'Men are from Mars, Women are from Venus' - ಪುರುಷರು ಮಂಗಳದಿಂದ ಬಂದವರು ಮತ್ತು ಮಹಿಳೆಯರು ಶುಕ್ರದಿಂದ ಬಂದವರು ಎಂಬುದು ಇನ್ನೂ ಹೆಚ್ಚಿನ ಪುರುಷರ ಸಿದ್ಧಾಂತವಾಗಿದೆ. ಅವರು ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಾರೆ. ಈಕೆ ಹೀಗೆ ಎಂದು ಒಬ್ಬಳನ್ನು ಅರ್ಥ ಮಾಡಿಕೊಂಡ ಕೆಲವೇ ಕ್ಷಣದಲ್ಲಿ ಮಹಿಳೆಯ ವಿಭಿನ್ನ ಮುಖವು ಅವರನ್ನು ದಾರಿ ತಪ್ಪಿಸುತ್ತದೆ. ಮೀನಿನ ಹೆಜ್ಜೆ, ಹೆಣ್ಣಿನ ಮನಸ್ಸು ಅರ್ಥ ಮಾಡಿಕೊಳ್ಳಲಾಗದು ಎನ್ನಲಾಗುತ್ತದೆ. ಆದರೆ, ನಿಮ್ಮ ಸಹಾಯಕ್ಕಾಗಿ ಯಾವ ರಾಶಿಯ ಮಹಿಳೆಯರ ಸ್ವಭಾವ ಹೇಗಿರುತ್ತದೆ ಎಂಬ ಚಿತ್ರಣ ನಾವು ನೀಡಿದ್ದೇವೆ.