ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ತಿಳಿಸಿದ ಯಶ್ , ರಾಧಿಕಾ ಪಂಡಿತ್

First Published | Aug 16, 2024, 11:42 PM IST

ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ಸಿನಿಮಾ, ಸುತ್ತಾಟ ನಡುವೆಯೂ ಕುಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬ ಆಚರಣೆಯ  ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು,  ನಾಡಿನ ಜನತೆಗೆ ಇನ್‌ಟಾಗ್ರಾಮ್‌ ಮೂಲಕ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ತಿಳಿಸಿದ್ದಾರೆ.  ಇಲ್ಲಿವೆ ಫೋಟೊಗಳು.

ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ಸಿನಿಮಾ, ಸುತ್ತಾಟ ನಡುವೆಯೂ ಕುಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ವರಮಹಾಲಕ್ಷ್ಮೀ ಪೂಜೆ ಮಾಡಿ ಕುಟುಂಬದೊಟ್ಟಿಗಿನ ಫೋಟೊಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ

ದೇವರು, ಪೂಜೆ ಪುನಸ್ಕಾರಗಳ ಬಗ್ಗೆ ವಿಶೇಷ ಆಸಕ್ತಿ, ನಂಬಿಕೆ ಹೊಂದಿರುವ ನಟಿ ರಾಧಿಕಾ ಪಂಡಿತ್ ಯಾವುದೇ ಹಬ್ಬಗಳಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತ ಬಂದಿದ್ದಾರೆ. ಈ ಬಾರಿ ವರಮಹಾಲಕ್ಷ್ಮೀ ಹಬ್ಬ ಪತಿ ಯಶ್ ಜೊತೆಗೆ ಜೊತೆಗೆ ಸಡಗರದಿಂದ ಆಚರಿಸಿದ್ದಾರೆ.

Tap to resize

ನಾಡಿನ ಜನತೆಗೆ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ದೇವಿಯ ಆಶೀರ್ವಾದವು ನಿಮ್ಮ ಮೇಲಿರಲಿ. ಜೀವನದಲ್ಲಿ ಸಂತೋಷ್ ಸುಖ ಸಮೃದ್ಧಿ ತುಂಬಲಿ ಎಂದು ಬರೆದುಕೊಂಡಿದ್ದಾರೆ.


ಇಂದು ಶುಕ್ರವಾರ ಮನೆಯಲ್ಲಿ ಪತಿ ಯಶ್, ಮಕ್ಕಳೊಂದಿಗೆ ವರಮಹಾಲಕ್ಷ್ಮೀ ಪೂಜೆ ಮಾಡಿದ ಬಳಿಕ ಇನ್ಸ್‌ಟಾಗ್ರಾಮ್‌ನಲ್ಲಿ ಹಲವು ಫೋಟೊಗಳು ಹಂಚಿಕೊಂಡಿದ್ದಾರೆ. ಹಂಚಿಕೊಂಡ ಫೋಟೊಗಳೇ ಹಬ್ಬ, ದೇವರುಗಳ ಬಗ್ಗೆ ನಟಿ ರಾಧಿಕಾ  ಪಂಡಿತ್ ಎಷ್ಟು ಆಸಕ್ತಿಯಿದೆ ಎಂಬುದನ್ನು ತೋರಿಸುತ್ತಿದೆ.

ರಾಧಿಕಾ ಪಂಡಿತ್ ಸದ್ಯಕ್ಕೆ ನಟನೆಯಿಂದ ದೂರ ಉಳಿದಿದ್ದು ಗಂಡ-ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ ಅದ್ಯಾಗೂ ರಾಧಿಕಾ ಪಂಡಿತ್ ಅಭಿಮಾನಿಗಳ ಜೊತೆ ಇನ್ಸ್‌ಗ್ರಾಮ್ ಮೂಲಕ ಸಂಪರ್ಕದಲ್ಲಿದ್ದಾರೆ. ಆಗಾಗ ಏನಾದರೂ ಅಪ್ಡೇಟ್ ಕೊಡುತ್ತಿರುತ್ತಾರೆ.


ಇನ್ಸ್‌ಟಾಗ್ರಾಮ್‌ನಲ್ಲಿ ಬರೊಬ್ಬರಿ 4.4 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಾಧಿಕಾ ಪಂಡಿತ್.  ಪ್ರವಾಸ, ಮದುವೆ, ಪರಿಸರ ಹೀಗೆ ಹತ್ತು ಹಲವು ಫೋಟೊಗಳನ್ನು ಇನ್ಸಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Latest Videos

click me!