ಅಂಕಿಶಾಸ್ತ್ರದ ಪ್ರಕಾರ, ಯಾವುದೇ ತಿಂಗಳಿನ 5 ನೇ ತಾರೀಖಿನಂದು ಹುಟ್ಟಿದವರು ತುಂಬಾ ಚುರುಕಾಗಿರುತ್ತಾರೆ. ಅವರು ಓದುವ ಪಾಠ, ಮಾಡುವ ಕೆಲಸ ಎಲ್ಲವನ್ನೂ ಉತ್ಸಾಹದಿಂದ ಮಾಡುತ್ತಾರೆ. ಹೊಸ ವಿಷಯಗಳನ್ನು ಕಲಿಯುವ ಹಂಬಲ ಇರುತ್ತದೆ. ಬದುಕಿನಲ್ಲಿ ಬರುವ ಅಡೆತಡೆಗಳನ್ನು ದೃಢವಾಗಿ ಎದುರಿಸುತ್ತಾರೆ. ಅನುಭವದಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾರೆ. ಬದುಕನ್ನು ಸಂತೋಷದಿಂದ ಬಾಳಬೇಕೆಂಬ ಆಸೆ ಇರುವುದರಿಂದ ಅದರಂತೆ ಬದುಕುತ್ತಾರೆ. ಇವರು ಇತರರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಹೊಸ ತಂತ್ರಜ್ಞಾನ ಮತ್ತು ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಇವರಿಗೆ ತಿಳಿಯದ ವಿಷಯಗಳೇ ಇಲ್ಲ. ಒಂದು ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಹಲವು ಕ್ಷೇತ್ರಗಳಲ್ಲಿ ಜ್ಞಾನ ಹೊಂದಿರುತ್ತಾರೆ.