ಜನ್ಮದಿನದಂದು ನಿಮ್ಮ ಜನ್ಮ ದಿನಾಂಕದ ಪ್ರಕಾರ ನೀವು ಯಾವ ಬಣ್ಣದ ಬಟ್ಟೆಯನ್ನು ಧರಿಸೋದು ಉತ್ತಮ ಅನ್ನೋದನ್ನು ತಿಳಿಯೋಣ
1, 10, 19, 28 ರಂದು ಹುಟ್ಟುಹಬ್ಬ ಇರುವವರು
ನಿಮ್ಮ ಜನ್ಮದಿನವು ಇಲ್ಲಿ ಹೇಳಲಾದ ಯಾವುದೇ ದಿನಾಂಕದಂದು ಬಂದರೆ, ಈ ದಿನದಂದು ಕಿತ್ತಳೆ(Orange) ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ಬಣ್ಣದ ಬಟ್ಟೆಗಳು ನಿಮ್ಮ ಜೀವನಕ್ಕೆ ಅದೃಷ್ಟವನ್ನು ಮತ್ತು ವೃತ್ತಿಜೀವನದಲ್ಲಿ ಸಂತೋಷವನ್ನು ನೀಡುತ್ತೆ. ಈ ಎಲ್ಲಾ ದಿನಾಂಕಗಳಲ್ಲಿ ಜನಿಸಿದವರ ಮೇಲೆ ಮಂಗಳ ಪ್ರಭಾವ ಬೀರುತ್ತಾನೆ ಎಂದು ನಂಬಲಾಗಿದೆ, ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರಿಗೆ ಈ ಬಣ್ಣ ಶುಭ ಎಂದು ಪರಿಗಣಿಸಲಾಗಿದೆ.