Zodiac Sign and Diamond: ಯಾವ ರಾಶಿಯ ಜನರು ವಜ್ರ ಧರಿಸಿದರೆ ಅಶುಭ?

First Published Jan 7, 2022, 7:36 PM IST

ವಜ್ರದ ಉಂಗುರಗಳು, ಹಾರಗಳು, ಕಡಗಗಳು, ಕಿವಿ ಓಲೆಗಳನ್ನು (earing) ಧರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಪ್ರತಿಯೊಬ್ಬರೂ ಫ್ಯಾಷನ್ ಮತ್ತು ಸ್ಟೇಟಸ್ ಸಿಂಬಲ್‌ಗಾಗಿ (Status Symbol) ವಜ್ರಗಳನ್ನು ಧರಿಸಿದ್ದರೆ, ಜ್ಯೋತಿಷ್ಯ ಮತ್ತು ರತ್ನ ಶಾಸ್ತ್ರದ ಪ್ರಕಾರ, ವಜ್ರವು ಎಲ್ಲರಿಗೂ ಸರಿ ಹೊಂದುವುದಿಲ್ಲ. ಕೆಲವೊಂದು ರಾಶಿಯ ಜನರಿಗೆ ವಜ್ರ ಶುಭವಲ್ಲ. ಆ ರಾಶಿಯ ಬಗ್ಗೆ ತಿಳಿಯಿರಿ. 

ವಜ್ರವನ್ನು ಪ್ರಮುಖ ರತ್ನವೆಂದು ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ ಮತ್ತು ವಜ್ರಗಳನ್ನು ಜಾತಕ ಗ್ರಹಗಳು ಸೂಕ್ತವಾಗಿರುವವರು, ತಜ್ಞರ ಸಲಹೆ ಮೇರೆಗೆ ಮಾತ್ರ ಧರಿಸಬೇಕು, ಇಲ್ಲದಿದ್ದರೆ ವಜ್ರವನ್ನು ಧರಿಸುವುದು ಭಾರವಾಗುತ್ತದೆ. ವಜ್ರ ತಜ್ಞರನ್ನು ಸಂಪರ್ಕಿಸದೆ ಯಾವ ರಾಶಿ ಚಕ್ರದವರು ತಪ್ಪಾಗಿ ಧರಿಸಬಾರದು ಎಂದು ತಿಳಿಯಿರಿ. 

ಮೇಷ ರಾಶಿ (Aries)
ಮೇಷ ರಾಶಿಯವರು ವಜ್ರವನ್ನು ಧರಿಸುವುದರಿ೦ದ ಜೀವನದಲ್ಲಿ ಅನೇಕ ತೊಂದರೆಗಳನ್ನು ಸೃಷ್ಟಿಯಾಗಬಹುದು. ಈ ಜನರು ವಜ್ರ ಧರಿಸಲು ಬಯಸಿದರೆ ಮೊದಲು ತಜ್ಞರನ್ನು ಸಂಪರ್ಕಿಸಬೇಕು. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದುದರಿಂದ ಎಚ್ಚರ ವಹಿಸುವುದು ಮುಖ್ಯ.

ಕರ್ಕಾಟಕ ರಾಶಿ (cancer)
ಕರ್ಕಾಟಕ ರಾಶಿಯವರು ವಜ್ರಗಳನ್ನು ಧರಿಸುವುದು ಸಹ ಶುಭವಲ್ಲ ಆದರೆ ಕೆಲವು ಸಂದರ್ಭಗಳಲ್ಲಿ ಅವರು ತಜ್ಞರನ್ನು ಸಂಪರ್ಕಿಸುವ ಮೂಲಕ ಧರಿಸಬಹುದು. ನಿಮಗೆ ವಜ್ರ ಇಷ್ಟವಿದ್ದರೂ ಸಹ ಅದನ್ನು ಧರಿಸುವ ಮುನ್ನ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಇಲ್ಲವಾದರೆ ಸಮಸ್ಯೆ ಉಂಟಾಗಬಹುದು. 

ಸಿಂಹ (Leo)
ವಜ್ರವು ಶುಕ್ರನಿಗೆ ಸೇರಿದ್ದು ಮತ್ತು ಶುಕ್ರಗ್ರಹವು ಸಿಂಹ ರಾಶಿಯವರಿಗೆ ಶುಭವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ರಾಶಿಚಕ್ರದ ಚಿಹ್ನೆಯವರು ವಜ್ರಗಳನ್ನು ಧರಿಸಬಾರದು. ಇಲ್ಲದಿದ್ದರೆ ದೊಡ್ಡ ನಷ್ಟಗಳು ಉಂಟಾಗಬಹುದು. ಆದುದರಿಂದ ಸಿಂಹ ರಾಶಿಯವರು ವಜ್ರ ಧರಿಸುವ ಮುನ್ನ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. 

ವೃಶ್ಚಿಕ ರಾಶಿ (scorpio)
ವೃಶ್ಚಿಕ ರಾಶಿಯಿಂದ ಬಂಧಿಸಲ್ಪಟ್ಟ ಮಂಗಳ ಮತ್ತು ವಜ್ರ ಸಂಬಂಧಿತ ಶುಕ್ರರು ಪರಸ್ಪರ ಪ್ರತಿಕೂಲರಾಗಿದ್ದಾರೆ, ಆದ್ದರಿಂದ ವಜ್ರವು ಈ ಜನರಿಗೆ ದುರಾದೃಷ್ಟ. ವಜ್ರಗಳನ್ನು ಧರಿಸುವುದರಿಂದ ಅವರ ಜೀವನದಲ್ಲಿ ಸಮಸ್ಯೆಗಳು ಬರಬಹುದು.ತಜ್ಞರ ಬಳಿ ಕೇಳಿ ಮತ್ತೆ ವಜ್ರದ ಕಡೆಗೆ ಗಮನ ಹರಿಸುವುದು ಉಚಿತ. 

ಧನು ರಾಶಿ (Sagittarius)
ಧನು ರಾಶಿಯವರಿಗೆ ವಜ್ರವನ್ನು ಧರಿಸುವುದು ಸಹ ಅಶುಭ ಫಲ ನೀಡುತ್ತದೆ. ವಜ್ರವನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಮತ್ತು ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದು ಅಶುಭ ಫಲವನ್ನು ನೀಡುತ್ತದೆ. ಆದುದರಿಂದ ಧರಿಸದೇ ಇರುವುದು ಉತ್ತಮ.

ಮೀನ ರಾಶಿ
ಮೀನ ರಾಶಿಯ ಜಾತಕದವರಿಗೆ ಶುಕ್ರನು ಶುಭ ಫಲಗಳನ್ನು ನೀಡುವುದಿಲ್ಲ. ಆದ್ದರಿಂದ ಈ ಜನರು ವಜ್ರಗಳನ್ನು ಧರಿಸುವುದು ತೊಂದರೆಗಳನ್ನು ಸ್ವತಃ ಆಹ್ವಾನಿಸುವುದು ಎರಡು ಒಂದೇ . ಸಾಧ್ಯವಾದಷ್ಟು ವಜ್ರ ಧರಿಸೋದು ಅವಾಯ್ಡ್ ಮಾಡಿ. ಧರಿಸಲೇಬೇಕು ಎಂದೆನಿಸಿದರೆ ತಜ್ಞರ ಸಲಹೆ ಪಡೆಯಿರಿ. 

click me!