ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಯವರಿಗೆ ರಾಜಯೋಗ!

Published : Aug 27, 2023, 11:29 AM IST

ಯಾವಾಗ ಎರಡು ಗ್ರಹಗಳು ಜೊತೆಯಾಗಿ ಸೇರುತ್ತವೆಯೋ, ಆವಾಗ ಶುಭ- ಅಶುಭ ಯೋಗ ನಿರ್ಮಾಣ ಆಗುತ್ತೆ. ಸಿಂಹ ರಾಶಿಯಲ್ಲಿ ಬುಧ ಮತ್ತು ಶುಕ್ರ ಗ್ರಹ ಸೇರಿದಾಗ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣ ಆಗುತ್ತೆ.   

PREV
17
ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಯವರಿಗೆ ರಾಜಯೋಗ!

ಲಕ್ಷ್ಮೀ ನಾರಾಯಣ ಯೋಗವು (Lakshmi Narayan Yoga) ಶುಭ ಯೋಗವಾಗಿದ್ದು, ಇದರಿಂದ ಕೆಲವು ರಾಶಿಯ ಜನರಿಗೆ ಉತ್ತಮ ದಿನಗಳು ಆರಂಭವಾಗುತ್ತದೆ. ಯಾವೆಲ್ಲಾ ರಾಶಿಯವರಿಗೆ ಶುಭ ದಿನ ಆರಂಭವಾಗಲಿದೆ? ಇದರಲ್ಲಿ ನಿಮ್ಮ ರಾಶಿಯೂ ಇದೆಯೇ? ಚೆಕ್ ಮಾಡಿ. 
 

27

ವೃಷಭ ರಾಶಿ (Taurus): ಲಕ್ಷ್ಮೀ ನಾರಾಯಣ ಯೋಗದಿಂದ ವೃಷಭ ರಾಶಿಯ ಜನರಿಗೆ ಶುಭವಾಗುತ್ತೆ. ಇದರಿಂದ ಅವರಿಗೆ ಧನ ಲಾಭ ಆಗುತ್ತೆ. ನೀವು ಉತ್ತಮ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರೆ, ಅದು ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಅಂದರೆ ನಿಮಗೆ ಹೊಸ ಕೆಲಸ ಸಿಗಲಿದೆ. 

37

ಸಿಂಹ ರಾಶಿ (Leo): ಸಿಂಹರಾಶಿಯವರಿಗೂ ಇದರಿಂದ ಶುಭ ಯೋಗ ಆರಂಭವಾಗಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಮುಂಚಿಗಿಂತ ತುಂಬಾನೆ ಉತ್ತಮವಾಗುತ್ತೆ. ಭಾಗ್ಯ ನಿಮ್ಮ ಜೊತೆಯಲ್ಲೇ ಇರುತ್ತದೆ. ವ್ಯಾಪಾರದಲ್ಲಿ ಲಾಭ ಉಂಟಾಗುತ್ತೆ, ಹೆಚ್ಚಿನ ದುಡಿಮೆ ಸಹ ಸಾಧ್ಯವಾಗುತ್ತೆ.

47

ಕನ್ಯಾ ರಾಶಿ (Virgo): ಕನ್ಯಾ ರಾಶಿಯವರಿಗೆ ಭೌತಿಕ ಸುಖ ಪ್ರಾಪ್ತಿಯಾಗುತ್ತೆ. ಅಂದರೆ ಆಸ್ತಿ, ವಾಹನ ಮೊದಲಾದ ಭೌತಿಕ ವಸ್ತುಗಳನ್ನು ಖರೀದಿಸುವ ಯೋಜನೆ ಸಫಲವಾಗುತ್ತದೆ. ಒಟ್ಟಲ್ಲಿ ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಯವರಿಗೆ ಶುಭವಾಗಲಿದೆ. 

57

ವೃಶ್ಚಿಕ ರಾಶಿ (Scorpio): ಈ ರಾಜಯೋಗದಿಂದ ವೃಶ್ಚಿಕ ರಾಶಿಯವರ ಕರಿಯರ್ ಮತ್ತು ವ್ಯಾಪರದಲ್ಲಿ ಶುಭವಾಗುತ್ತೆ. ನಿಮ್ಮ ಆರೋಗ್ಯವೂ ಉತ್ತಮ ರೀತಿಯಲ್ಲಿ ಸುಧಾರಿಸುತ್ತದೆ. ಅಷ್ಟೇ ಅಲ್ಲ ಆಧ್ಯಾತ್ಮಿಕ ವಿಷಯದಲ್ಲೂ ವೃದ್ಧಿಯಾಗುತ್ತೆ ಎನ್ನಲಾಗಿದೆ. 

67

ಧನು ರಾಶಿ (Sagittarius): ಈ ಶುಭ ಯೋಗದಿಂದ ಧನು ರಾಶಿಯವರಿಗೆ ಆರ್ಥಿಕ ರೂಪದಲ್ಲಿ ಲಾಭ ಉಂಟಾಗುತ್ತೆ. ಕಾರ್ಯಕ್ಷೇತ್ರದಲ್ಲಿ ಗೌರವ ಸನ್ಮಾನಗಳು ಸಿಗಲಿವೆ. ಜೊತೆಗೆ ವರ್ಚಸ್ಸು ಹೆಚ್ಚಲಿದೆ. 

77

ಮೀನಾ ರಾಶಿ (Pisces): ಲಕ್ಷ್ಮೀ ನಾರಾಯಣ ಯೋಗದಿಂದ ಇಲ್ಲಿವರೆಗೆ ನಿಮ್ಮ ಯಾವೆಲ್ಲಾ ಕೆಲಸಗಳು ಅರ್ಧದಲ್ಲಿ ನಿಂತಿದೆಯೋ ಅವೆಲ್ಲಾ ಪೂರ್ತಿಯಾಗುತ್ತೆ.  ಅಷ್ಟೇ ಅಲ್ಲ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಬೆಂಬಲವೂ ನಿಮಗೆ ಸಿಗಲಿದೆ. 

Read more Photos on
click me!

Recommended Stories