲ್ಲಿ 3, 12, 21 ಅಥವಾ 30 ರಂದು ಹುಟ್ಟಿದವರು ಬಹಳ ವಿಶೇಷವಾಗಿರುತ್ತಾರೆ. ಇವರ ರಾಡಿಕ್ಸ್ 3. ಇವರು ಬಹಳ ಧೈರ್ಯವಂತರು, ಇವರಿಗೆ ನಾಯಕತ್ವದ ಲಕ್ಷಣಗಳು ಹೆಚ್ಚು. ರಾಡಿಕ್ಸ್ 3 ಇರುವವರು ಬಹಳ ಓಪನ್ ಮೈಂಡೆಡ್. ಅವರ ಜೀವನವನ್ನು ನಿಜಾಯಿತಿಯಿಂದ ಬದುಕಬೇಕೆಂದುಕೊಳ್ಳುತ್ತಾರೆ. ಇವರ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಯಾರಿಗೂ ಕೆಟ್ಟದ್ದು ಮಾಡಲು ಬಯಸುವುದಿಲ್ಲ. ಮುಖ್ಯವಾಗಿ ಯಾರನ್ನೂ ಮೋಸ ಮಾಡುವುದಿಲ್ಲ.


ಯಾರ ಜಗಳಕ್ಕೂ ಹೋಗಲ್ಲ!

ಸಂಖ್ಯಾ ಶಾಸ್ತ್ರದ ಪ್ರಕಾರ ರಾಡಿಕ್ಸ್ 3 ಇರುವವರು ಕವಿ ಹೃದಯದವರು. ಅವರ ಕೆಲಸದಲ್ಲಿ ಯಾರಾದರೂ ಕೈ ಹಾಕಿದರೆ ಅಸ್ಸಲು ಇಷ್ಟಪಡುವುದಿಲ್ಲ. ಇವರು ಶಾಂತಿಯನ್ನು ಬಯಸುತ್ತಾರೆ. ಮೃದುವಾಗಿ ಮಾತನಾಡುತ್ತಾರೆ, ನಿಜಾಯಿತಿಯಿಂದ ಇರುತ್ತಾರೆ. ಇವರು ಯಾರ ಜಗಳಕ್ಕೂ ಹೋಗುವುದಿಲ್ಲ. ಯಾರು ಅವರ ಜಗಳಕ್ಕೆ ಬರಬಾರದೆಂದು ಬಯಸುತ್ತಾರೆ.

ಕಷ್ಟಪಟ್ಟು ಕೆಲಸ ಮಾಡುವ ಸ್ವಭಾವ

ಈ ದಿನಾಂಕಗಳಲ್ಲಿ ಹುಟ್ಟಿದವರು ಬಹಳ ಬುದ್ಧಿವಂತರು, ಧೈರ್ಯವಂತರು. ಪ್ರಾರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವವರೆಗೂ ಸುಮ್ಮನಿರುವುದಿಲ್ಲ. ಅವರಿಗೆ ಇಷ್ಟವಾದ ಕೆಲಸ ಮುಗಿದ ನಂತರವೇ ನಿಟ್ಟುಸಿರು ಬಿಡುತ್ತಾರೆ. ಕೆಲಸ ಪೂರ್ಣಗೊಳಿಸಲು ಎಷ್ಟಾದರೂ ಕಷ್ಟಪಡುತ್ತಾರೆ.

ಒಳ್ಳೆಯದಾಗುವ ದಿನ

ಸಂಖ್ಯಾ ಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ಗುರುವಾರ ಶುಭ ದಿನ. ಆ ದಿನ ಅವರು ಯಾವುದೇ ಕೆಲಸ ಪ್ರಾರಂಭಿಸಿದರೆ ಅದು ಬಹಳ ಶುಭಕರವಾಗಿರುತ್ತದೆ ಎಂದು ನಂಬುತ್ತಾರೆ. ಇವರು ಕುಟುಂಬವನ್ನು, ಸಮಾಜವನ್ನು ಪ್ರೀತಿಸುತ್ತಾರೆ. ಅವರ ಮೇಲೆ ವಿಶೇಷ ಕಾಳಜಿ ವಹಿಸುತ್ತಾರೆ.

Latest Videos

vuukle one pixel image
click me!