ಕನಸುಗಳನ್ನು ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನು ನೋಡುತ್ತಾನೆ. ಕೆಲವು ಕನಸುಗಳು ನಮಗೆ ಸಂತೋಷವನ್ನು ನೀಡುತ್ತವೆ ಮತ್ತು ಕೆಲವು ಕನಸುಗಳು ನಮಗೆ ಭಯವನ್ನು ಉಂಟು ಮಾಡುತ್ತವೆ. ಮತ್ತೊಂದೆಡೆ, ಕನಸಿನ ಗ್ರಂಥಗಳ ಪ್ರಕಾರ, ಕೆಲ ವಿಶೇಷ ಕನಸುಗಳು ನಮಗೆ ಭವಿಷ್ಯದ ಘಟನೆಗಳ ಸೂಚನೆಗಳನ್ನು ನೀಡುತ್ತವೆ. ಅದೇ ಸಮಯದಲ್ಲಿ, ನಾವು ಅನೇಕ ಬಾರಿ ನಮ್ಮ ಕನಸಿನಲ್ಲಿ ದೇವತೆಗಳು ಮತ್ತು ದೇವಾಲಯಗಳನ್ನು ನೋಡುತ್ತೇವೆ. ಅವು ಶುಭ ಸೂಚನೆಯೇ ಇರಬೇಕು ಎಂದು ಸಂತಸ ಪಡುತ್ತೇವೆ. ನವರಾತ್ರಿಯ ಈ ಸಮಯ ದುರ್ಗಾ ಮಾತೆ(Maa Durga)ಯ ಆರಾಧನೆಗೆ ಹೆಸರಾಗಿದೆ. ನಿಮ್ಮ ಕನಸಿನಲ್ಲೇನಾದರೂ ದುರ್ಗಾ ಮಾತೆ ಬಂದರೆ ಏನರ್ಥ ಎಂದು ತಿಳಿಯೋಣ.