ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲು ಹೆಚ್ಚಾಗಿ ನಾವು ಲಕ್ಷ್ಮೀ (Goddess Lakshmi) ದೇವರ ವಿಗ್ರಹ ಅಥವಾ ಫೋಟೊ ಮನೆಯಲ್ಲಿಡ್ತೀವಿ ಅಲ್ವಾ? ಆದ್ರೆ ಜನರು ತಮ್ಮ ಮನೆಗಳಲ್ಲಿ ನಿಂತಿರುವ ದೇವರ ವಿಗ್ರಹವನ್ನು ಇಡ್ತಾರೆ. ನಿಂತಿರುವ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಬಾರದು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ವಿಶೇಷವಾಗಿ, ನೀವು ಲಕ್ಷ್ಮಿ ದೇವಿಯ ವಿಗ್ರಹವನ್ನು ಮನೆಗೆ ತರುತ್ತಿದ್ದರೆ, ನಿಂತಿರುವ ಭಂಗಿಯಲ್ಲಿರೋ ಪ್ರತಿಮೆಯನ್ನು ಅಥವಾ ಫೋಟೊವನ್ನು ಆಯ್ಕೆ ಮಾಡುವುದನ್ನು ತಪ್ಪಿಸಿ. ಯಾಕೆ ಲಕ್ಷ್ಮೀ ದೇವಿಯ ನಿಂತಿರುವ ವಿಗ್ರಹ ಇಡಬಾರದು ಅನ್ನೊದನ್ನು ನೋಡೋಣ.