ಲಕ್ಷ್ಮಿ ಹೆಬ್ಬಾಳ್ಕರ್‌‌ಗೆ ಲಕ್ಕಿ ನಂಬರ್ ಕಾರಿನಿಂದಲೇ ಎದುರಾಯ್ತಾ ಸಂಕಷ್ಟ? ಬಣ್ಣ-ಸಂಖ್ಯೆ ರಹಸ್ಯ

First Published | Jan 14, 2025, 3:59 PM IST

ಕಾರು ಅಪಘಾತಕ್ಕೀಡಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರದಿಂದ ಹೊಸ ಕಾರು ಪಡೆದಿದ್ದ ಹೆಬ್ಬಾಳ್ಕರ್ ಈ ಕಾರಿಗೆ ಲಕ್ಕಿ ನಂಬರ್ ಅಲಾಟ್ ಮಾಡಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಲಕ್ಕಿ ನಂಬರ್ ಹಾಗೂ ಲಕ್ಕಿ ಬಣ್ಣದ ಕಾರಿನಿಂದಲೇ ಸಂಕಷ್ಟ ಎದುರಾಗಿದ್ದು ಯಾಕೆ? 
 

 ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಅಧಿಕೃತ ಸರ್ಕಾರಿ ಕಾರು ಬೆಳಗಾವಿಯ ಕಿತ್ತೂರು ಬಳಿ ಅಪಘಾತಕ್ಕೀಡಾಗಿ ಸಚಿವೆ ಆಸ್ಪತ್ರೆ ದಾಖಲಾಗಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಾಯವಾಗಿದೆ. ಇತ್ತ ಅದೇ ಕಾರಿನಲ್ಲಿದ್ದ ಪರಿಷತ್ ಸದಸ್ಯ, ಸಹೋದರ ಚನ್ನರಾಜ್ ಹಟ್ಟಿಹೊಳಿ ಮುಖ ಹಾಗೂ ತಲೆಗೆ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ.

ರಸ್ತೆಯಲ್ಲಿ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಇದರ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಟೊಯೋಟಾ ಇನೋವಾ ಹೈಕ್ರಾಸ್ ಕಾರು ಅಪಘಾತದಲ್ಲಿ ಮುಂಭಾದ ನಜ್ಜು ಗುಜ್ಜಾಗಿದೆ. ಇತ್ತೀಚೆಗಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಕಾರು ಪಡೆದಿದ್ದರು.

Tap to resize

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅವಘಾತವಾದ ಕಾರಿನ ಸಂಖ್ಯೆ 9777. ಇದು ಅವರ ಲಕ್ಕಿ ನಂಬರ್. ಹೆಬ್ಬಾಳ್ಕರ್ ಅವರ ಎಲ್ಲಾ ಕಾರಿನ ನಂಬರ್ 9777. ಇದು ಅವರ ಅದೃಷ್ಠ ಸಂಖ್ಯೆಯಾಗಿದೆ. ಹೀಗಾಗಿ ಈ ನಂಬರ್‌ನ್ನೇ ಆರ್‌ಟಿಒ ಕಚೇರಿಯಿಂದ ಹೆಚ್ಚುವರಿ ದುಡ್ಡು ಕೊಟ್ಟು ಖರೀದಿಸಿದ್ದಾರೆ. ಆದರೆ ಇದೇ ಲಕ್ಕಿ ನಂಬರ್ ಕಾರು ಇದೀಗ ಅಪಘಾತಕ್ಕೀಡಾಗಿ ಸಚಿವೆ ಆಸ್ಪತ್ರೆ ಸೇರಿದ್ದಾರೆ.

ಇತ್ತೀಚೆಗೆಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸರ್ಕಾರದಿಂದ ಹೊಸ ಕಾರು ನೀಡಲಾಗಿತ್ತು. ವಿಶೇಷ ಅಂದರೆ ಸರ್ಕಾರ ನೀಡಿದ ಈ ಕಾರು ಕಪ್ಪು ಬಣ್ಣದಲ್ಲೇ ಇರಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮೊದಲೇ ಸೂಚಿಸಿದ್ದರು. ಕಾರಣ ವಾಹನಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅದೃಷ್ಠದ ಬಣ್ಣ ಕಪ್ಪು. ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಇರುವ ಎಲ್ಲಾ ಐಷಾರಾಮಿ ಹಾಗೂ ದುಬಾರಿ ಕಾರುಗಳ ಬಣ್ಣ ಕಪ್ಪು. 
 

ಸರ್ಕಾರ ನೀಡಿದ ಕಪ್ಪು ಬಣ್ಣದ ಇನ್ನೋವಾ ಹೈಕ್ರಾಸ್ ಕಪ್ಪು ಬಣ್ಣದ ಕಾರಿಗೆ ಹೆಬ್ಬಾಳ್ಕರ್ ಕೆಎ 01 ಜಿಎ 9777  ನಂಬರ್ ಅಲಾಟ್ ಮಾಡಿಸಿಕೊಂಡಿದ್ದರು. ಈ ಕಾರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿಜಯದಶಮಿಯಂದು ಬೆಂಗಳೂರಲ್ಲಿ ಪೂಜೆ ಮಾಡಿಸಿದ್ದರು. ಕಾರು ಚಾಲಕ ಶಿವು ಜೊತೆ ತೆರಳಿ ಪೂಜೆ ಸಲ್ಲಿಸಿದ್ದರು. 
 

ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಅದೃಷ್ಠದ ವಾಹನ ಸಂಖ್ಯೆ ಹಾಗೂ ವಾಹನ ಬಣ್ಣದಲ್ಲಿ ಇದುವರೆಗೂ ಯಾವುದೇ ಬದಲಾವಣೆ ಮಾಡಿಲ್ಲ. ಅದೆಷ್ಟೇ ಖರ್ಚಾದರೂ ತಮ್ಮ ಎಲ್ಲಾ ವಾಹನಗಳಿಗೆ ಒಂದೇ ನೋಂದಣಿ ಸಂಖ್ಯೆ ಹಾಗೂ ಬಣ್ಣ ಪಡೆದುಕೊಂಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಕಾರುಗಳ ಕುರಿತು ಆಸಕ್ತಿ ಹೊಂದಿದ್ದಾರೆ. ವಿಶೇಷ ಅಂದರೆ ಹೆಬ್ಬಾಳ್ಕರ್ ಖುದ್ದು ಕಾರು ಡ್ರೈವಿಂಗ್ ಮಾಡುತ್ತಾರೆ. ಇದೇ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತರು ಕಾರು ಖರೀದಿಸಿದರ ಹೆಬ್ಬಾಳ್ಕರ್ ಅವರಿಗೆ ಡ್ರೈವಿಂಗ್ ಮಾಡಲು ನೀಡುತ್ತಾರೆ. 

Latest Videos

click me!