ಬ್ರೇಕ್ ಅಪ್: ಈ ರಾಶಿಯವರು ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಮಾಡ್ಬಹುದು?

First Published | Jan 4, 2025, 8:13 PM IST

ತಮ್ಮವರನ್ನು ಕಳೆದು ಕೊಂಡ ನೋವು ಅನುಭವಿಸದರಷ್ಟೇ ಗೊತ್ತಾಗೋದು. ಆದರೆ, ಮನುಷ್ಯನ ವ್ಯಕ್ತಿತ್ವ ಹಾಗೂ ಸಂಸ್ಕಾರಕ್ಕೆ ತಕ್ಕಂತೆ ವ್ಯಕ್ತಿಯಿಂದ ವ್ಯಕ್ತಿಗೆ ಅವನ್ನು ಎದುರಿಸೋ ರೀತಿ ವಿಭಿನ್ನವಾಗಿರುತ್ತದೆ. ಅದರಲ್ಲಿಯೂ ಇದು ರಾಶಿಯಿಂದ ರಾಶಿಗೆ ಬೇರೆ ಬೇರೆ ರೀತಿಯಾಗಿರುತ್ತದೆ. ಯಾವ ರಾಶಿಯವರು ಹೇಗೆ ವರ್ತಿಸುತ್ತಾರೆ. ಇಲ್ಲಿದೆ ಮಾಹಿತಿ. 

ಮೇಷ ರಾಶಿ (Aries)

ಒಮ್ಮೆ ಸಿಟ್ಟಾಗಿ ಸಂಗಾತಿ ಮುಖಕ್ಕೇ ಗುದ್ದಬಹುದು. ಸಿಟ್ಟಿನಿಂದ ಕಿರುಚಬಹುದು. ತಾಳ್ಮೆ ಕಳೆದು ಕೊಳ್ಳುತ್ತಾರೆ. ಇದು ಹತಾಶೆ ತೋರಿಸುತ್ತದೆ. ಮೇಷ ರಾಶಿಯವರ ಎದುರಿಗೆ ಬ್ರೇಕ್ ಮಾಡಿಕೊಂಡವರು ಕಾಣಿಸಿಕೊಳ್ಳಲೂಬಾರದು. ಬೇರೊಬ್ಬರು ಇದಕ್ಕೆ ಕಾರಣವಾದರೆ ಕಥೆ ಮುಗೀತು. ಕಾರನ್ನೇ ಬೇಕಾದರೂ ಒಡೆದು ಹಾಕುತ್ತಾರೆ! 

ವೃಷಭ ರಾಶಿ (Taurus)

ತಮ್ಮ ಪ್ರೇಮವನ್ನು ಇವರು  ಸುಲಭವಾಗಿ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ನೈಜ ಪ್ರತ್ಯೇಕತೆ ಕಷ್ಟ. ವಾಸ್ತವ ಒಪ್ಪಿಕೊಂಡರೆ ಮತ್ತೆ ಅಪಾಯವಿಲ್ಲ. ಆಮೇಲೆ ಪ್ರಬುದ್ಧರಂತೆ ಭಗ್ನ ಪ್ರೇಮವನ್ನು ಹ್ಯಾಂಡಲ್ ಮಾಡಲು ಕಲಿಯುತ್ತಾರೆ.

Tap to resize

ಮಿಥುನ ರಾಶಿ (Gemini)

ಅನಿರೀಕ್ಷಿತ ಸ್ವಭಾವದವರು. ಹತಾಶೆಯಿಂದ ಹುಚ್ಚರಂತಾಗಿಯೇ ಬಿಡುತ್ತಾರೆ. ಮಾಜಿ ಸಂಗಾತಿಗಳನ್ನು ನೆರಳಿನಂತೆ ಹಿಂಬಾಲಿಸಬಹುದು. ಫೇಸ್‌ಬುಕ್‌, ಇನ್ನಸ್ಟ್ರಾಗ್ರಾಮ್‌ನಲ್ಲಿ ನಿಮ್ಮನ್ನು ಗುಟ್ಟಾಗಿ ಹಿಂಬಾಲಿಸಿ, ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ. ಸಾರ್ವಜನಿಕವಾಗಿ ಮುಜುಗರ ಉಂಟು ಮಾಡಬಲ್ಲರು. 

ಕಟಕ ರಾಶಿ (Cancer)

ಬೆಕ್ಕಿನಂತೆ ಹೊಂಚು ಹಾಕುತ್ತಾರೆ. ಸುಮ್ಮನಿರುತ್ತಾರೆ. ಆದರೆ ಯಾವುದೋ ಒಂದು ಕ್ಷಣದಲ್ಲಿ ನಿಮ್ಮ ಮೇಲೆಯೇ ಅಟ್ಯಾಕ್ ಮಾಡಬಹುದು. ನೀವವರ ಹೃದಯ ಒಡೆದಿದ್ದೀರೆಂದು ನೆನಪಿಸಲು ಸೂಕ್ತ ಕಾಲ ಹುಡುಕಿ, ನಿಮ್ಮನ್ನು ಬೆಚ್ಚಿ ಬೀಳಿಸುತ್ತಾರೆ. ಪರವಾಗಿಲ್ಲ ಎಂಬಂತೆ ವರ್ತಿಸಿ, ನಿಮ್ಮನ್ನು ಮುಗಿಸಲು ಸಂಚು ರೂಪಿಸುತ್ತಾರೆ. 

ಸಿಂಹ ರಾಶಿ (Leo)

ಇವರು ಕಾಡಿನ ರಾಜನಂತೆ ಬಿಂದಾಸ್. ಭಗ್ನಪ್ರೇಮದಲ್ಲೂ ರಾಜ-ರಾಣಿಯಂತಿರುತ್ತಾರೆ. ಲವ್ ಬ್ರೇಕಪ್‌ನಿಂದ ತತ್ತರಿಸಿದ ದೇವದಾಸನಂತೆ ಎಲ್ಲವನ್ನೂ ಸಂಭ್ರಮಿಸುತ್ತಾರೆ. ಒಂದು ಹಂತದಲ್ಲಿ ನಿಮ್ಮನ್ನೂ, ನಿಮ್ಮ ಪ್ರೇಮವನ್ನೂ ಮರೆತು ಮತ್ತೊಂದು ಪ್ರೇಮದ ಬೆನ್ನು ಹತ್ತಿ ಹೋಗುತ್ತಾರೆ. ಆಗ ನೀವೇನಾದರೂ ಅವರಿಗೆ ಕಂಡರೆ ಕೆಂಡದಂತೆ ಉರಿದು ಬೀಳುತ್ತಾರೆ. 

ಕನ್ಯಾ ರಾಶಿ (Virgo)

ಈ ರಾಶಿಯವರಿಗೆ ತಮ್ಮ ಭಾವನೆಗಳನ್ನು ಬ್ಯಾಲೆನ್ಸ್ ಮಾಡೋದು ಚೆನ್ನಾಗಿ ಗೊತ್ತು. ಭಗ್ನಪ್ರೇಮದ ಹತಾಶೆ, ರಂಪಾಟದಂಥ ನಾಟಕಗಳೆಂದರೆ ಇವರಿಗೆ ಅಲರ್ಜಿ. ತುಂಬಾ ಪ್ರಾಕ್ಟಿಕಲ್. ಹಾಗಂಥ ನೀವು ಖರ್ಚು ಮಾಡಿದ ದುಡ್ಡು, ಕೊಟ್ಟ ಗಿಫ್ಟ್ ವಾಪಸು ಬರುತ್ತೆಂದು ನಿರೀಕ್ಷಿಸೋದು ಬೇಡ. ಅವರು ಪಾಡಿಗೆ ಅವರು ಇದ್ದು ಬಿಡುತ್ತಾರೆಂಬುವುದು ನೆನಪಿರಲಿ. 

ತುಲಾ ರಾಶಿ (Libra)

ಕನ್ಯಾ ರಾಶಿಯವರಿಗಂತೂ ಇವರು ಹೆಚ್ಚು ಪ್ರಾಕ್ಟಿಕಲ್ ಮತ್ತು ಡೌನ್ ಟು ಅರ್ಥ್. ಬ್ರೇಕ್ ಅಪ್ ಆಗಿದ್ದಕ್ಕೆ ಸ್ವಲ್ಪ ಚಿಂತಿಸುತ್ತಾರೆ. ವ್ಯಥೆ ಪಡುತ್ತಾರೆ. ಆದರೆ ಬಹಳ ಸುಲಭವಾಗಿ ಮೂವ್ ಆನ್ ಆಗುತ್ತಾರೆ. ಮಗದೊಂದು ಪ್ರೇಮದೊಂದಿಗೆ ನಿಮ್ಮೆದುರೇ ವಿಜಯಧ್ವಜವನ್ನು ಹಾರಾಡಿಸುತ್ತಾರೆ. ಅಷ್ಟೇ ಅಲ್ಲ ಕಳೆದುಕೊಂಡಿದ್ದಕ್ಕೆ ನೀವೇ ನೊಂದುಕೊಳ್ಳುವಂತೆ ಮಾಡಿಬಿಡುತ್ತಾರೆ. 

ವೃಶ್ಚಿಕ ರಾಶಿ (Scorpio)

ಹೇಳಿ ಕೇಳಿ ಚೇಳಿನಂಥವರು ಕುಟುಕದೇ ಇರ್ತಾರಾ ಹೇಳಿ? ಮಾಜಿ ಸಂಗಾತಿಗಳನ್ನು ಕುಟುಕದೇ ಬಿಡುವ ಸ್ವಭಾವ ಇವರದ್ದಲ್ಲ. ನಿಮ್ಮನ್ನು ಘಾಸಿಗೊಳಿಸುವ ಲೆಕ್ಕಾಚಾರದಲ್ಲಿಯೇ ಇರುತ್ತಾರೆ. ನಿಮ್ಮೆಲ್ಲ ಸ್ನೇಹಿತರನ್ನು ನಿಮ್ಮ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿ ಬಿಡಬಲ್ಲರು. ನಿರೀಕ್ಷಿಸದೇ ಇದ್ದಾಗಲೇ ಕುಟುಕುತ್ತಾರೆ.
 

ಧನು ರಾಶಿ (sagittarius)

ಇವರದ್ದು ಓಪನ್ ಸೋಲ್ ಅಂತಾರಲ್ಲ ಹಾಗೆ. ನೀವು ಇವರನ್ನು 'ಬಲಿಪಶು' ಮಾಡಲಾಗುವುದಿಲ್ಲ. ಸಂಬಂಧ ಉಳಿಸಲು ಯಥಾಶಕ್ತಿ ಯತ್ನಿಸುತ್ತಾರೆ. ಅದು ಅಸಾಧ್ಯವಾದರೆ ಸಹಜವಾಗಿ ಅಲ್ಲಿಂದ ಮುಂದುವರಿಯುತ್ತಾರೆ. ಬೇರೆಯರನ್ನು ಹಿಡಿದು ಕೊಳ್ಳುತ್ತಾರೆ. ನಿಮ್ಮನ್ನು ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಬ್ಲಾಕ್ ಮಾಡಿ, ನಿಮ್ಮ ಬಗ್ಗೆ ಸ್ವಲ್ಪವೂ ಆಸಕ್ತಿಯೇ ಇಲ್ಲವೆಂಬಂ ಮುಂದೆ ಹೆಜ್ಜೆ ಹಾಕುತ್ತಾರೆ. 

ಮಕರ ರಾಶಿ (Capricorn)

ರಾಶಿ ಚಕ್ರದ ಅತ್ಯಂತ ತಾರ್ಕಿಕ ವ್ಯಕ್ತಿಗಳು ಈ ರಾಶಿಯವರು. ಹೀಗಾಗಿ ನಿಮ್ಮ ಬ್ರೇಕಪ್ ಬಗ್ಗೆ ನೀವು ಇವರನ್ನು ಕನ್ವಿನ್ಸ್ ಮಾಡೋದು ಕಷ್ಟ. ನೀವು ಮುದುಕರಾದ ಬಳಿಕ ಸಿಕ್ಕರೂ, ಅಂದು ನೀವು ಬ್ರೇಕಪ್ ಮಾಡಿದ್ದು ತಪ್ಪೆಂದೇ ಹೇಳುತ್ತಾರೆ. ವಾಸ್ತವವನ್ನು ಒಪ್ಪಿಕೊಳ್ಳಲು ಇವರಿಗೆ ಟೈಂ ಬೇಕು. ವಾಸ್ತವವನ್ನು ಬದಲಾಯಿಸಲೂ ಯತ್ನಿಸುತ್ತಾರೆ. 

ಕುಂಭ ರಾಶಿ (Aquarius)

ಎಲ್ಲವನ್ನೂ ವಿಧಿ ಅಥವಾ ಕರ್ಮದ ಜಾಯಮಾನ ಎಂದು ಬಿಡುತ್ತಾರೆ. ಸ್ವಲ್ಪ ಧಾರ್ಮಿಕ ಸ್ವಭಾವದವರು. ಆದ್ದರಿಂದ ದೇವರ ಮೇಲೆ ಭಾರ ಹಾಕಿ ಮುಂದೆ ಸಾಗುತ್ತಾರೆ. ಸುಲಭವಾಗಿ ಇವರನ್ನು ವಂಚಿಸಬಹುದು ಹಾಗೂ ದಕ್ಕಿಸಿಕೊಳ್ಳಬಹುದು. ಆದರೆ ಕಣ್ಣಲ್ಲಿ ಕಣ್ಣಿಟ್ಟು ಇವರನ್ನು ನೋಡುವುದು ಕಷ್ಟ. ಆದ್ದರಿಂದ ಇವರನ್ನು ವಂಚಿಸಿದವರಿಗೇ ಕೊರಗು.

ಮೀನ ರಾಶಿ (pisces)

ಸಂತೋಷದಾಯಕ, ಸಿಹಿ ಜಗತ್ತಿನಲ್ಲಿ ಇವರಿರುತ್ತಾರೆ. ಮೀನದ್ದು ಸಂವೇದನಾಶೀಲ ಆತ್ಮ. ಬ್ರೇಕಪ್ ಮಾಡುವಾಗ ಇವರನ್ನು ಕನ್ವೀನ್ಸ್ ಮಾಡಬೇಕು. ಇಲ್ಲವೆಂದರೆ ಅಸಹ್ಯವಾಗಿ ಜಗಳವಾಡುತ್ತಾರೆ. ಎಲ್ಲರೆದುರೇ ಮರ್ಯಾದೆ ತೆಗೆಯಲು ಹಿಂದೇಟು ಹಾಕೋಲ್ಲ.

Latest Videos

click me!