ಯಾವ ರಾಶಿಗೆ ಯಾವ ನಂಬರ್ ಲಕ್ಕಿ? ಯಾವಾಗ ಏನು ಕೆಲಸ ಮಾಡಬೇಕು?

ಭಾರತದಲ್ಲಿ ಸಾಮಾನ್ಯರು ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ದಿನಾಂಕ ನೋಡಿಯೇ ಹೆಜ್ಜೆ ಇಡೋರೂ ಇದ್ದಾರೆ. ಯಾವ ರಾಶಿಯವರಿಗೆ ಯಾವ ನಂಬರ್ ಲಕ್ ತರುತ್ತೆ? 
 

numerology methods of finding lucky number of zodiac signs suh

ವ್ಯಕ್ತಿಗೆ ಅದೃಷ್ಟ ತರುವ ಸಂಖ್ಯೆ ಯಾವುದೆಂದು ಸಂಖ್ಯಾ ಶಾಸ್ತ್ರ ಹೇಳುತ್ತೆ. ಕೆಲವು ವಸ್ತು, ಬಣ್ಣ ಅಥವಾ  ನಿರ್ದಿಷ್ಟ ಸಂಖ್ಯೆ ಹಲವರಿಗೆ ಅದೃಷ್ಟ ತರುತ್ತದೆ ಎಂಬುದನ್ನು ನಂಬುತ್ತಾರೆ. ಕೆಲವರಿಗೆ ಹುಟ್ಟಿದ ದಿನ ಅದೃಷ್ಟ ತಂದರೆ ಮತ್ತೆ ಕೆಲವರಿಗೆ ಅದೇ ಮಾರಕವಾಗಿರುತ್ತದೆ. ರಾಶಿ ಆಧಾರದ ಮೇಲೆ ಅದೃಷ್ಟ ತರುವ ನಂಬರ್ ಹಾಗಾದರೆ ಆಯಾ ರಾಶಿಯವರ ಲಕ್ಕಿ ನಂಬರ್? ವ್ಯಕ್ತಿಯ ಜಾತಕ ನೋಡಿ ಅದೃಷ್ಟ ಹೇಗಿದೆ ಎಂಬುದನ್ನು ಹೇಳುತ್ತೆ ಜ್ಯೋತಿಷ್ಯ. ಸಂಖ್ಯಾ ಶಾಸ್ತ್ರದಲ್ಲೂ ವ್ಯಕ್ತಿಗೆ ಅದೃಷ್ಟ ತಂದುಕೊಡುವ ಸಂಖ್ಯೆ ಯಾವುದೆಂದು ಹೇಳಬಹುದು. ಸಾಮಾನ್ಯವಾಗಿ ಹುಟ್ಟಿನ ದಿನಾಂಕವೇ ಅದೃಷ್ಟ ತರೋ ಸಂಖ್ಯೆ ಎಂದು ತಿಳಿದಿರುತ್ತೇವೆ. ಅದು ನಿಜವಾಗಬೇಕೆಂದೇನೂ ಇಲ್ಲ. ಕೆಲವರಿಗೆ ಹುಟ್ಟಿದ ದಿನ ಅದೃಷ್ಟ ತಂದರೆ, ಮತ್ತೆ ಕೆಲವರಿಗದು ನತದೃಷ್ಟವೂ ಆಗಿರಬಹುದು. ಜನ್ಮ ತಿಥಿಯನ್ನಾಧರಿಸಿ ವ್ಯಕ್ತಿತ್ವವನ್ನು ಅಳೆಯಬಹುದು. ಹಾಗೆಯೇ ರಾಶಿ ಆಧಾರದ ಮೇಲೆ ಅದೃಷ್ಟ ತರುವ ಸಂಖ್ಯೆ ಯಾವುದೆಂದೂ ಹೇಳಬಹುದು. ಹಾಗಾದರೆ ರಾಶಿಯನುಸಾರ ಯಾವ ಸಂಖ್ಯೆ ಯಾರಿಗೆ ಅದೃಷ್ಟು ಖುಲಾಯಿಸುವಂತೆ ಮಾಡುತ್ತದೆ? 
 

numerology methods of finding lucky number of zodiac signs suh

ಈ ರಾಶಿಗೆ ಮಂಗಳ ಗ್ರಹ ಅಧಿಪತಿ. ಹಾಗಾಗಿ ಇವರು ಪ್ರತಿ ಕೆಲಸದಲ್ಲೂ ಅತ್ಯುತ್ತಮ ಪರಿಣಾಮವನ್ನು ಅಪೇಕ್ಷಿಸುತ್ತಾರೆ. ಇವರ ಲಕ್ಕಿ ನಂಬರ್ 1. ಹಾಗಾಗಿ ಮೇಷ ರಾಶಿಯವರು ಉತ್ತಮ ಕೆಲಸಗಳನ್ನು ಆರಂಭಿಸುವಾಗ 1 ಕ್ಕೇ ಆದ್ಯತೆ ನೀಡಿದರೆ ಒಳ್ಳೇದು. 1 ಹೊರತುಪಡಿಸಿ, 9, 36, 13, 69, 53, 67 ಈ ಸಂಖ್ಯೆಗಳು ಲಕ್ಕಿಯಾಗಿರುತ್ತವೆ. 
 


ಈ ರಾಶಿಯ ಅಧಿಪತಿ ಶುಕ್ರ. ಇವರು ಹೆಚ್ಚು ರೊಮ್ಯಾಂಟಿಕ್ ಆಗಿದ್ದು, ತರ್ಕಿಸುವ ಬುದ್ಧಿ ಇದ್ದರೂ ದಯಾಳಾಗಿರುತ್ತಾರೆ. 2 ಇವರ ಲಕ್ಕಿ ನಂಬರ್. ವೃಷಭ ರಾಶಿಯವರ ಲಕ್ ಬದಲಿಸುತ್ತೆ ಸಂಖ್ಯೆ ಎರಡು. ಅದನ್ನು ಬಿಟ್ಟರೆ 6, 9, 11, 35, 50, 57, 82 ಈ ಸಂಖ್ಯೆಗಳು ಲಕ್ಕಿ ಆಗಿರುತ್ತವೆ. 
 

ಬುಧ ಗ್ರಹ ಅಧಿಪತಿಯಾಗಿರೋ ರಾಶಿ ಇದು. ಹಾಗಾಗಿ ಇವರು ಹೆಚ್ಚು ಬುದ್ಧಿವಂತರು ಮತ್ತು ಕ್ರಿಯಾಶೀಲರಾಗಿರುತ್ತಾರೆ. ಇವರ ಅದೃಷ್ಟ ಸಂಖ್ಯೆ 8. ಬಿಟ್ಟರೆ 3, 12, 18, 35, 43, 52, 86 ಈ ಸಂಖ್ಯೆಗಳು ಅದೃಷ್ಟ ತರಬಹುದು. 
 

ಈ ರಾಶಿ ಅಧಿಪತಿ ಚಂದ್ರಗ್ರಹ. ಸರಳ ಸ್ವಭಾವದ ಈ ರಾಶಿಯವರಿಗೆ ಸಂಖ್ಯೆ 7 ಲಕ್ಕಿ ನಂಬರ್. ಉತ್ತಮ ಕಾರ್ಯಗಳಲ್ಲಿ ಈ ಸಂಖ್ಯೆಯನ್ನು ಬಳಸಿದರೆ ಶುಭಫಲ ಗ್ಯಾರಂಟಿ. ಸಂಖ್ಯೆ 7ನ್ನು ಬಿಟ್ಟರೆ 2, 11, 58, 24, 66, 53 ಈ ಸಂಖ್ಯೆಗಳು ಲಕ್ಕಿ ಎನ್ನಬಹುದು. 
 

ಧೈರ್ಯಶಾಲಿಗಳೂ ಆದ ಸಿಂಹ ರಾಶಿ ಅಧಿಪತಿ ಸೂರ್ಯ ಗ್ರಹ. ಹಠ ಸ್ವಭಾವದರಾಗಿರೋ ಈ ರಾಶಿಯವರು ಬೇಗ ಸೋಲೊಪ್ಪಿಕೊಳ್ಳುವಂಥರಲ್ಲ. ಇವರಿಗೆ ಅದೃಷ್ಟ ತರುವ ಸಂಖ್ಯೆ 1. ಬಿಟ್ಟರೆ 4, 10, 34, 83, 59 ಈ ಸಂಖ್ಯೆಗಳು ಲಕ್ಕಿ.
 

ಈ ರಾಶಿಯ ಅಧಿಪತಿ ಬುಧ. ಈ ರಾಶಿಯವರೂ ಸೂಕ್ಷ್ಮ ಮತ್ತು ದಯಾ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಸಂಖ್ಯೆ 5 ಅದೃಷ್ಟ ತಂದುಕೊಡುತ್ತದೆ. 5 ಅನ್ನು ಬಿಟ್ಟರೆ 3, 16, 90, 29, 80 ಈ ಸಂಖ್ಯೆಗಳು ಲಕ್ಕ ಎನ್ನಬಹುದು. 
 

ಈ ರಾಶಿಯ ಅಧಿಪತಿ ಗ್ರಹ ಶುಕ್ರ. ಹಾಗಾಗಿ ಈ ರಾಶಿಯವರಿಗೆ ಆದರ್ಶ ವ್ಯಕ್ತಿತ್ವ ಇರುತ್ತದೆ. ಇವರಿಗೆ ಸಂಖ್ಯೆ 4 ಶುಭವೆನ್ನಬಹುದು. ಸಂಖ್ಯೆ 4 ಅನ್ನು ಬಿಟ್ಟರೆ 6, 7, 20, 55, 35 ಈ ಸಂಖ್ಯೆಗಳು ಶುಭವೆನ್ನಬಹುದು. 
 

ಈ ರಾಶಿಯ ಗ್ರಹಾಧಿಪತಿ ಮಂಗಳ. ಈ ರಾಶಿಯವರು ಹೆಚ್ಚು ಕ್ರಿಯಾಶೀಲರು ಮತ್ತು ಸ್ವಂತತ್ರ ಸ್ವಭಾವದರಾಗಿರುತ್ತಾರೆ. ಇವರಿಗೆ ಸಂಖ್ಯೆ 9 ಅದೃಷ್ಟ ತರುತ್ತದೆ. 9 ಅನ್ನು ಬಿಟ್ಟರೆ 11, 17, 27, 45, 53 ಈ ಸಂಖ್ಯೆಗಳು ಲಕ್ಕಿ ಎನ್ನಬಹುದು. 
 

ಈ ರಾಶಿಯ ಅಧಿಪತಿ ಗುರು. ಅಂದುಕೊಂಡ ಗುರಿ ಸಾಧಿಸುವವರೆಗೂ ಛಲ ಬಿಡುವುದಿಲ್ಲ ಇವರು. ಸಂಖ್ಯೆ  3 ಇವರಿಗೆಅದೃಷ್ಟ ತರುತ್ತದೆ. ಸಂಖ್ಯೆ 3ನ್ನು ಬಿಟ್ಟರೆ 5, 15, 12, 21, 30 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.
 

ಈ ರಾಶಿ ಅಧಿಪತಿ ಶನಿ. ಹೆಚ್ಚು ಆತ್ಮವಿಶ್ವಾಸವುಳ್ಳ ಈ ರಾಶಿಯವರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು. ಇವರಿಗೆ ಸಂಖ್ಯೆ 4 ಅದೃಷ್ಟ ತಂದುಕೊಡುತ್ತದೆ. ಸಂಖ್ಯೆ 4 ಬಿಟ್ಟರೆ 1, 10, 13, 17, 22, 25 ಈ ಸಂಖ್ಯೆಗಳು ಲಕ್ಕ ಎನ್ನಬಹುದು. 
 

ಈ ರಾಶಿಯ ಅಧಿಪತಿ ಗ್ರಹವೇ ಶನಿದೇವ. ಈ ರಾಶಿಯವರು ಕ್ರಿಯಾಶೀಲರು ಮತ್ತು ವಿದೇಯ ಗುಣ ಹೊಂದಿರುತ್ತಾರೆ. ಇವರಿಗೆ ಸಂಖ್ಯೆ 8 ಶುಭ ತರುತ್ತದೆ. ಸಂಖ್ಯೆ 8ಅನ್ನು ಬಿಟ್ಟರೆ 4, 13, 17, 40, 61 ಈ ಸಂಖ್ಯೆಗಳು ಲಕ್ಕಿ.
 

ಗುರುಗ್ರಹ ಮೀನ ರಾಶಿಯವರ ಅಧಿಪತಿ. ಈ ರಾಶಿಯವರು ಸಮಸ್ಯೆಗಳನ್ನು ಬಹುಬೇಗ ನಿವಾರಿಸಿಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾರೆ. ಇವರಿಗೆ ಅದೃಷ್ಟ ತರುವ ಸಂಖ್ಯೆ 3. ಬಿಟ್ಟರೆ 12, 27, 30, 34, 61 ಈ ಸಂಖ್ಯೆಗಳು ಲಕ್ಕಿ.
 

Latest Videos

vuukle one pixel image
click me!