ಮನ ಶುದ್ಧಿಗಾಗಿ, ಆತ್ಮ ಶುದ್ಧಿಗಾಗಿ, ನೆಮ್ಮದಿ ಪಡೆಯೋದಕ್ಕಾಗಿ ಜನರು ನಿತ್ಯವೂ ದೇವರ ಪೂಜೆಯನ್ನು ಮಾಡುತ್ತಾರೆ. ಶ್ರದ್ಧೆ ಭಕ್ತಿಯಿಂದ ಎಲ್ಲಾ ಆಚರಣೆಗಳನ್ನು ಪಾಲಿಸಿ, ಪೂಜೆ ಮಾಡಲಾಗುತ್ತೆ, ಸಾಧ್ಯವಾದಷ್ಟು ಏಕಾಗ್ರತೆಯಿಂದ ಮಂತ್ರವನ್ನು ಕೂಡ ಜಪಿಸಲಾಗುತ್ತೆ, ಧ್ಯಾನ ಕೂಡ ಮಾಡಲಾಗುತ್ತದೆ.
26
ಆದರೆ ಹೆಚ್ಚಾಗಿ ಜಪ, ತಪ, ಪೂಜೆ ಮಾಡುವಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗುತ್ತದೆ. ಕೆಲವರಿಗೆ ಆಕಳಿಕೆ ಹೆಚ್ಚಾಗಿ ಬರುತ್ತದೆ, ಇನ್ನೂ ಕೆಲವರಿಗೆ ಕಣ್ಣೀರು ಬರುತ್ತೆ, ಇನ್ನೂ ಕೆಲವರಿಗೆ ಕೆಟ್ಟ ಯೋಚನೆಗಳು ಬರುತ್ತದೆ. ನಿಮಗೂ ಈ ರೀತಿ ಆಗುತ್ತಿದೆಯೇ? ಹಾಗಿದ್ರೆ ಇದು ಯಾಕೆ ಆಗುತ್ತದೆ? ಇದರ ಅರ್ಥ ಏನು ಅನ್ನೋದನ್ನು ತಿಳಿಯೋಣ.
36
ಆಕಳಿಕೆ
ನೀವು ಪೂಜೆ ಮಾಡುವ ಸಂದರ್ಭದಲ್ಲಿ, ಮಂತ್ರ ಜಪಿಸುವ ಸಂದರ್ಭದಲ್ಲಿ ಪದೇ ಪದೇ ಆಕಳಿಕೆ (yawning) ಬರುತ್ತಿದೆಯಾ? ಯಾಕೆ ನನಗೆ ಈ ರೀತಿಯಾಗುತ್ತಿದೆ ಎಂದು ಯೋಚನೆ ಮಾಡಿದ್ದೀರಾ? ಇದರ ಅರ್ಥ ನಿಮ್ಮ ವಿಚಾರಗಳು ಶುದ್ಧಿಯಾಗುತ್ತಿವೆ ಎಂದು.
ಇನ್ನೂ ಕೆಲವರಿಗೆ ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಅಥವಾ ದೇವಾಲಯಕ್ಕೆ ಹೋದಾಗ, ಅಲ್ಲಿ ದೇವರ ಮೂರ್ತಿಯನ್ನು ನೋಡುವ ಸಂದರ್ಭದಲ್ಲಿ ಕಣ್ಣೀರು (tears) ಬರುತ್ತದೆ. ಇದರ ಅರ್ಥ ದೇವರ ಜೊತೆ ನೀವು ಸಂಪರ್ಕದಲ್ಲಿ ಇದ್ದೀರಿ. ಹಾಗೂ ದೇವರು ನಿಮ್ಮ ಪ್ರಾರ್ಥನೆಯನ್ನು ಕೇಳಿದ್ದಾರೆ ಎಂದು ಅರ್ಥ.
56
ರೋಮಾಂಚನ
ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಮೈಯಲ್ಲಿ ರೋಮಾಂಚನ (goosebumps) ಆದರೆ ಇದಕ್ಕೂ ಒಂದು ಅರ್ಥವಿದೆ. ದೈವೀಕ ಶಕ್ತಿ ನಿಮ್ಮ ದೇಹವನ್ನು ಸ್ಪರ್ಶ ಮಾಡುತ್ತಿದೆ ಅನ್ನೋದನ್ನು ಇದು ಸೂಚಿಸುತ್ತದೆ.
66
ಕೆಟ್ಟ ಆಲೋಚನೆ
ಕೆಲವು ಜನರಿಗೆ ಪೂಜೆ ಮಾಡುವಾಗ ಅಥವಾ ಮಂತ್ರ ಪಠಿಸುವಾಗ ಕೆಟ್ಟ ಆಲೋಚನೆಗಳು (bad thinking) ಬರುತ್ತವೆ. ಮನಸ್ಸನ್ನು ಅದೆಷ್ಟೇ ಕಂಟ್ರೋಲ್ ಮಾಡಿದರೂ ಸಹ ಕೆಟ್ಟ ಆಲೋಚನೆಗಳು ನಿಲ್ಲೋದಿಲ್ಲ. ಇದು ಯಾಕೆ ಹೀಗಾಗುತ್ತೆ ಅಂದರೆ ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ ಅನ್ನೋದು ಅರ್ಥ.