ಮದ್ಯ ಮಾಂಸ ತ್ಯಜಿಸಿ, ಹೊಸ ವರ್ಷದ ಮೊದಲ ದಿನ ಪಾಪ ಮಾಡ್ಬೇಡಿ, Virat Kohli ಗುರು ನೀಡಿದ್ರು ಸ್ಪೆಷಲ್ ಸಂದೇಶ

Published : Dec 31, 2025, 12:47 PM IST

Premanand maharaj : 2026ರ ಸಂಪೂರ್ಣ ಸಂತೋಷ, ನೆಮ್ಮದಿಯಿಂದ ಕಳೆಯಬೇಕು ಅಂದ್ರೆ ಏನು ಮಾಡ್ಬೇಕು, ಏನು ಮಾಡ್ಬಾರದು? ವರ್ಷದ ಆರಂಭ ಹೇಗಿದ್ರೆ ಮುಂದಿನ ದಿನಗಳು ಮಂಗಳಕರವಾಗಿರುತ್ತೆ ಎಂಬುದನ್ನು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ.

PREV
17
ಇಯರ್ ಆಂಡ್ ಮೂಡ್

ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ಜನರು ವರ್ಷದ ಕೊನೆ ದಿನದಂದು ಪ್ರವಾಸಿ ತಾಣಗಳಿಗೆ ಲಗ್ಗೆ ಇಡ್ತಿದ್ದಾರೆ. ಎಲ್ಲ ಪ್ರವಾಸಿ ತಾಣಗಳು, ದೇವಸ್ಥಾನಗಳು ತುಂಬಿ ತುಳುಕ್ತಿವೆ. ಹೊಟೇಲ್, ರೆಸಾರ್ಟ್, ಪಾರ್ಟಿ ಹಾಲ್ ಗಳು ಫುಲ್ ಆಗ್ತಿವೆ. ಜನರು ಇಯರ್ ಆಂಡ್ ಮೂಡ್ ಗೆ ಈಗಾಗಲೇ ಬಂದಾಗಿದೆ.

27
ದೇವಸ್ಥಾನಕ್ಕೆ ಭೇಟಿ

ಈ ಮಧ್ಯೆ ಕೆಲವರು ಇಯರ್ ಆಂಡ್ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡ್ತಿದ್ದಾರೆ. ದೇವರ ದರ್ಶನ ಪಡೆದು, ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸಲು ಸಿದ್ಧರಾಗ್ತಿದ್ದಾರೆ. ಹೊಸ ವರ್ಷ ಹೇಗಿರಬೇಕು ಎನ್ನುವ ಬಗ್ಗೆ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಗುರು ಪ್ರೇಮಾನಂದ ಮಹಾರಾಜರು ಮಹತ್ವದ ಸಂದೇಶ ನೀಡಿದ್ದಾರೆ.

37
ಪ್ರೇಮಾನಂದರ ಸಂದೇಶ

ಹೊಸ ವರ್ಷ ಕೇವಲ ಆಚರಣೆಗಳು ಮತ್ತು ಪಾರ್ಟಿಯಲ್ಲ. ಬದಲಾಗಿ ಇದು ಒಬ್ಬ ವ್ಯಕ್ತಿಯ ಜೀವನವನ್ನು ಸುಧಾರಿಸಲು, ಕೆಟ್ಟ ಕರ್ಮಗಳನ್ನು ತ್ಯಜಿಸಲು ಮತ್ತು ಒಳ್ಳೆಯ ಕಾರ್ಯಗಳನ್ನು ಅಳವಡಿಸಿಕೊಳ್ಳಲು ಒಂದು ಅವಕಾಶ. ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ.

47
ವರ್ಷದ ಕೊನೆ – ಹೊಸ ವರ್ಷದಲ್ಲಿ ಏನು ಮಾಡ್ಬೇಕು?

ಪ್ರೇಮಾನಂದ ಮಹಾರಾಜ ಪ್ರಕಾರ ಹೊಸ ವರ್ಷದಲ್ಲಿ ನೀವು ಪಾರ್ಟಿಗಳನ್ನು ಮಾಡುವ ಬದಲು ಪಾಪ ಮತ್ತು ಕೆಟ್ಟ ನಡವಳಿಕೆಯನ್ನು ತ್ಯಜಿಸಲು ಮುಂದಾಗಿ. ದೇವರ ಮೇಲೆ ಭಕ್ತಿ ಹೆಚ್ಚಿಸಿಕೊಳ್ಳಿ. ದಾನಗಳ ಮೇಲೆ ಗಮನಹರಿ. ಇದರಿಂದ ಜೀವನದಲ್ಲಿ ನಿಜವಾದ ಸಂತೋಷ ಮತ್ತು ಶಾಂತಿ ಸಿಗುತ್ತದೆ ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ.

57
ಮದ್ಯ, ಮಾಂಸ ತ್ಯಜಿಸಿ

ಇಯರ್ ಆಂಡ್, ಹೊಸ ವರ್ಷದ ಆರಂಭ ಅಂದ್ರೆ ಜನರು ಅದನ್ನು ಮದ್ಯ, ಮಾಂಸಕ್ಕೆ ಸೀಮಿತಗೊಳಿಸಿದ್ದಾರೆ. ಅನೇಕರು ಮದ್ಯ ಸೇವನೆ ಮಾಡಿ, ಮಾಂಸ ತಿಂದು ಮಿತಿಮೀರಿ ಜೀವನವನ್ನು ಎಂಜಾಯ್ ಮಾಡ್ತಾರೆ. ಇದನ್ನು ಮಾಡಬಾರದು ಎಂದು ಪ್ರೇಮಾನಂದ ಮಹಾರಾಜರು ಹೇಳುತ್ತಾರೆ. ಮದ್ಯಪಾನ, ಮಾಂಸಾಹಾರ, ಹಿಂಸೆ ಮತ್ತು ವ್ಯಭಿಚಾರವು ನರಕದ ಬಾಗಿಲುಗಳನ್ನು ತೆರೆಯುತ್ತದೆ. ಕೆಲವರು ಹೊಸ ವರ್ಷದ ಉತ್ಸಾಹದಲ್ಲಿ ಈ ವಿಷಯಗಳನ್ನು ಆನಂದಿಸುತ್ತಾರೆ. ಆದರೆ ಇದು ನಿಜವಾದ ಸಂತೋಷವಲ್ಲ. ಹೊಸ ವರ್ಷದ ಶುಭಾಶಯಗಳನ್ನು ಹೇಳಿ ನಂತರ ಮದ್ಯಪಾನ ಮಾಡಿ ಅಶುದ್ಧ ಚಟುವಟಿಕೆಗಳಲ್ಲಿ ತೊಡಗುವುದು ಸಂತೋಷದ ಮೂಲವಲ್ಲ. ಬದಲಿಗೆ ದುಃಖ ಮತ್ತು ಪಾಪದ ಮೂಲವಾಗಿದೆ ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ.ಈ ಹೊಸ ಆರಂಭದಲ್ಲಿ ವ್ಯಸನ ಮತ್ತು ಪಾಪವನ್ನು ತ್ಯಜಿಸಿ ತಮ್ಮ ಜೀವನವನ್ನು ಸದಾಚಾರ ಮತ್ತು ಭಕ್ತಿಯ ಹಾದಿಯಲ್ಲಿ ನಡೆಸುವಂತೆ ಅವರು ಜನರನ್ನು ಒತ್ತಾಯಿಸಿದ್ದಾರೆ.

67
ಮಹಿಳೆಯನ್ನು ಗೌರವಿಸಿ

ಹೊಸ ವರ್ಷದ ಆರಂಭ ಹಾಗೂ ವರ್ಷಪೂರ್ತಿ ಸಂತೋಷ, ನೆಮ್ಮದಿ ನೆಲೆಸಬೇಕು ಎಂದ್ರೆ ಪರ ಸ್ತ್ರೀಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡಬೇಡಿ, ಅವರ ಮೇಲೆ ದೌರ್ಜನ್ಯ ಎಸಗಬೇಡಿ ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ. ಇದಲ್ಲದೆ ಕೋಪ, ಕಳ್ಳತನ, ಹಿಂಸೆ ಮತ್ತು ಇತರ ಕೆಟ್ಟ ಕಾರ್ಯಗಳಿಂದ ದೂರವಿರಿ. ಭಗವಂತನ ಹೆಸರನ್ನು ಜಪಿಸಿ, ದೇವರನ್ನು ಪೂಜಿಸಿ ಎಂದಿದ್ದಾರೆ. ಹೊಸ ವರ್ಷದಲ್ಲಿ ಈ ಎಲ್ಲ ಕೆಲಸಗಳನ್ನು ಮಾಡಿದ್ರೆ ಹೊಸ ವರ್ಷ ಮಾತ್ರವಲ್ಲದೆ ನಿಮ್ಮ ಇಡೀ ಜೀವನ ಶುಭಕರವಾಗಿರುತ್ತದೆ. ಸಂತೋಷ ಮತ್ತು ನೆಮ್ಮದಿ ತುಂಬಿರುತ್ತದೆ.

77
ಮಕ್ಕಳಿಗೆ ಸಂದೇಶ

ವೈಯಕ್ತಿಕ ಸುಧಾರಣೆ ಮಾತ್ರವಲ್ಲದೆ ಸಮಾಜದ ಸುಧಾರಣೆ ಮುಖ್ಯ ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ. ಮಕ್ಕಳು ಕೆಟ್ಟದ್ದರಿಂದ ದೂರವಿರುವುದು ಅತ್ಯಗತ್ಯ. ಪಾಪ ಮತ್ತು ದುಷ್ಟ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರು ಜೀವನದಲ್ಲಿ ದುಃಖ ಮತ್ತು ಕಷ್ಟಗಳನ್ನು ಎದುರಿಸುತ್ತಾರೆ. ನಮಗೆ ಮಾನವ ಜೀವನ ನೀಡಲಾಗಿದೆ, ರಾಕ್ಷಸ ಜೀವನವಲ್ಲ. ಆದ್ದರಿಂದ, ರಾಕ್ಷಸ ಕೃತ್ಯಗಳನ್ನು ಮಾಡಬೇಡಿ ಎಂದಿದ್ದಾರೆ.

Read more Photos on
click me!

Recommended Stories