ಫೆಬ್ರವರಿ 2024 ರಿಂದ ಈ 'ರಾಶಿ' ಗೆ ಒಳ್ಳೆದಿನ ಆರಂಭ, ಎಲ್ಲಾ ತೊಂದರೆ ದೂರ

First Published | Jan 22, 2024, 3:00 PM IST

ಫೆಬ್ರವರಿ 2024 ರಲ್ಲಿ ಸೂರ್ಯ, ಮಂಗಳ,ಬುಧ ಮತ್ತು ಶುಕ್ರ ಸೇರಿದಂತೆ 4  ದೊಡ್ಡಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಇದರಿಂದಾಗಿ ಕನ್ಯಾ ಸೇರಿದಂತೆ ಕೆಲವು ರಾಶಿಗೆ ಒಳ್ಳೆಯದಾಗುತ್ತದೆ.
 

ಫೆಬ್ರವರಿಯಲ್ಲಿ ಮಕರ ರಾಶಿಯಲ್ಲಿ ಸೂರ್ಯ, ಮಂಗಳ ಮತ್ತು ಬುಧ ಒಂದೇ ಕಡೆ ಸೇರುತ್ತವೆ. ಇದರಿಂದ ಬುಧಾದಿತ್ಯ ರಾಜಯೋಗ ಮತ್ತು ಆದಿತ್ಯ ಮಂಗಲ ಯೋಗವು ರೂಪುಗೊಳ್ಳುತ್ತದೆ.
 

ಮೇಷದಿಂದ ಮೀನ ರಾಶಿಯ 12 ರಾಶಿಗಳ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ ಸಿಂಹ ಜತೆ ಈ ಮೂರು ರಾಶಿಗೆ ಸಮಯ ಮಂಗಳಕರವಾಗಿದೆ.

Tap to resize

ಸಿಂಹ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಜೀವನದಲ್ಲಿ ಹೊಸ ಧನಾತ್ಮಕ ಬದಲಾವಣೆಗಳು ಬರುತ್ತವೆ. ದೀರ್ಘಕಾಲದ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.ಆತ್ಮ ವಿಶ್ವವಾಸ ಹೆಚ್ಚಾಗುತ್ತದೆ. ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತೀರಿ. ಪ್ರೀತಿಯ ಜೀವನದ ಪ್ರಣಯ ಕ್ಷಣಗಳನ್ನು ಆನಂದಿಸುವಿರಿ.ಅನೇಕ ಸುವರ್ಣವಕಾಶಗಳು ಇವೆ.
 

ಕನ್ಯಾ ರಾಶಿಯವರು ವೃತ್ತಿ ಜೀವನದಲ್ಲಿ ಹೊಸ ಸಾಧನೆ ಮಾಡುವಿರಿ. ತಾಳ್ಮೆಯ ಕೊರತೆ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.

ತುಲಾ ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ . ಸ್ನೇಹಿತರ ಸಹಾಯದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.ಸಂಗಾತಿಯೊಂದಿಗನ ಸಂಬಂಧವು ಗಟ್ಟಿಯಾಗುತ್ತದೆ. ಪ್ರಕೃತಿಯಲ್ಲಿ ನಮೃತೆಯನ್ನು ಕಾಪಾಡಿಕೊಳ್ಳಿ.   

Latest Videos

click me!