ಮಂಗಳ ರಾಹುವಿನ ಅಂಗಾರಕ ಯೋಗದಿಂದ ಸಂಕಷ್ಟ, 3 ರಾಶಿಯ ಉದ್ವೇಗ ಹೆಚ್ಚಾಗಲಿದೆ ಎಚ್ಚರ

First Published | Apr 24, 2024, 11:05 AM IST

ಮಂಗಳ ಮೀನ ರಾಶಿಯನ್ನು ಪ್ರವೇಶಿಸಿದ್ದು ,ರಾಹುವಿನೊಂದಿಗೆ ಅಂಗಾರಕ ಯೋಗ ಉಂಟಾಗಲಿದೆ ಹೀಗಾಗಿ ಕೆಲವು ರಾಶಿಯವರು ಜಾಗ್ರತೆಯಿಂದಿರ ಬೇಕು.

ಧೈರ್ಯ ,ಶೌರ್ಯ ಮತ್ತು ಶಕ್ತಿಗೆ ಕಾರಣವಾದ ಗ್ರಹವಾದ ಮಂಗಳವು ಎಪ್ರಿಲ್ 23 ರಂದು ಬೆಳಗ್ಗೆ 8.38 ಕ್ಕೆ ಮೀನ ರಾಶಿಯನ್ನು ಪ್ರವೇಶಿಸಿದೆ. ಜೂನ್‌ 1 ರವರೆಗೆ ಈ ರಾಶಿಯಲ್ಲಿರುತ್ತದೆ. ಮೀನ ರಾಶಿಯಲ್ಲಿ ಮಂಗಳ ಮತ್ತು ರಾಹು ಸೇರಿ ಅಂಗಾರಕ ಯೋಗವನ್ನು ಸೃಷ್ಠಿಸಿದೆ.
 

ಜ್ಯೋತಿಷ್ಯದಲ್ಲಿ ಅಂಗಾರಕ ಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ರಾಹು ಜೊತೆಯಲ್ಲಿ ಮಂಗಳವು ಬಂದರೆ ಅದು ಜೀವನದಲ್ಲಿ ಕಷ್ಟಗಳು ಬರುತ್ತದೆ.ಈ ಸಂಯೋಜನೆಯು ಕೆಲವು ರಾಶಿಯ ಜೀವನದಲ್ಲಿ ಏರು ಪೇರುಗಳನ್ನು ಉಂಟು ಮಾಡುತ್ತದೆ.
 

Tap to resize

 ಅಂಗಾರಕ ಯೋಗದ ಪ್ರಭಾವದಿಂದ ಮೇಷ ರಾಶಿಯ ಜನರು ಬಹಳ ಜಾಗರೂಕರಾಗಿರಬೇಕು. ಅಧಿಕ ಖರ್ಚು ಇರುತ್ತದೆ. ಕೆಲಸದಲ್ಲಿ ಅಡೆತಡೆ ಇರುತ್ತದೆ. ಶುಭ ಕಾರ್ಯಗಳು ವಿಳಂಬವಾಗಿದೆ. ಆಸ್ತಿಗೆ ಸಂಬಂಧಿಸಿದ ವಿವಾದ ವಿರುತ್ತದೆ.

ಕನ್ಯಾ ರಾಶಿಗೆ ಸಂಬಂಧಗಳಲ್ಲಿ ಕಹಿ ಹೆಚ್ಚಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಯಾರನ್ನು ನಂಬಬೇಡಿ. ಕೆಲಸದಲ್ಲಿ ಅಡೆತಡೆ ಇರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ.ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಸಂಚಾರ ನಿಯವನ್ನು ಪಾಲಿಸಿ.
 

ಧನು ರಾಶಿಗೆ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಮಾನಸಿಕ ಗೊಂದಲ ಉಂಟಾಗಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಏರಿಳಿತಗಳಿರುತ್ತದೆ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಕೋಪವನ್ನು ಕಡಿಮೆ ಮಾಡಿ.
 

Latest Videos

click me!