Best Dads: ಕಠು ಹೃದಯಿಯಾದ್ರೂ, ಮಕ್ಕಳನ್ನು ರಕ್ಷಿಸೋದು ಈ ರಾಶಿಯವರಿಗೆ ಗೊತ್ತು!

First Published | Jan 5, 2025, 11:53 AM IST

ಅಪ್ಪ ಅಂದ್ರೆ ಆಕಾಶದೆತ್ತರ. ಒಬ್ಬೊಬ್ಬರ ನೇಚರ್ ಒಂದೊಂದು ರೀತಿ ಇರುತ್ತೆ. ಕೆಲವು ಮಾತೃ ಹೃದಯಿಗಳಾಗಿದ್ದರೆ, ಮತ್ತೆ ಕೆಲವರು ಮಕ್ಕಳ ಭಾವನೆಗಳಿಗೆ ಸ್ಪಂದಿಸೋದು ಅಂದ್ರೇನು ಎಂಬುವುದು ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಆದರೆ ರಾಶಿಗೆ ತಕ್ಕಂತೆ ಯಾವ ರಾಶಿಯವರು ಮಕ್ಕಳೊಂದಿಗೆ ಹೇಗೆ ವರ್ತಿಸುತ್ತಾರೆ? 

ಅಪ್ಪ ಅಂದ್ರೆ ಆಕಾಶದೆತ್ತರ. ಒಬ್ಬೊಬ್ಬರ ನೇಚರ್ ಒಂದೊಂದು ರೀತಿ ಇರುತ್ತೆ. ಕೆಲವು ಮಾತೃ ಹೃದಯಿಗಳಾಗಿದ್ದರೆ, ಮತ್ತೆ ಕೆಲವರು ಮಕ್ಕಳ ಭಾವನೆಗಳಿಗೆ ಸ್ಪಂದಿಸೋದು ಅಂದ್ರೇನು ಎಂಬುವುದು ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಆದರೆ ರಾಶಿಗೆ ತಕ್ಕಂತೆ ಯಾವ ರಾಶಿಯವರು ಮಕ್ಕಳೊಂದಿಗೆ ಹೇಗೆ ವರ್ತಿಸುತ್ತಾರೆ? 

ಮಗುವಿನ ಭಾವನೆಗಳನ್ನು ಅರ್ಥ ಮಾಡಿಕೊಂಡು ಅಪ್ಪನಾಗಿ ಬೇಕು ಬೇಡಗಳನ್ನು ಪೂರೈಸಬೇಕು. ಮಗುವಿನ ಜೊತೆಗಿದ್ದು, ಆರೈಕೆ, ರಕ್ಷಣೆ ಮತ್ತು ಮಾರ್ಗದರ್ಶನ ನೀಡಿದರೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕಾರಿ. ಕೆಲವು ಗುಣಲಕ್ಷಣಗಳನ್ನು ಅಪ್ಪನಾದವನು ಬೆಳೆಯಿಸಿಕೊಂಡರೆ ಮಗುವಿನ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥ ಗುಣಗಳು ಇಲ್ಲದೇ ಹೋದರೋ ಅಪ್ಪನಾದವನು ರೂಢಿಸಿಕೊಳ್ಳಬೇಕು. ಈ ಐದು ರಾಶಿಚಕ್ರದಲ್ಲಿ ಜನಿಸಿದವರು ಬೆಸ್ಟ್ ಅಪ್ಪನಾಗಬಲ್ಲರು. 

Tap to resize

ಮೇಷ ರಾಶಿ (Aries)
ರಾಶಿಚಕ್ರದಲ್ಲಿ ಮೊದಲನೆಯದಾದ ಈ ರಾಶಿ ನೈಸರ್ಗಿಕ ನಾಯಕತ್ವದ ಗುಣ ಹೊಂದಿದೆ. ಈ ರಾಶಿಯವರು ಶ್ರೇಷ್ಠ ನಾಯಕರನ್ನು ಸಿದ್ಧಪಡಿಸುತ್ತಾರೆ. ಸಮರ್ಥನೆ, ಮಹತ್ವಾಕಾಂಕ್ಷೆ, ಪ್ರಾಮಾಣಿಕತೆ, ಸಂಘಟನೆ, ಆಳವಾದ ಪ್ರೀತಿ ಮತ್ತು ರಕ್ಷಣಾತ್ಮಕ ಗುಣಗಳು ಇವರಿಗಿರುತ್ತದೆ. ಆದ್ದರಿಂದ ಮೇಷ ರಾಶಿಯವರ ಅಪ್ಪಂದಿರು ಮಹನಾನ್ ಎನಿಸಿಕೊಳ್ಳುತ್ತಾರೆ. ಜೀವನದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಉದಾಹರಣೆಯಾಗುತ್ತಾರೆ.

ಸಿಂಹ ರಾಶಿ (Leo)
ನಿಷ್ಠೆ ಮತ್ತು ಬಲವಾದ ಮನಸ್ಥಿತಿಯವರಾಗಿರುತ್ತಾರೆ ಈ ರಾಶಿಯ ಅಪ್ಪಂದಿರು. ಭರ ಪ್ರೀತಿ ಕೊಡುವ ಜೊತೆಗೆ, ಸಿಂಹ ರಾಶಿಯ ಪುರುಷರಿಗೆ ಉದಾರತೆ ಮತ್ತು ಸ್ವಾಭಾವಿಕ ಪ್ರಜ್ಞೆಯ ಗುಣಗಳಿರುತ್ತವೆ. ಕುಟುಂಬ ಹಾಗೂ ತಮ್ಮ ಸುತ್ತಮುತ್ತ ಆರೋಗ್ಯಕರ ಸ್ವ-ಪ್ರೀತಿಯನ್ನು ಇವರು ಉತ್ತೇಜಿಸುತ್ತಾರೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶಕರಾಗುತ್ತಾರೆ.

ಕನ್ಯಾ ರಾಶಿ (Virgo)
ತರ್ಕಬದ್ಧ, ಪ್ರಾಯೋಗಿಕ, ಸಕ್ರಿಯ ಸ್ವಭಾವದವರಿವರು. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತಾರೆ. ಶ್ರೇಷ್ಠ ಚಿಂತಕರೂ ಹೌದು. ಪ್ರೀತಿಯಿಂದ ಕೂಡಿರುವ ಸೂಕ್ಷ್ಮ ವ್ಯಕ್ತಿಗಳು. ತಾಳ್ಮೆ, ವಿವರಗಳಿಗೆ ಗಮನ ಮತ್ತು ಅವರ ಸಮಸ್ಯೆ-ಪರಿಹರಿಸುವ ಕೌಶಲ್ಯ ಇವರಿಗಿರುತ್ತದೆ. ರಾಶಿಚಕ್ರದ ಅತ್ಯುತ್ತಮ ತಂದೆಗಳಲ್ಲಿ ಒಬ್ಬರನ್ನಾಗಿ ಮಾಡುತ್ತವೆ. ಇವರು ಹಣಕಾಸಿನ ವಹಿವಾಟಿನಲ್ಲಿ ಎಕ್ಸ್‌ಪರ್ಟ್ಸ್. ಯಾವಾಗಲೂ ಆರ್ಥಿಕವಾಗಿ ಸ್ವತಂತ್ರವಾಗುವ ಮತ್ತು ಸಾಕ್ಷರ ಮಕ್ಕಳನ್ನು ಬೆಳೆಸುತ್ತಾರೆ.

ವೃಶ್ಚಿಕ ರಾಶಿ (Scorpio)
ಈ ರಾಶಿಯವರು ಚೇಳಿನಂತೆ ಕುಟುಕುವವರಲ್ಲ. ಪ್ರೀತಿಗೆ ಮತ್ತೊಂದು ಹೆಸರಾಗಿರುತ್ತಾರೆ. ಸದಾ ಮಕ್ಕಳನ್ನು ರಕ್ಷಿಸುವ ಹಾಗೂ ಪ್ರೀತಿ ಆದರ ತೋರಿಸುವ ಹೃದಯವಂತರಾಗಿರುತ್ತಾರೆ. ಹೆಚ್ಚಿನ ಕಾಳಜಿ ತೋರುವುದರಲ್ಲಿಯೂ ಎತ್ತಿದ ಕೈ. ಇವರ ಜೀವನೋತ್ಸಾಹವು ಮಕ್ಕಳೊಂದಿಗೆ ಅವರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಇವರು ಕುಟುಂಬ-ಆಧಾರಿತ ವ್ಯಕ್ತಿಗಳು.

ಮಕರ ರಾಶಿ (Capricorn)
ಜವಾಬ್ದಾರಿಯನ್ನು ಪ್ರೀತಿಸುವ ಸರ್ವೋತ್ಕೃಷ್ಟ ವ್ಯಕ್ತಿಗಳಾಗಿರುತ್ತಾರೆ ಮಕರ ರಾಶಿಯವರು. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅವರಿಗೆ ಸಹಜ. ತಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಮಕರ ರಾಶಿ ಪುರುಷರು  ಮಕ್ಕಳನ್ನು ಕಾಳಜಿಯಿಂದ ಪೋಷಿಸುವ, ನೈಸರ್ಗಿಕ ನಾಯಕರಾಗಿದ್ದು, ಶಿಕ್ಷಕರು, ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಕಲಿಸುತ್ತಾರೆ. ಅತ್ಯಂತ ಭಾವನಾತ್ಮಕ ಮತ್ತು ಬುದ್ಧಿವಂತ ಚಿಹ್ನೆಗಳಲ್ಲಿ ಇದೊಂದು. ಈ ಚಿಹ್ನೆಗೆ ಸೇರಿದ ಪುರುಷರು ಉತ್ತಮ ತಂದೆಯಾಗುತ್ತಾರೆ.

ಎಲ್ಲರಿಗೂ ಎಲ್ಲ ಗುಣಗಳೂ ಇರುವುದಿಲ್ಲ. ಆದರೆ, ಅತ್ಯುತ್ತಮ ಗುಣಗಳನ್ನು ಅಳವಡಿಸಿಕೊಂಡು ಮಕ್ಕಳ ಶ್ರೋಯೋಭಿವೃದ್ಧಿಗೆ ಶ್ರಮಿಸುವುದು ಪ್ರತಿಯೊಬ್ಬರ ತಂದೆಯರ ಕರ್ತವ್ಯವೂ ಹೌದು. ಅಮ್ಮನಿಗೆ ಅಪ್ಪ ಜೊತೆಯಾದರೆ ಜೀವನ ಚಂದ ಎನಿಸಿಕೊಳ್ಳುತ್ತದೆ.

Latest Videos

click me!