Navratri 2022: ಬೆಂಗಳೂರಿನ ಈ ದೇವಿ ದೇವಾಲಯಗಳಿಗೆ ಭೇಟಿ ತಪ್ಪಿಸ್ಬೇಡಿ!

First Published Sep 28, 2022, 12:57 PM IST

ನವದುರ್ಗೆಯರು ಹಿಂದೂ ಧರ್ಮದಲ್ಲಿ ಒಂಬತ್ತು ಅಭಿವ್ಯಕ್ತಿಗಳು ಮತ್ತು ದುರ್ಗೆಯ ರೂಪಗಳು. ವಿಶೇಷವಾಗಿ ನವರಾತ್ರಿ ಮತ್ತು ದುರ್ಗಾ ಪೂಜೆಯ ಸಮಯದಲ್ಲಿ ಅಮ್ಮನವರನ್ನು ಶಕ್ತಿ ಎಂದು ಪರಿಗಣಿಸಲಾಗುತ್ತದೆ. 
ಈಗ ನವರಾತ್ರಿಯ ಸಮಯದಲ್ಲಿ 9 ದಿನಗಳ 9 ದೇವಿ ದೇವಾಲಯಗಳಿಗೆ ಭೇಟಿ ನೀಡುವುದು ಶ್ರೇಯಸ್ಕರ ವಿಷಯ. ಬೆಂಗಳೂರಿನಲ್ಲಿ ದೇವಾಲಯಗಳು ಪ್ರತಿ ಏರಿಯಾದಲ್ಲೂ ಇವೆ. ಈ ಸಂದರ್ಭದಲ್ಲಿ ನೀವು ಬೆಂಗಳೂರಿನಲ್ಲಿರುವವರಾದರೆ ಯಾವೆಲ್ಲ ಅಮ್ಮನವರ ದೇವಾಲಯಗಳಿಗೆ ಭೇಟಿ ನೀಡಬಹುದು ಎಂಬ ಮಾಹಿತಿ ಇಲ್ಲಿದೆ. 

ನವದುರ್ಗೆಯರು ಹಿಂದೂ ಧರ್ಮದಲ್ಲಿ ಒಂಬತ್ತು ಅಭಿವ್ಯಕ್ತಿಗಳು ಮತ್ತು ದುರ್ಗೆಯ ರೂಪಗಳು. ವಿಶೇಷವಾಗಿ ನವರಾತ್ರಿ ಮತ್ತು ದುರ್ಗಾ ಪೂಜೆಯ ಸಮಯದಲ್ಲಿ ಅಮ್ಮನವರನ್ನು ಶಕ್ತಿ ಎಂದು ಪರಿಗಣಿಸಲಾಗುತ್ತದೆ. 
ಈಗ ನವರಾತ್ರಿಯ ಸಮಯದಲ್ಲಿ 9 ದಿನಗಳ 9 ದೇವಿ ದೇವಾಲಯಗಳಿಗೆ ಭೇಟಿ ನೀಡುವುದು ಶ್ರೇಯಸ್ಕರ ವಿಷಯ. ಬೆಂಗಳೂರಿನಲ್ಲಿ ದೇವಾಲಯಗಳು ಪ್ರತಿ ಏರಿಯಾದಲ್ಲೂ ಇವೆ. ಈ ಸಂದರ್ಭದಲ್ಲಿ ನೀವು ಬೆಂಗಳೂರಿನಲ್ಲಿರುವವರಾದರೆ ಯಾವೆಲ್ಲ ಅಮ್ಮನವರ ದೇವಾಲಯಗಳಿಗೆ ಭೇಟಿ ನೀಡಬಹುದು ಎಂಬ ಮಾಹಿತಿ ಇಲ್ಲಿದೆ. 

ಶ್ರೀ ಅಣ್ಣಮ್ಮ ದೇವಿ ದೇವಸ್ಥಾನ
ಕೆಂಪೇಗೌಡರ ಕಾಲದಲ್ಲಿ ಶ್ರೀ ಅಣ್ಣಮ್ಮ ದೇವಿಯನ್ನು ಬೆಂಗಳೂರಿನ ರಕ್ಷಕ ದೇವತೆ ಎಂದು ಪರಿಗಣಿಸಲಾಗಿದೆ. ಆಕೆಯ ಆಧ್ಯಾತ್ಮಿಕ ಶಕ್ತಿಗಳು ಮತ್ತು ಆಚರಣೆಗಳಿಂದಾಗಿ ಇದು ದೇವಿಯ ಅತ್ಯಂತ ಶಕ್ತಿಶಾಲಿ ನಿವಾಸಗಳಲ್ಲಿ ಒಂದಾಗಿದೆ. ಅಮ್ಮ ಸಮಸ್ಯೆಯು ಜನರ ಮೇಲೆ ಮಾರಣಾಂತಿಕ ದಾಳಿ ಮಾಡುತ್ತಿದ್ದ ಸಮಯದಲ್ಲಿ ದೇವಿಯು ರಕ್ಷಕಳಾಗಿ ಬಂದಳು ಎಂಬ ನಂಬಿಕೆ ಇದೆ. ಇಲ್ಲಿನ ಕಂಪನವು ನಿಜವಾಗಿಯೂ ಮಾಂತ್ರಿಕವಾಗಿದೆ ಎಂದು ಜನರು ಹೇಳುತ್ತಾರೆ.ಈ ಪ್ರಾಚೀನ ದೇವಾಲಯವು ಗಾಂಧಿ ನಗರದ ಎಸ್‌ಸಿ ರಸ್ತೆಯಲ್ಲಿದೆ. 

ಶ್ರೀ ಚೌಡೇಶ್ವರಿ ದೇವಸ್ಥಾನ
ಮತ್ತಿಕೆರೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯವು ನವರಾತ್ರಿಯ ಸಮಯದಲ್ಲಿ ಭಕ್ತರಿಂದ ತುಂಬಿ ತುಳುಕುತ್ತದೆ. ಪಾರ್ವತಿ ದೇವಿಯ ಅವತಾರವಾದ ಈಕೆ ರಾಕ್ಷಸನನ್ನು ಕೊಲ್ಲಲು ಅವತಾರವತ್ತಿದಳು. 

ಶ್ರೀ ಮಹಾ ಪ್ರತ್ಯಂಗಿರಾ ದೇವಿ ದೇವಸ್ಥಾನ
ತುರಹಳ್ಳಿಯಲ್ಲಿರುವ ಈ ದೇವಾಲಯವು ಮಾಟಮಂತ್ರವನ್ನು ಎದುರಿಸಲು ತಿಳಿದಿರುವ ದೇವಿಯ ರೂಪಕ್ಕೆ ಸಮರ್ಪಿತವಾಗಿದೆ. ಅವಳನ್ನು ಪ್ರತ್ಯಂಗಿರಾ ದೇವಿ ಅಥವಾ ನರಸಿಂಹಿಕಾ ಎನ್ನಲಾಗುತ್ತದೆ. ಆಕೆ ಅರ್ಧ ಮಾನವ ರೂಪ ಇನ್ನರ್ಧ ಸಿಂಹ ರೂಪದಲ್ಲಿದ್ದಾಳೆ. 

ಶ್ರೀ ಗಂಗಮ್ಮ ದೇವಿ ದೇವಸ್ಥಾನ
ವೈಯ್ಯಾಲಿಕಾವಲ್‌ನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಗಂಗಮ್ಮ ದೇವಿ ದೇವಸ್ಥಾನವು ಪಾರ್ವತಿಯ ಅವತಾರ ಗಂಗಾ ಮಾತೆಯ ವಾಸಸ್ಥಾನವಾಗಿದೆ. ಇಲ್ಲಿ ವಾರ್ಷಿಕ ಗಂಗಮ್ಮ ಜಾತ್ರೆ ನಡೆಯುತ್ತದೆ ಮತ್ತು ನವರಾತ್ರಿಯಲ್ಲಿ, ದೇವಾಲಯವು ಭಕ್ತರನ್ನು ಕೈ ಬೀಸಿ ಕರೆಯುತ್ತದೆ.

ಶ್ರೀ ನಿಮಿಷಾಂಬ ದೇವಿ ದೇವಸ್ಥಾನ
ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ನಿಮಿಷಾಂಬ ದೇವಿ ದೇವಸ್ಥಾನವನ್ನು ಕೆಂಪು ಲ್ಯಾಟರೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಶೈಲಿಯಲ್ಲಿರುವ ಭಾರತದ ಅಪರೂಪದ ದೇವಾಲಯಗಳಲ್ಲಿ ಇದೂ ಒಂದು. ಇಲ್ಲಿ ಶ್ರೀ ಚಕ್ರವಿದ್ದು, ಸರ್ಪಬಲಿ, ದುರ್ಗಾ ಹೋಮ, ಕಲ್ಪ ಸರ್ಪ ಶಾಂತಿ ಹೋಮಗಳು ನಡೆಯುತ್ತವೆ. ನವರಾತ್ರಿಯ ಈ ಶುಭ ಸಮಯದಲ್ಲಿ ನಿಮಿಷಾಂಬ ದರ್ಶನ ಮಾಡಲು ಮರೆಯದಿರಿ. 
 

ಪಟಾಲಮ್ಮ ದೇವಿ ದೇವಸ್ಥಾನ
ಪಟಾಲಮ್ಮನಿಗೆ ಸಮರ್ಪಿತವಾದ 400 ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಬಸವನಗುಡಿಯ ಸೌತ್ ಎಂಡ್ ಸರ್ಕಲ್ ಹತ್ತಿರವಿದೆ. ಯಡಿಯೂರು, ಸಿದ್ದಾಪುರ, ಕನಕನಪಾಳ್ಯ, ನಾಗಸಂದ್ರ ಮತ್ತಿತರ 20 ಗ್ರಾಮಗಳ ಗ್ರಾಮದೇವತೆ ಈ ಪಟಾಲಮ್ಮ. ನೆಲದಡಿಯಿಂದ ಆಕೆ ಸ್ವಯಂಭೂವಾಗಿ ಕಾಣಿಸಿಕೊಂಡಿದ್ದಾಳೆ. ಪಟಾಲಮ್ಮ ಎಂದರೆ ಪಾತಾಳಮ್ಮ.. ಅಂದರೆ ಭೂಮಿಯಿಂದ ಉದ್ಭವಿಸಿದವಳು. 

ಶ್ರೀ ಬನಶಂಕರಿ ದೇವಿ ದೇವಸ್ಥಾನ
ಬನಶಂಕರಿ ಬಸ್ ನಿಲ್ದಾಣ ಬಲಿ ಇರುವ ಈ ದೇವಾಲಯವು ನಗರದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಿ ದೇವಾಲಯದಲ್ಲಿ ಭಕ್ತರು ಪೂಜೆ ಮತ್ತು ಪ್ರಾರ್ಥನೆಗಳಿಗೆ ಅಶುಭ ಸಮಯವೆನ್ನುವ ರಾಹು ಕಾಲದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸುವುದು ವಿಶೇಷವಾಗಿದೆ. 
 

ಶ್ರೀ ಮುತ್ಯಾಲಮ್ಮ ದೇವಿ ದೇವಸ್ಥಾನ
ಮುತ್ಯಾಲಮ್ಮ ದೇವಸ್ಥಾನದ ಇತಿಹಾಸವು ನೂರಾರು ಜೀವಗಳನ್ನು ಬಲಿ ತೆಗೆದುಕೊಂಡ ಮಹಾನ್ ಪ್ಲೇಗ್‌ ನಿಂದ ಜನರನ್ನು ರಕ್ಷಿಸಿದ್ದಕ್ಕಾಗಿ ಖ್ಯಾತಿ ಪಡೆದಿದೆ. ಶಿವಾಜಿನಗರದಲ್ಲಿರುವ ಈ ದೇವಾಲಯವು ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಹೆಸರು ಪಡೆದಿದೆ. 

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ
ಟಿನ್ ಫ್ಯಾಕ್ಟರಿ ಬಳಿ ಇರುವ ಮುತ್ತು ಮಾರಿಯಮ್ಮ ದೇವಸ್ಥಾನವು ಮಾರಿಯಮ್ಮನ ಅತ್ಯಂತ ಶಕ್ತಿಶಾಲಿ ವಾಸಸ್ಥಾನವಾಗಿದೆ.ಇಲ್ಲಿ ಶುಕ್ರವಾರ ಮತ್ತು ಮಂಗಳವಾರ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ ಮತ್ತು ಜನರು ಈ ದೇವಾಲಯಕ್ಕೆ ಭೇಟಿ ನೀಡಲು ಸ್ಥಳಗಳಿಂದ ಬರುತ್ತಾರೆ. ನವರಾತ್ರಿಯಲ್ಲಿ ಮಿಸ್ ಮಾಡದೇ ಈ ದೇವಾಲಯಕ್ಕೆ ಭೇಟಿ ನೀಡಿ..

ಪ್ಲೇಗ್ ಅಮ್ಮ ದೇವಸ್ಥಾನ
ಬೆಂಗಳೂರಿನ ತ್ಯಾಗರಾಜನಗರದಲ್ಲಿ ಪ್ಲೇಗ್ ಮತ್ತು ಸಿಡುಬಿನ ನಿರ್ಮೂಲನೆಗೆ ಮೀಸಲಾದ ಪ್ಲೇಗ್ ಅಮ್ಮನ ದೇವಸ್ಥಾನವಿದೆ. ಈಕೆ ರಾಜರಾಜೇಶ್ವರಿ ದೇವಿಯೇ ಆಗಿದ್ದು, ಪ್ಲೇಗ್‌‌ನಿಂದ ಲಕ್ಷಾಂತರ ಜನರನ್ನು ರಕ್ಷಿಸಿದ ಬಳಿಕ ಪ್ಲೇಗಮ್ಮ ಎಂಬ ಹೆಸರು ಪಡೆದಿದ್ದಾಳೆ.

click me!