ಅಯೋಧ್ಯೆ ಸಂಭ್ರಮ ಹಿನ್ನೆಲೆ ಕೊಪ್ಪಳದಲ್ಲಿ ಭಾಗ್ಯನಗರದ ಪಂಚ ಕಮಿಟಿಯಿಂದ ಪೂಜೆ. ಪಂಚ ಕಮಿಟಿ ಅಧ್ಯಕ್ಷರು ಪದಾಧಿಕಾರಿಗಳಿಂದ ಪೂಜೆ. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಂ ಮುಖಂಡರು.
ಎಲ್ಇಡಿ ಮೂಲಕ ರಾಮನ ಪ್ರಾಣಪ್ರತಿಷ್ಠಾಪನೆ ವಿಕ್ಷೀಸುತ್ತಿರುವ ಸಾರ್ವಜನಿಕರು. ಮಲ್ಲೇಶ್ವರಂನ ಲಕ್ಷೀನರಸಿಂಹಸ್ವಾಮಿ ದೇವಾಲಯದ ಮುಂದೆ ಸೇರಿರುವ ನೂರಾರು ಭಕ್ತರು.
ರಾಜಾಜಿನಗರ ರಾಮಮಂದಿರದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ. ಇಡೀ ದಿನ ದೇವಾಲಯದಲ್ಲಿ ಅನ್ನಪ್ರಸಾದ ನೀಡಲಿರುವ ದೆವಸ್ಥಾನದ ಆಡಳಿತ ಮಂಡಳಿ. ಸಂಜೆ 108 ದೀಪ ಹಚ್ಚಿ ಶೋಭಾಯತ್ರೆ ನಡೆಯಲಿದೆ. ರಾತ್ರಿ 9 ರವರೆಗೂ ನಿರಂತರ ಪೂಜೆ ನಡೆಯಲಿದೆ.
ಶಾಲೆ ಕಾಲೇಜು ಮುಗಿಸಿ ದೇವಾಲಯಕ್ಕೆ ಆಗಮಿಸ್ತಿರುವ ವಿದ್ಯಾರ್ಥಿಗಳು. ರಾಜಾಜಿನಗರ ರಾಮಮಂದಿರಕ್ಕೆ ಆಗಮಿಸ್ತಿರುವ ವಿದ್ಯಾರ್ಥಿಗಳು. ಶ್ರೀರಾಮನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ನೂರಾರು ವಿದ್ಯಾರ್ಥಿಗಳು.
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಪಾನೆ ಹಿನ್ನೆಲೆ, ಬೆಂಗಳೂರಿನ ಬಹುತೇಕ ದೇಗುಲಗಳಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ ಹವನ ನಡೆಯಿತು.
ರಾಜಾಜಿನಗರದ ರಾಮಮಂದಿರ ದೇವಾಲಯದಲ್ಲೂ ಬೆಳಿಗ್ಗೆಯಿಂದ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತಿವೆ. ಮುಂಜಾನೆ 3 ಗಂಟೆಗೆ ಶ್ರೀರಾಮನಿಗೆ ಅಭಿಷೇಕ ಮಾಡಲಾಗಿದೆ.