ಚಾಣಕ್ಯನ ಪ್ರಕಾರ ಗಂಡ-ಹೆಂಡತಿಯ ಈ ತಪ್ಪಿನಿಂದಾನೇ ಅನೈತಿಕ ಸಂಬಂಧವೊಂದು ಹುಟ್ಟೋದಂತೆ!

First Published | Nov 21, 2023, 2:43 PM IST

ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಉತ್ತಮ ವೈವಾಹಿಕ ಜೀವನಕ್ಕೆ ಏನೇನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ ಅವರು ಪತಿ -ಪತ್ನಿ ಮಾಡುವ ಒಂದು ಸಣ್ಣ ತಪ್ಪಿನಿಂದ ಸಂಬಂಧ ದೂರ ಆಗುತ್ತೆ ಎಂದಿದ್ದಾರೆ, ಆ ತಪ್ಪು ಯಾವುದು ನೋಡೋಣ. 
 

ಚಾಣಕ್ಯ (Chanakya Niti) ಅಂದರೆ ಕೌಟಿಲ್ಯನು ಭಾರತೀಯ ಇತಿಹಾಸದ ಶ್ರೇಷ್ಠ ತತ್ವಜ್ಞಾನಿಗಳು, ಸಲಹೆಗಾರರು ಮತ್ತು ಶಿಕ್ಷಕರಲ್ಲಿ ಒಬ್ಬ. ಚಾಣಕ್ಯ ನೀತಿಯನ್ನು ಅನುಸರಿಸುವ ವ್ಯಕ್ತಿ ಯಾವಾಗಲೂ ಜೀವನದಲ್ಲಿ ಯಶಸ್ವಿಯಾಗುತ್ತಾನೆ. ಆಚಾರ್ಯ ಚಾಣಕ್ಯನ ನೀತಿ ಪ್ರಕಾರ, ಗಂಡ ಮತ್ತು ಹೆಂಡತಿ ಪರಸ್ಪರ ಪೂರಕವಾಗಿರುತ್ತಾರೆ. ಅವರಲ್ಲಿ ಯಾರಾದರೂ ಈ ತಪ್ಪನ್ನು ಮಾಡಿದರೆ, ಮನೆ ನಾಶವಾಗುತ್ತದೆ.
 

ಆಚಾರ್ಯ ಚಾಣಕ್ಯನ ಪ್ರಕಾರ, ಕುಟುಂಬದ ಸಂತೋಷ (Happiness) ಮತ್ತು ಶಾಂತಿಯು  (Peace)ಗಂಡ ಮತ್ತು ಹೆಂಡತಿಯ ಸಿಹಿ ಸಂಬಂಧವನ್ನು ಅವಲಂಬಿಸಿರುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ಸಮನ್ವಯವಿಲ್ಲದ ಮನೆಯಲ್ಲಿ, ಲಕ್ಷ್ಮಿ ವಾಸಿಸುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗಂಡ ಮತ್ತು ಹೆಂಡತಿ (Husband and wife) ಈ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. 

Tap to resize

ಸಂತೋಷದ ವೈವಾಹಿಕ ಜೀವನಕ್ಕಾಗಿ (married life) ಚಾಣಕ್ಯ ಕೆಲವು ಸಲಹೆಗಳನ್ನು ನೀಡಿದ್ದಾನೆ. ಇದನ್ನು ಪ್ರಯತ್ನಿಸುವ ಮೂಲಕ, ನೀವು ನಿಮ್ಮ ಸಂಬಂಧವನ್ನು ಉತ್ತಮಗೊಳಿಸಬಹುದು. ಇಲ್ಲವಾದರೆ ಆ ಸಂಬಂಧವು ಬೇಗ ಮುರಿದು ಬೀಳುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಯಾವ ಅಂಶ ತುಂಬಾನೆ ಮುಖ್ಯ ನೋಡೋಣ. 
 

ಆಚಾರ್ಯ ಚಾಣಕ್ಯನ ಪ್ರಕಾರ, ಜನರು ಪರಸ್ಪರ ಗೌರವಿಸದ ಸ್ಥಳದಲ್ಲಿ ಮದುವೆ ಎಂದಿಗೂ ಉಳಿಯುವುದಿಲ್ಲ. ಎಲ್ಲಿ ಗೌರವವಿಲ್ಲವೋ ಅಲ್ಲಿ ಪ್ರೀತಿಯ ಪ್ರಶ್ನೆಯೇ ಇಲ್ಲ. ಅಂತಹ ಮದುವೆಯಲ್ಲಿ ಯಾರೂ ಸಂತೋಷವಾಗಿರೋದಿಲ್ಲ. ಈ ಒಂದು ತಪ್ಪಿನಿಂದಾಗಿ, ಇಬ್ಬರು ವ್ಯಕ್ತಿಗಳು ತಮ್ಮ ಜೀವನದುದ್ದಕ್ಕೂ ಪರಸ್ಪರ ಗೌರವಿಸಲು ಸಾಧ್ಯವಾಗುವುದಿಲ್ಲ  ಗಂಡ ಅಥವಾ ಹೆಂಡತಿ ಪರಸ್ಪರ ಗೌರವಿಸದಿದ್ದರೆ ಅಂತಹ ಮದುವೆಗೆ ಯಾವುದೇ ಅರ್ಥವಿಲ್ಲ.

ಆಚಾರ್ಯ ಚಾಣಕ್ಯನು (Acharya Chanakya) ಹೇಳುವಂತೆ, ಸಂಗಾತಿಗಳು ಪರಸ್ಪರ ಕಾಳಜಿ (Caring) ವಹಿಸದಿದ್ದರೆ ಆ ಸಂಬಂಧವು ಕೇವಲ ಒಂದು ಹೆಸರು ಮಾತ್ರ.  ಅಲ್ಲಿ ಎಲ್ಲವೂ ನಡೆಯುತ್ತದೆ, ಆದರೆ ಪ್ರೀತಿ (Love) ಇರೋದೆ ಇಲ್ಲ. ಅಂತಹ ಸಂಬಂಧದಲ್ಲಿ, ಮೋಸವೂ ಇರುತ್ತೆ. ಪರಸ್ಪರ ಮೋಸ ಮಾಡುತ್ತಿರುತ್ತಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಕಾನೂನುಬಾಹಿರ ಸಂಬಂಧವನ್ನು ರೂಪಿಸುವ ಸಾಧ್ಯತೆಯೂ ಇದೆ. ಇದರಿಂದ ದಾಂಪತ್ಯ ಜೀವನದಲ್ಲಿ ಬಿರುಕು ಸಾಧ್ಯ. 

ಸಂಗಾತಿಗಳು ಪರಸ್ಪರ ಗೌರವಿಸದಿದ್ದಾಗ, ಅವರು ಪರಸ್ಪರ ಮುಖ್ಯವಾದ ಎಲ್ಲವನ್ನೂ ಮರೆಮಾಡುತ್ತಾರೆ. ಸಂಬಂಧದ ಅಡಿಪಾಯ ನಂಬಿಕೆ ಮೇಲೆ ನಿಂತಿದೆ. ಆದ್ದರಿಂದ, ಗಂಡ ಮತ್ತು ಹೆಂಡತಿ ತಮ್ಮ ಪ್ರತಿಯೊಂದು ಸಣ್ಣ ವಿಷಯವನ್ನು ತಮ್ಮ ಸಂಗಾತಿಗೆ ಹೇಳಬೇಕು. ಇಬ್ಬರೂ ಪರಸ್ಪರ ವಿಷಯಗಳನ್ನು ಮರೆಮಾಚಿದರೆ, ನಂತರ ಮದುವೆಯ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ. 

Latest Videos

click me!