ಮಹಾಭಾರತದಿಂದ ತಿಳಿಯಿರಿ ಜೀವನ ಪಾಠ

First Published Feb 17, 2023, 4:05 PM IST

ಮಹಾಭಾರತದಲ್ಲಿ ಹಲವಾರು ವಿಷಯಗಳಿವೆ. ಅವುಗಳನ್ನು ನಾವು ಇಂದಿಗೂ ಸಹ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಅಥವಾ ನಮ್ಮ ಪ್ರಸ್ತುತ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಇಲ್ಲಿ ಯಕ್ಷನು ಯುಧಿಷ್ಠಿರನಿಗೆ ಕೇಳಿದ ಪ್ರಶ್ನೆಗಳು ಮತ್ತು ಅದಕ್ಕೆ ಯುಧಿಷ್ಠಿರ ನೀಡಿದ ಪ್ರಬುದ್ಧ ಉತ್ತರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅವುಗಳ ಬಗ್ಗೆ ತಿಳಿಯೋಣ.. 

ದುರ್ಯೋಧನನನ್ನು ಗಂಧರ್ವ ಚಿತ್ರಸೇನನ ಬಂಧನದಿಂದ ಮುಕ್ತಗೊಳಿಸಿದ ನಂತರ ಪಾಂಡವರು ಕಾಡಿಗೆ ಹಿಂದಿರುಗಿದಾಗ, ಒಬ್ಬ ಬ್ರಾಹ್ಮಣನು ಯುಧಿಷ್ಠಿರನ ಬಳಿಗೆ ಬಂದು, 'ಮಹಾರಾಜ, ನಾನು ಅರಣಿಗಳೊಂದಿಗೆ ನನ್ನ ವಸ್ತುಗಳನ್ನು ಮರಕ್ಕೆ ನೇತುಹಾಕಿದ್ದೆ. ಒಂದು ಪ್ರಾಣಿ ಅದನ್ನು ತೆಗೆದುಕೊಂಡು ಓಡಿ ಹೋಗಿದೆ. ದಯವಿಟ್ಟು ಅದನ್ನು ನನಗೆ ಹಿಂದಿರುಗಿಸಿ ಎಂದನು. ಯುಧಿಷ್ಠಿರನು ಆತನಿಗೆ ಭರವಸೆ ನೀಡುತ್ತಾ, ಮೊದಲು ನೀರು ಕುಡಿ, ಬಳಿಕ ಅದನ್ನು ತಂದುಕೊಡುವೆ ಎಂದು ನಕುಲನನ್ನು ನೀರು ತರಲು ಕಳುಹಿಸಿದನು.
 

ಹತ್ತಿರದಲ್ಲಿ ನೀರಿನ ಕೊಳ ಇತ್ತು. ನಕುಲ ಪಾತ್ರೆಯನ್ನು ನೀರಿನಲ್ಲಿ ಮುಳುಗಿಸಿದ ಕೂಡಲೇ, ಅದರಿಂದ ಒಂದು ಧ್ವನಿ ಬಂದಿತು - 'ಕಾಯಿರಿ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ, ನಂತರವೇ ನೀವು ನೀರನ್ನು ತೆಗೆದುಕೊಳ್ಳಬಹುದು'. ನಕುಲ, ಆ ಧ್ವನಿಯನ್ನು ನಿರ್ಲಕ್ಷಿಸಿ, ನೀರನ್ನು ತೆಗೆದುಕೊಳ್ಳಲು ಬಯಸಿದನು. ಆದರೆ ಆ ಧ್ವನಿಯು ನಕುಲನನ್ನು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿತು. ಅಂತೆಯೇ, ಸಹದೇವ, ಅರ್ಜುನ ಮತ್ತು ಭೀಮ ಕೂಡ ಕ್ರಮಬದ್ಧವಾಗಿ ನೀರನ್ನು ತುಂಬಿಸಲು ಬಂದರು ಮತ್ತು ಯಕ್ಷನ ಪ್ರಶ್ನೆಗಳಿಗೆ (Yaksha) ಗಮನ ನೀಡದ ಕಾರಣ ಪ್ರಜ್ಞಾಹೀನರಾದರು. 
 

Latest Videos


ಕೊನೆಗೆ ಹೋದವರು ಯಾರು ಬಾರದ್ದನ್ನು ನೋಡಿ ಸ್ವತಃ ಯುಧಿಷ್ಠಿರನು ಅಲ್ಲಿಗೆ ಬಂದನು. ಯಕ್ಷನು ಅವರಿಗೆ ಅದನ್ನೇ ಹೇಳಿದನು. ಮೊದಲು ತನ್ನ ಪ್ರಶ್ನೆಗೆ ಉತ್ತರ ಹೇಳು ನಂತರ ನೀರು ಮತ್ತು ನಿನ್ನ ಸಹೋದರರನ್ನು ಕರೆದುಕೊಂಡು ಹೋಗುವಂತೆ ಹೇಳಿದನು. ಯುಧಿಷ್ಠಿರ ತಾಳ್ಮೆಯಿಂದ ಯಕ್ಷನನ್ನು ಪ್ರಶ್ನೆಗಳನ್ನು ಕೇಳಲು ಕೇಳಿದನು.

ಯಕ್ಷ ಪ್ರಶ್ನೆಗಳು, ಅದಕ್ಕೆ ಯುಧಿಷ್ಠಿರನ ಉತ್ತರಗಳು ಇಂತಿವೆ…
ಯಕ್ಷ : ಧರ್ಮದ ಏಕೈಕ ಸಾಧನ ಯಾವುದು? ಯಶಸ್ಸನ್ನು ಸಾಧಿಸಲು ಮತ್ತು ಸ್ವರ್ಗವನ್ನು ತಲುಪಲು ಇರುವ ಏಕೈಕ ಮಾರ್ಗ ಯಾವುದು? 
ಯುಧಿಷ್ಠಿರ ಕೌಶಲ್ಯವು ಧರ್ಮದ ಏಕೈಕ ಸಾಧನವಾಗಿದೆ. ಯಶಸ್ಸನ್ನು ಸಾಧಿಸುವ ಏಕೈಕ ಮಾರ್ಗವೆಂದರೆ (way to success) ದಾನ. ಸ್ವರ್ಗವನ್ನು ತಲುಪುವ ಏಕೈಕ ಸಾಧನವೆಂದರೆ ಸತ್ಯ. 
 

ಯಕ್ಷ : ಮನುಷ್ಯರ ಆತ್ಮ ಯಾರು? ಭಾಗ್ಯದಿಂದ ದೊರೆತ ಸ್ನೇಹಿತ ಯಾರು? 
ಯುಧಿಷ್ಠಿರ : ಮಗ ಮನುಷ್ಯನ ಆತ್ಮ. ಹೆಂಡತಿ ಭಾಗ್ಯದಿಂದ ದೊರೆತ ಸ್ನೇಹಿತೆ. 

ಯಕ್ಷ : ಉತ್ತಮ ಲಾಭ ಮತ್ತು ಸಂತೋಷಗಳು ಯಾವುವು? 
ಯುಧಿಷ್ಠಿರ : ಆರೋಗ್ಯವು ಅತ್ಯುತ್ತಮ ಲಾಭ. ಸಂತೃಪ್ತಿಯೇ ಅತ್ಯುತ್ತಮ ಸಂತೋಷ (happiness). 

ಯಕ್ಷ : ಧರ್ಮಕ್ಕಿಂತ ಮುಖ್ಯವಾದುದು ಯಾವುದು? ಯಾವ ಧರ್ಮ ಉತ್ತಮ? ನಿಯಂತ್ರಿಸಿದಾಗ ಸಂತೋಷವಾಗುವಂತಹ ವಿಷಯ ಯಾವುದು? ಯಾರೊಂದಿಗೆ ಸ್ನೇಹಿತರಾಗಿರುವುದು ನೋವುಂಟು ಮಾಡುವುದಿಲ್ಲ? 
ಯುಧಿಷ್ಠಿರ : ಔದಾರ್ಯವು ಧರ್ಮಕ್ಕಿಂತ ದೊಡ್ಡದು. ಸೇವೆಯೇ ಅತ್ಯುತ್ತಮ ಧರ್ಮ. ಮನಸ್ಸನ್ನು ನಿಯಂತ್ರಿಸುವ ಮೂಲಕ ಸಂತೋಷ ಸಿಗುತ್ತೆ. ಮಹನೀಯರ ಸ್ನೇಹ ಎಂದಿಗೂ ನೋವನ್ನುಂಟು ಮಾಡೋದಿಲ್ಲ. 

ಯಕ್ಷ : ಯಾರನ್ನು ಕ್ಷಮಿಸುವ ಮೂಲಕ ಮನುಷ್ಯ ಎಲ್ಲರಿಗೂ ಪ್ರಿಯನಾಗುತ್ತಾನೆ? ಯಾವ ಯಜ್ಞವು ಶೋಕಕ್ಕೆ ಕಾರಣವಾಗುವುದಿಲ್ಲ? 
ಯುಧಿಷ್ಠಿರ : ಅಹಂಕಾರವನ್ನು ತ್ಯಾಗ ಮಾಡುವ ಮೂಲಕ, ಮನುಷ್ಯನು ಎಲ್ಲರಿಗೂ ಪ್ರಿಯನಾಗುತ್ತಾನೆ. ಕೋಪವನ್ನು ತ್ಯಜಿಸುವುದು ದುಃಖಕ್ಕೆ ಕಾರಣವಾಗುವುದಿಲ್ಲ. 

ಯಕ್ಷ : ತಪದ ಲಕ್ಷಣವೇನು? ಅತಿ ದೊಡ್ಡ ಕ್ಷಮೆ ಯಾವುದು? 
ಯುಧಿಷ್ಠಿರ :ತಪಸ್ಸು ಸ್ವಧರ್ಮದ ಆಚರಣೆ. ಸಂತೋಷ ಮತ್ತು ದುಃಖವನ್ನು ಸಹಿಸಿಕೊಳ್ಳುವುದು ದೊಡ್ಡ ಕ್ಷಮೆ.
 

ಯಕ್ಷ : ದುಷ್ಟ ಶತ್ರು (enemy) ಯಾರು? ಅಂತ್ಯವಿಲ್ಲದ ಕಾಯಿಲೆ ಎಂದರೇನು?
ಯುಧಿಷ್ಠಿರ : ಕೋಪವು ದುಷ್ಟ ಶತ್ರು. ದುರಾಶೆ ಎಂದಿಗೂ ಮುಗಿಯದ ರೋಗ. 

ಯಕ್ಷ : ಅತಿದೊಡ್ಡ ಸ್ನಾನ ಮತ್ತು ದಾನ ಯಾವುದು? 
ಯುಧಿಷ್ಠಿರ : ಮಾನಸಿಕ ಅಸ್ವಸ್ಥತೆಗಳನ್ನು ತ್ಯಜಿಸುವುದೇ ಶ್ರೇಷ್ಠ ಸ್ನಾನ. ಜೀವಿಯನ್ನು ರಕ್ಷಿಸುವುದು ದೊಡ್ಡ ದಾನ.

ಯಕ್ಷ : ಉತ್ತಮ ಮಾರ್ಗ ಯಾವುದು? ಅತ್ಯಂತ ಸಂತೋಷದ ವ್ಯಕ್ತಿ ಯಾರು?
ಯುಧಿಷ್ಠಿರ : ಮಹನೀಯರು ಅನುಸರಿಸಿದ ಮಾರ್ಗ ಅತ್ಯುತ್ತಮ ಮಾರ್ಗ. ಕುಟುಂಬದೊಂದಿಗೆ ಸಂತೋಷವಾಗಿರುವವನು ಅತ್ಯಂತ ಸಂತೋಷದ ವ್ಯಕ್ತಿ. 

ಯಕ್ಷನ ಎಲ್ಲಾ ಪ್ರಶ್ನೆಗಳಿಗೆ ಯುಧಿಷ್ಠಿರ ಸರಿಯಾಗಿ ಉತ್ತರಿಸಿದನು. ಇದರಿಂದ ಸಂತೋಷಗೊಂಡ ಯಕ್ಷನು ಎಲ್ಲಾ ಸಹೋದರರಿಗೆ ಮತ್ತೆ ಜೀವವನ್ನು ನೀಡಿದನು. 
 

click me!