ಜ್ಯೋತಿಷ್ಯದ ಪ್ರಕಾರ, ಜನವರಿಯಲ್ಲಿ ಜನಿಸಿದವರು ಯಾವುದೇ ಪರಿಸ್ಥಿತಿಯನ್ನು ಎದುರಿಸುವಷ್ಟು ಬಲಶಾಲಿಗಳಾಗಿರುತ್ತಾರೆ. ಈ ತಿಂಗಳಲ್ಲಿ ಜನಿಸಿದವರು ಸವಾಲುಗಳನ್ನು ಸುಲಭವಾಗಿ ಎದುರಿಸುತ್ತಾರೆ. ತಾವು ಇಷ್ಟಪಡುವ ಕೆಲಸದಲ್ಲಿ ಯಶಸ್ಸು ಗಳಿಸುವವರೆಗೂ ಶ್ರಮಿಸುತ್ತಾರೆ. ಗುರಿ ಮುಟ್ಟುವವರೆಗೂ ಇವರು ವಿಶ್ರಮಿಸುವುದಿಲ್ಲ. ಸೋಲಿಗೆ ಹೆದರುವುದಿಲ್ಲ. ಸೋಲನ್ನು ಯಶಸ್ಸಿನ ಮೆಟ್ಟಿಲು ಎಂದು ಭಾವಿಸುತ್ತಾರೆ.