ಬುಧ ಮತ್ತು ಪ್ಲುಟೊ ಗ್ರಹಗಳ ಸಂಯೋಗದಿಂದ ನವಪಂಚಮ ರಾಜಯೋಗ ಉಂಟಾಗಿದ್ದು, ಇದು ಮಿಥುನ, ಕನ್ಯಾ ಮತ್ತು ತುಲಾ ರಾಶಿಯವರಿಗೆ ಸಂಪತ್ತು, ವೃತ್ತಿ ಯಶಸ್ಸು ಮತ್ತು ಆರ್ಥಿಕ ಸುಧಾರಣೆಯಂತಹ ಶುಭ ಫಲಗಳನ್ನು ತರಲಿದೆ. ಈ ರಾಜಯೋಗದಿಂದಾಗಿ ಈ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳು ನಿರೀಕ್ಷಿತವಾಗಿವೆ.
ಗ್ರಹಗಳು ಪರಸ್ಪರ 120 ಡಿಗ್ರಿ ಕೋನದಲ್ಲಿದ್ದಾಗ ನವಪಂಚಮ ರಾಜಯೋಗ ರಚನೆಯಾಗುತ್ತದೆ. ಈ ರಚನೆಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ. ಈ ಯೋಗ ಕೆಲವು ರಾಶಿಚಕ್ರಗಳಿಗೆ ಸಂಪತ್ತು, ಸಮೃದ್ಧಿ, ಗೌರವ ಮತ್ತು ಯಶಸ್ಸು ನೀಡುತ್ತದೆ. ಜ್ಞಾನ, ವ್ಯವಹಾರ, ಸಂವಹನ ಮತ್ತು ಪ್ರಯಾಣದ ಅಧಿಪತಿಯಾಗಿರುವ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ.
ಇನ್ನು ಪ್ಲುಟೋ ಮಾನಸಿಕ ಬದಲಾವಣೆ ಮತ್ತು ಸಂಪತ್ತನ್ನು ಸೂಚಿಸುತ್ತದೆ. ಈ ಎರಡು ಗ್ರಹಗಳು ಜೊತೆಯಾಗಿ ಸೇರಿದಾಗ ಜೀವನದಲ್ಲಿ ಹಲವು ದೊಡ್ಡ ಬದಲಾವಣೆಗಳು ಉಂಟಾಗುತ್ತವೆ. ವ್ಯವಹಾರದಲ್ಲಿ ಪ್ರಗತಿ ಮತ್ತು ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆಗಳಿರುತ್ತವೆ.
25
ನವಪಂಚಮ ರಾಜಯೋಗ 2025
ಸೆಪ್ಟೆಂಬರ್ 19 ರಂದು ಬೆಳಗ್ಗೆ 7:04 ಕ್ಕೆ 120 ಡಿಗ್ರಿಯಲ್ಲಿ ಬುಧ ಮತ್ತು ಪ್ಲುಟೋ ಪರಸ್ಪರ ಭೇಟಿಯಾಗಿದ್ದಾರೆ. ಪ್ಲುಟೋ ಸದ್ಯ ಮಕರ ರಾಶಿಯಲ್ಲಿ ಪ್ರಯಾಣಿಸುತ್ತಿದ್ರೆ , ಬುಧ ಗ್ರಹ ತನ್ನದೇ ಕನ್ಯಾರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ.
ಬುಧ ಗ್ರಹ ತಿಂಗಳಿಗೆ ಎರಡು ಬಾರಿ ರಾಶಿಯನ್ನು ಬದಲಾಯಿಸೋದರಿಂದ ಇತರೆ ಗ್ರಹಗಳನ್ನು ನಿರ್ದಿಷ್ಟ ದೂರದಲ್ಲಿ ಸಂಪರ್ಕಿಸುವ ಮೂಲಕ ರಾಜಯೋಗ ಸೃಷ್ಟಿಸುತ್ತಾನೆ.
35
ಮಿಥುನ ರಾಶಿ
ಬುಧ ಗ್ರಹದಿಂದ ರಚನೆಯಾಗಿರುವ ನವಪಂಚಮ ರಾಜಯೋಗ ಮಿಥುನ ರಾಶಿಯವರಿಗೆ ಲಾಭದಾಯಕವಾಗಿದೆ. ಈ ಯೋಗದಿಂದ ಹೊಸ ಅವಕಾಶ, ದೂರ ಪ್ರಯಾಣದ ಲಾಭಗಳು ಸಿಗಲಿವೆ. ಸಂವಹನ ಕೌಶಲ್ಯ ವೃದ್ಧಿಯಿಂದಾಗಿ ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳು ಸಿಗಲಿವೆ.
ವ್ಯಾಪಾರ ಕ್ಷೇತ್ರದಲ್ಲಿರೋರಿಗೆ ಲಾಭದ ಪ್ರಮಾಣ ಹೆಚ್ಚಳವಾಗುತ್ತದೆ. ಇದೆಲ್ಲದರಿಂದ ಹಣಕಾಸಿನ ಆಗಮನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ, ಸಣ್ಣ ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಆರಂಭಿಸುತ್ತೀರಿ.
ಕನ್ಯಾ ರಾಶಿಯಲ್ಲಿ ಬುಧ ಲಗ್ನದಲ್ಲಿದ್ದು, ಪ್ಲೂಟೋ ಐದನೇ ಮನೆಯಲ್ಲಿದ್ದಾರೆ. ಹಾಗಾಗಿ ಈ ನವಪಂಚಮ ರಾಜಯೋಗದಿಂದ ಕನ್ಯಾ ರಾಶಿಚಕ್ರದವರಿಗೆ ಮಂಗಳಕರವನ್ನುಂಟು ಮಾಡಲಿದೆ. ಎಲ್ಲಾ ಕ್ಷೇತ್ರಗಳಲ್ಲಿರುವ ಕನ್ಯಾ ರಾಶಿಯವರಿಗೆ ಈ ಯೋಗ ಲಾಭವನ್ನು ತಂದುಕೊಡಲಿದೆ.
ಹೊಸ ಕೆಲಸ ಆರಂಭವಾಗಲಿದ್ದು, ಇದಕ್ಕಿರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ. ವ್ಯವಹಾರದಲ್ಲಿ ಎದುರಾಳಿಗಳ ಸಂಖ್ಯೆ ಕಡಿಮೆಯಾಗಿ ಎರಡು ಪಟ್ಟು ಲಾಭ ಸಿಗಲಿದೆ. ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ನೆಮ್ಮದಿ ಕಾಣುತ್ತೀರಿ.
ತುಲಾ ರಾಶಿಯಲ್ಲಿ ಬುಧ ಹನ್ನೆರಡನೇ ಮನೆಯಲ್ಲಿ ಮತ್ತು ಪ್ಲೂಟೋ ನಾಲ್ಕನೇ ಮನೆಯಲ್ಲಿ ಸಂಚರಿಸುತ್ತಾರೆ. ಈ ಕಾರಣದಿಂದ ತುಲಾ ರಾಶಿಯವರಿಗೆ ಅನಿರೀಕ್ಷಿತ ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಪೂರ್ವಜರ ಅಥವಾ ಪಿತ್ರಾರ್ಜಿತ ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ಅಚ್ಚರಿ ಎಂಬಂತೆ ಬಗೆಹರಿಯುತ್ತವೆ. ಮನೆ/ವಾಹನ ಖರೀದಿಸುವ ಅವಕಾಶಗಳು ಬರಲಿವೆ. ಉದ್ಯೋಗಿಗಳ ಸಂಬಳ ಹೆಚ್ಚಾಗಲಿದ್ದು, ಇದರಿಂದ ಮನಸ್ಸು ಶಾಂತಿಯುತವಾಗಿರುತ್ತದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.