2022 ಈ ರಾಶಿಯ ಹುಡುಗಿಯರಿಗೆ ಸಖತ್ Lucky Year

First Published | Jan 5, 2022, 9:44 AM IST

ಹೊಸ ವರ್ಷ (new year)ಪ್ರಾರಂಭವಾಗಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಆಧಾರದ ಮೇಲೆ ಈ ವರ್ಷ ಕೆಲವರಿಗೆ ಉತ್ತಮ ವರ್ಷವಾಗಲಿದೆ, ಕೆಲವರಿಗೆ ನಿರಾಶೆಯಾಗಬಹುದು. ಲಿಂಗದ ಆಧಾರದ ಮೇಲೆ ಜ್ಯೋತಿಷ್ಯದ ಲೆಕ್ಕಾಚಾರಗಳನ್ನು ಸಹ ಮಾಡಲಾಗುತ್ತದೆ. ಅದರಂತೆ ಈ ವರ್ಷ ಹೆಣ್ಣುಮಕ್ಕಳಲ್ಲಿ ಕೆಲವು ರಾಶಿಚಕ್ರಗಳಿಗೆ ತುಂಬಾ ಶುಭವಾಗಲಿದೆ. 

ಮೇಷ  (Aries) 
ಮೇಷ ರಾಶಿಯ ಹುಡುಗಿಯರಿಗೆ 2022 ನೇ ವರ್ಷವು ತುಂಬಾ ಒಳ್ಳೆಯದು. ಅವರಿಗೆ ನೆಚ್ಚಿನ ಕೆಲಸ ಸಿಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕಾದರೆ ಆ ಕನಸು ಕೂಡ ಈ ವರ್ಷ ಈಡೇರುತ್ತದೆ.  ಒಟ್ಟಲ್ಲಿ ಉತ್ತಮ ವರ್ಷ ನಿಮ್ಮದಾಗಲಿದೆ. 

ವೃಷಭ (Taurus)
ಈ ಚಕ್ರ ರಾಶಿಯ ಜನರಿಗೆ ಹೊಸ ವರ್ಷವು ಒಳ್ಳೆಯದಾಗಲಿದೆ. ಈ ಬಾರಿ ವೃತ್ತಿ ಜೀವನದ ಪ್ರಗತಿಗೆ ಸಾಕಷ್ಟು ಮಾರ್ಗಗಳು ತೆರೆಯುತ್ತವೆ. ನೀವು ವಿಭಿನ್ನವಾಗಿ ಯೋಚನೆ ಮಾಡಲು ಆರಂಭಿಸಿ. ಇದರಿಂದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. 

Tap to resize

Representative Image: Cancer zodiac

ಕರ್ಕಾಟಕ (cancer) 
ಕರ್ಕಾಟಕ ರಾಶಿಯ ಹುಡುಗಿಯರಿಗೆ, ಈ ವರ್ಷವು ಅನೇಕ ಕನಸುಗಳು ಮತ್ತು ಆಸೆಗಳ ಪೂರೈಸುವ ವರ್ಷವೆಂದು ಸಾಬೀತುಪಡಿಸುತ್ತದೆ. ಮದುವೆ ವಿಳಂಬವಾದ ಹುಡುಗಿಯರು ಈ ವರ್ಷ ಮದುವೆಯಾಗುತ್ತಾರೆ. ವೃತ್ತಿ ಜೀವನವೂ ಉತ್ತಮವಾಗಿರುತ್ತದೆ. 

ಸಿಂಹ (Leo)
ಸಿಂಹ ರಾಶಿ ಜನರಿಗೆ ಹೊಸ ವರ್ಷವು ಹಲವಾರು ಶುಭ ಚಿಹ್ನೆಗಳನ್ನು ನೀಡುತ್ತಿದೆ. ಈ ಸಮಯವು ನಿಮಗೆ ವರಕ್ಕಿಂತ ಕಡಿಮೆಯಿಲ್ಲ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಶುಭವಾಗಲಿ. ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಇವುಗಳ ಕಡೆಗೆ ಗಮನ ಹರಿಸಿ. 

ಕನ್ಯಾ (virgo)
ಕನ್ಯಾ ರಾಶಿ ವಿದ್ಯಾರ್ಥಿನಿಯರು ಈ ವರ್ಷ ಅಧ್ಯಯನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಸಂದರ್ಶನ ನೀಡಲು ಹೊರಟರೆ, ಅದರಲ್ಲಿ ಉತ್ತಮವಾಗಿ ತೇರ್ಗಡೆ ಹೊಂದಿ, ಸರಿಯಾದ ಕೆಲಸ ಗಿಟ್ಟಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ನಿಮಗೆ ನೆಚ್ಚಿನ ಹುಡುಗ ಕೂಡ ಸಿಗಬಹುದು.

ಧನುಸ್ಸು  (sagitarius)
ಧನು ರಾಶಿಯ ಹುಡುಗಿಯರಿಗೆ 2022 ನೇ ವರ್ಷವು ಸಾಕಷ್ಟು ಸಾಧನೆಗಳನ್ನು ಮತ್ತು ಸಂತೋಷವನ್ನು ತರಲಿದೆ. ದುಡಿಯುವ ಮಹಿಳೆಯರು ಮತ್ತು ಹುಡುಗಿಯರು, ವ್ಯವಹಾರದಲ್ಲಿ ಅಥವಾ ಉದ್ಯೋಗಗಳಲ್ಲಿ, ಹಣವನ್ನು ಗಳಿಸುವುದು ಖಚಿತ. ನೀವು ಶಿಸ್ತುಬದ್ಧ ಜೀವನವನ್ನು ನಡೆಸಿದರೆ, ನೀವು ಅನೇಕ ಪಟ್ಟು ಪ್ರಯೋಜನ ಪಡೆಯಬಹುದು.  

Latest Videos

click me!