ಶಿವನ ಆರು ಪ್ರಮುಖ ಅವತಾರಗಳಿವು; ಒಂದೊಂದು ರೂಪಕ್ಕೂ ಮಹತ್ವ..!

Published : Jul 25, 2023, 02:21 PM IST

ಮಹಾದೇವ ಹೆಸರಿನಿಂದ ಕರೆಯುವ ಶಿವನು ಬಹು ಉದ್ದೇಶಗಳನ್ನು ಪೂರೈಸಲು ಹಲವಾರು ಬಾರಿ ಅವತರಿಸಿದ್ದಾನೆ.  

PREV
16
ಶಿವನ ಆರು ಪ್ರಮುಖ ಅವತಾರಗಳಿವು; ಒಂದೊಂದು ರೂಪಕ್ಕೂ ಮಹತ್ವ..!

ಹನುಮಂತನ ಅವತಾರ: ರಾಮನ ಅವತಾರದಲ್ಲಿದ್ದ ವಿಷ್ಣುವಿನ ಸೇವೆ ಮಾಡುವುದಕ್ಕಾಗಿ ಶಿವನು, ಹನುಮಂತ ಅವತಾರವನ್ನು ತಾಳಿದರೆಂದು ಹೇಳುತ್ತಾರೆ. ಆಂಜನೇಯ ಶಿವನ ಹನ್ನೊಂದನೇ ರುದ್ರ ಅವತಾರ, ಈ ರೂಪದಲ್ಲೇ ಶಿವನು ರಾಮನ ಸೇವೆ ಮಾಡಿದ್ದನಂತೆ. ಇದರಿಂದಾಗಿ ರಾವಣನನ್ನು ವಧೆ ಮಾಡಲು ರಾಮ ಯಶಸ್ವಿಯಾದನು ಎಂದು ಹೇಳಲಾಗುತ್ತದೆ.

26

ದುರ್ವಾಸ ಅವತಾರ: ಜಗತ್ತಿನಲ್ಲಿ ಶಿಸ್ತನ್ನು ನಿರ್ವಹಿಸಲು ಶಿವನು ದುರ್ವಾಸ ಅವತಾರವನ್ನು ತಾಳಿದನು ಎಂದು ಹೇಳಲಾಗುತ್ತದೆ. ದುರ್ವಾಸರು ಮಹಾನ್ ಮುನಿಯಾಗಿದ್ದು, ತಮ್ಮ ಕೋಪಕ್ಕೆ ಹೆಸರಾಗಿದ್ದರು. ಇವರನ್ನು ಕಂಡರೆ ದೇವ-ದೇವತೆಗಳು ಕೂಡ ಹೆದರುತ್ತಿದ್ದರು.

36

ಕಾಲಭೈರವ ಅವತಾರ : ವಿಷ್ಣು ಮತ್ತು ಬ್ರಹ್ಮರ ಮಧ್ಯೆ ಯಾರು ಶ್ರೇಷ್ಠ ಎಂಬ ಚರ್ಚೆಯು ನಡೆದಾಗ ಶಿವನು ಭೈರವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ. ಎಲ್ಲಾ ಶಕ್ತಿಪೀಠಗಳನ್ನು ರಕ್ಷಿಸುವ ರಕ್ಷಕನಾಗಿ ಶಿವನು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ ಎನ್ನಲಾಗಿದೆ.

46

ಶರಭ ಅವತಾರ: ಶರಭ ಅವತಾರದಲ್ಲಿ ಅರ್ಧ ಸಿಂಹ ಮತ್ತು ಅರ್ಧ ಪಕ್ಷಿಯ ರೂಪದಲ್ಲಿ ಶಿವ ಕಂಡು ಬರುತ್ತಾನೆ. ಈಶ್ವರ ಈ ಅವತಾರವನ್ನು ವಿಷ್ಣು ದೇವರ ನರಸಿಂಹ ಅವತಾರವನ್ನು ಶಾಂತಗೊಳಿಸಲು ತಾಳಿದರೆಂನೆಂದು ಶಿವ ಪುರಾಣ ಹೇಳುತ್ತದೆ.
 

56

ಕೀರಾತೇಶ್ವರ ಅವತಾರ: ಅರ್ಜುನನು ಅರಣ್ಯವಾಸವನ್ನು ಅನುಭವಿಸುತ್ತಿರುವಾಗ ಶಿವನು ಅರ್ಜುನನ್ನು ಪರೀಕ್ಷಿಸಲು ಬೇಟೆಗಾರನ ರೂಪದಲ್ಲಿ ಕೀರಾತೇಶ್ವರ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅರ್ಜುನನ ಪರಾಕ್ರಮ ಪೌರುಷಕ್ಕೆ ಮನಸೋತ ಶಿವನು ತಮ್ಮಲ್ಲಿದ್ದ ಪಾಶುಪತಾಸ್ತ್ರವನ್ನು ಅರ್ಜುನನಿಗೆ ವರವಾಗಿ ನೀಡುತ್ತಾನೆ.

66

ಗೃಹಪತಿ ಅವತಾರ:  ಶಿವನು ಒಬ್ಬ ಬ್ರಾಹ್ಮಣ ವಿಶ್ವಾನರನ ಮನೆಯಲ್ಲಿ ಆತನ ಮಗನಾಗಿ ಜನಿಸುತ್ತಾನೆ. ವಿಶ್ವಾನರ ಆತನಿಗೆ ಗೃಹಪತಿ ಎಂಬ ಹೆಸರನ್ನಿಡುತ್ತಾನೆ. ಗೃಹಪತಿಯು ಒಂಭತ್ತನೆ ವಯಸ್ಸಿಗೆ ಕಾಲಿಡುತ್ತಿದ್ದಂತೆ ಆತ ಸಾಯುತ್ತಾನೆ ಎಂದು ನಾರದ ಮಹರ್ಷಿಗಳು ಹೇಳುತ್ತಾರೆ. ಗೃಹಪತಿಯು ಕಾಶಿಗೆ ಹೋಗಿ ಸಾವನ್ನು ಜಯಿಸುತ್ತಾನೆ.

Read more Photos on
click me!

Recommended Stories