ಈ ಎರಡು Zodiac Signs ಮದ್ವಯಾದರೆ ಮುಗಿದೇ ಹೋಯಿತು ಕಥೆ, ಜೀವನವೇ ಬರ್ಬಾದ್!

First Published | Jul 25, 2023, 12:35 PM IST

ಮದುವೆ ಅನ್ನೋದು ನಾವು ಅಂದುಕೊಂಡಷ್ಟು ಸುಲಭದ ಜೀವನದ ಅಲ್ಲ. ಕೆಲವೊಮ್ಮೆ ವೈವಾಹಿಕ ಜೀವನದ ಅನ್ಯೋನ್ಯತೆಗೆ ನಮ್ಮ ರಾಶಿಗಳು ಸಹ ಅಡ್ಡಬರುತ್ತವೆ. ಅನೇಕ ಬಾರಿ, ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರೂ, ಸಂಬಂಧಗಳಲ್ಲಿ ಸಮಸ್ಯೆಗಳು ಉಂಟಾಗಿ ಸಂಬಂಧಗಳು ಮುರಿದು ಬೀಳುತ್ತವೆ, ಇದಕ್ಕೆ ಕಾರಣ ಕೆಲವೊಮ್ಮೆ ರಾಶಿಗಳ ಹೊಂದಾಣಿಕೆಯ ಕೊರತೆಯೂ ಇರಬಹುದು.
 

ವೈವಾಹಿಕ ಜೀವನದಲ್ಲಿ (married life) ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದಾಗ ಮಾತ್ರ ಸಂತೋಷದಿಂದ ಇರಬಹುದು. ಆದರೆ ಕೆಲವೊಮ್ಮೆ ಇಬ್ಬರ ಗುಣಗಳು ಉತ್ತಮವಾಗಿದ್ದರೂ ಸಂಬಂಧ ಮುರಿದು ಬೀಳುತ್ತದೆ. ಇದಕ್ಕೆ ಕಾರಣ ರಾಶಿಗಳು. ಕೆಲವು ರಾಶಿಯ ದಂಪತಿ ಸಂವಹನ, ಮೌಲ್ಯ ಮತ್ತು ಆದ್ಯತೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಅಂತಹ ದಂಪತಿ ನಡುವೆ ಯಾವುದೇ ವಿಷಯಕ್ಕೂ ಹೊಂದಾಣಿಕೆ ಆಗೋದಿಲ್ಲ. ಯಾವ ರಾಶಿಚಕ್ರದ ಜೋಡಿಗಳು ಉತ್ತಮ ದಂಪತಿಗಳಾಗಲು (best couple) ಸಾಧ್ಯವಿಲ್ಲ  ಎಂದು ತಿಳಿಯೋಣ?

ಮೇಷ ಮತ್ತು ಕರ್ಕಾಟಕ
ಮೇಷ ರಾಶಿಯವರು ಸ್ಟ್ರಾಂಗ್ ಮತ್ತು ಸ್ವತಂತ್ರ ಸ್ವಭಾವವನ್ನು (independant) ಹೊಂದಿರೋ ವ್ಯಕ್ತಿ, ಆದರೆ ಕರ್ಕಾಟಕ ರಾಶಿಯವರು ಸೂಕ್ಷ್ಮ ಮತ್ತು ಭಾವನಾತ್ಮಕ ಸ್ವಭಾವದವರು. ಇಬ್ಬರ ವಿರುದ್ಧ ಗುಣದಿಂದ ಈ ದಂಪತಿ ನಡುವೆ ಸಂಘರ್ಷಗಳು ಉಂಟಾಗುವ ಸಾಧ್ಯತೆ ಇದೆ.

Tap to resize

ಮೇಷ ರಾಶಿಯವರು ಯಾವುದೇ ವಿಷಯವನ್ನು ನೇರವಾಗಿ ಮಾತನಾಡೋದರಿಂದ, ಕರ್ಕಾಟಕ ರಾಶಿಯವರಿಗೆ ಅವರ ಮಾತು ಬೇಸರವನ್ನುಂಟು ಮಾಡಬಹುದು. ಇದು ತಪ್ಪು ತಿಳುವಳಿಕೆಗಳಿಗೆ ಕಾರಣವಾಗಬಹುದು. ದಂಪತಿ ಸಂವಹನ ನಡೆಸುವ ವಿಧಾನ ಮತ್ತು ಭಾವನಾತ್ಮಕ ಸ್ವಭಾವದಲ್ಲಿ (emotional character) ವ್ಯತ್ಯಾಸಗಳನ್ನು ಹೊಂದಿರುವುದು ಸಂಬಂಧದಲ್ಲಿ ಬಿರುಕು ಮೂಡೋದಕ್ಕೆ ಕಾರಣವಾಗಬಹುದು. 
 

ವೃಷಭ ಮತ್ತು ಕುಂಭ: 
ವೃಷಭ ರಾಶಿಯವರು ಸ್ಥಿರತೆ ಮತ್ತು ಸಂಪ್ರದಾಯವನ್ನು ಗೌರವಿಸುತ್ತಾರೆ, ಆದರೆ ಕುಂಭ ರಾಶಿಯವರು ಸ್ವತಂತ್ರ ಮತ್ತು ಸಂಪ್ರದಾಯವನ್ನು ಹೆಚ್ಚಾಗಿ ನಂಬದ ಸ್ವಭಾವ ಹೊಂದಿದ್ದಾರೆ, ಈ ಕಾರಣದಿಂದಾಗಿ ಈ ಎರಡು ರಾಶಿಚಕ್ರ ಚಿಹ್ನೆಗಳ (zodiac sign) ದಂಪತಿ ಸಂಬಂಧದಲ್ಲಿ ಕಷ್ಟಪಡಬೇಕಾಗುತ್ತೆ.

ವೃಷಭ ರಾಶಿಯ ಜನರು ಸಂಬಂಧದಲ್ಲಿ ಭದ್ರತೆಯನ್ನು ಬಯಸುತ್ತಾರೆ, ಇದು ಕೆಲವೊಮ್ಮೆ ಕುಂಭ ರಾಶಿಯ ಅನಿರೀಕ್ಷಿತ ಮತ್ತು ವಿಭಿನ್ನ ಸ್ವಭಾವದಿಂದ ಅನಾನುಕೂಲತೆಯನ್ನುಂಟು ಮಾಡುತ್ತೆ. ಆದ್ಯತೆಗಳು ಮತ್ತು ಜೀವನಶೈಲಿಯಲ್ಲಿನ ವ್ಯತ್ಯಾಸದ ಬಗ್ಗೆ ಈ ರಾಶಿಯ ದಂಪತಿಗಳ ನಡುವೆ ಪ್ರತಿದಿನ ಜಗಳ ಉಂಟಾಗುವ ಸಾಧ್ಯತೆಯೂ ಇದೆ
 

ಮಿಥುನ ಮತ್ತು ಕನ್ಯಾ ರಾಶಿ: 
ಮಿಥುನ ರಾಶಿಯವರು ಸೋಷಿಯಲ್ ಆಗಿರ್ತಾರೆ ಮತ್ತು ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ, ಆದರೆ ಕನ್ಯಾ ರಾಶಿಯವರು ಪ್ರಾಕ್ಟಿಕಲ್ ಆಗಿದ್ದು, ಎಲ್ಲವನ್ನೂ ಯೋಚನೆ ಮಾಡಿ ಮಾಡುವವರು. ಈ ಕಾರಣದಿಂದಾಗಿ ಈ ದಂಪತಿ ಸಂಬಂಧ ಬಿರುಕು ಬಿಡುವ ಸಾಧ್ಯತೆ ಇದೆ ಕನ್ಯಾ ರಾಶಿಯವರ  ಟೀಕಿಸುವ ಸ್ವಭಾವವನ್ನು ಸಹ ನಿರ್ಲಕ್ಷಿಸಲಾಗೋದಿಲ್ಲ, ಇದು ಮಿಥುನ ರಾಶಿಯವರ ಗುಣದ ಮೇಲೆ ಪರಿಣಾಮ ಬೀರಬಹುದು.

ಸಿಂಹ ಮತ್ತು ವೃಶ್ಚಿಕ: 
ಸಿಂಹ ರಾಶಿಯವರು ಎಲ್ಲರೂ ನನ್ನನ್ನೇ ಗಮನಿಸಬೇಕು, ನನ್ನನ್ನ ಹೊಗಳಬೇಕೆಂಬ ವ್ಯಕ್ತಿತ್ವದವರು. ಆದರೆ, ಕರ್ಕಾಟಕ ರಾಶಿಯವರು ಸೀಕ್ರೆಟ್ ಮತ್ತು ಆಳವಾದ ಭಾವನಾತ್ಮಕ ಸಂಪರ್ಕಕ್ಕೆ (Emotional Communication) ಆದ್ಯತೆ ನೀಡುತ್ತಾರೆ. ಈ ಕಾರಣದಿಂದಾಗಿ ಈ ರಾಶಿಗಳ ದಂಪತಿ ನಡುವೆ ಅನೇಕ ಬಾರಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವೃಶ್ಚಿಕ ರಾಶಿಯವರ ಅತಿಯಾದ ಭಾವನಾತ್ಮಕತೆ ಮತ್ತು ಕಂಟ್ರೋಲಿಂಗ್ ಸ್ವಭಾವದಿಂದಾಗಿ, ಸಿಂಹ ರಾಶಿಯವರು ಸಂಬಂಧದಲ್ಲಿ ಸ್ವಾತಂತ್ರ್ಯದ ಕೊರತೆಯನ್ನು ಅನುಭವಿಸಬಹುದು.

ತುಲಾ ಮತ್ತು ಮಕರ: 
ತುಲಾ ರಾಶಿಯವರು ಸಂಬಂಧಗಳಲ್ಲಿ ಬ್ಯಾಲೆನ್ಸ್ ಗೆ (balance in relationship) ಪ್ರಾಮುಖ್ಯತೆ ನೀಡುತ್ತಿದ್ದು ಮತ್ತು ಸೋಶಿಯಲ್ ಆಗಿರಲು ಇಷ್ಟಪಡುತ್ತಾರೆ, ಆದರೆ ಮಕರ ರಾಶಿಯವರು ತಮ್ಮ ಕೆಲಸ ಮತ್ತು ಭವಿಷ್ಯದ ಗುರಿಗಳಿಗೆ ಆದ್ಯತೆ ನೀಡುತ್ತಾರೆ. ಆದ್ಯತೆಗಳಲ್ಲಿನ ವ್ಯತ್ಯಾಸಗಳಿಂದಾಗಿ, ಈ ದಂಪತಿ ನಡುವೆ ಕೆಲವೊಮ್ಮೆ ಬಿರುಕು ಉಂಟಾಗುವ ಸಾಧ್ಯತೆ ಇದೆ.

Latest Videos

click me!