ಈ 3 ರಾಶಿಗೆ ಶನಿ ಅಡ್ಡ ಪರಿಣಾಮ ಹೆಚ್ಚು, ನಿಮ್ಮ ರಾಶಿ ಇದಾಗಿದ್ರೆ ಪರಿಹಾರವೂ ಇದೆ

First Published Jul 28, 2023, 5:30 PM IST

ಪ್ರಸ್ತುತ, ಕುಂಭ, ಮಕರ ಮತ್ತು ಮೀನ ರಾಶಿ ಜನರು ಶನಿಯ ಸಾಡೇ ಸಾಥ್ ನಿಂದ ಬಳಲುತ್ತಿದ್ದಾರೆ. ಶನಿಯ ಅಶುಭ ಪರಿಣಾಮವನ್ನು ತಪ್ಪಿಸಲು ಈ ರಾಶಿಯವರು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. 

ಶನಿಯ ಏಳೂವರೆ ವರ್ಷಗಳ ಸಂಕ್ರಮಣ ಎಂದೂ ಕರೆಯಲ್ಪಡುವ ಶನಿಯ ಸಾಡೇ ಸಾಥ್ (Sade sath)ಒಂದು ಪ್ರಮುಖ ಜ್ಯೋತಿಷ್ಯ ಘಟನೆಯಾಗಿದ್ದು, ಇದು ವ್ಯಕ್ತಿಯ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತೆ. ಇದು ವೃತ್ತಿ ಜೀವನ (Career), ಹಣಕಾಸು (Financial Status), ಆರೋಗ್ಯ (health) ಮತ್ತು ಸಂಬಂಧಗಳು (Relationship) ಸೇರಿದಂತೆ ಜೀವನದ ಅನೇಕ ಅಂಶಗಳ ಮೇಲೆ ಆಳವಾದ ಪರಿಣಾಮ ಬೀರುತ್ತೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ವ್ಯಕ್ತಿಗಳು ತೊಂದರೆಗಳನ್ನು ಎದುರಿಸುತ್ತಾರೆ.. 

ಶನಿಯ ಸಾಡೇ ಸಾಥ್ ನಲ್ಲಿ ಮೂರು ಹಂತಗಳಿವೆ. ಮೊದಲ ಹಂತದಲ್ಲಿ, ಶನಿ ಹುಟ್ಟಿದ ಚಂದ್ರನಿಂದ ಹನ್ನೆರಡನೇ ಮನೆಯಲ್ಲಿ ಸಂಚರಿಸುತ್ತಾನೆ. ಈ ಹಂತವನ್ನು ಸಾಮಾನ್ಯವಾಗಿ ತಯಾರಿಯ ಹಂತ ಎಂದು ಕರೆಯಲಾಗುತ್ತೆ, ಇಲ್ಲಿ ವ್ಯಕ್ತಿಗಳು ತಮ್ಮ ಜೀವನದಲ್ಲಿ(Life) ಬದಲಾವಣೆಗಳನ್ನು ಅನುಭವಿಸಲು ಪ್ರಾರಂಭಿಸಬಹುದು. ಈ ಅವಧಿಯಲ್ಲಿ ವ್ಯಕ್ತಿಯು ನಿರ್ಲಿಪ್ತತೆ ಅಥವಾ ವೈರಾಗ್ಯದ ಭಾವನೆ ಅನುಭವಿಸಬಹುದು.

Latest Videos


ಸಾಡೇ ಸಾಥ್‌ನ ಎರಡನೇ ಹಂತವು ಶನಿಯು ಜನ್ಮ ಚಂದ್ರನ ರಾಶಿಯ ಮೇಲೆ ಸಂಚರಿಸಿದಾಗ ಸಂಭವಿಸುತ್ತೆ. ಈ ಹಂತವನ್ನು ಅತ್ಯಂತ ತೀವ್ರವಾದ ಅವಧಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ಸವಾಲು ಮತ್ತು ಅಡೆತಡೆಗಳು ಹೆಚ್ಚಾಗಬಹುದು. ದಾನ(Donate) ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು ಈ ಹಂತದ ನಕಾರಾತ್ಮಕ ಪರಿಣಾಮ ಕಡಿಮೆ ಮಾಡಲು ಸಹಾಯ ಮಾಡುತ್ತೆ.

ಶನಿಯ ಸಾಡೇ ಸಾಥ್ನ ಮೂರನೇ ಮತ್ತು ಅಂತಿಮ ಹಂತ ಶನಿಯು ಹುಟ್ಟಿದ ಚಂದ್ರನಿಂದ ಮತ್ತೊಂದು ಮನೆಗೆ ಚಲಿಸಿದಾಗ ಪ್ರಾರಂಭವಾಗುತ್ತೆ. ಈ ಹಂತದಲ್ಲಿ, ವ್ಯಕ್ತಿಗಳು ಅಮೂಲ್ಯವಾದ ಜೀವನ ಪಾಠಗಳನ್ನು(Lesson) ಕಲಿತಿರುತ್ತಾರೆ ಮತ್ತು ತಮ್ಮ ಅನುಭವಗಳ ಮೂಲಕ ಜ್ಞಾನವನ್ನು ಗಳಿಸಿರುತ್ತಾರೆ. ಈ ಅವಧಿಯಲ್ಲಿ ಹೂಡಿಕೆ ಮಾಡುವುದು ಪ್ರಯೋಜನಕಾರಿ.

ಶನಿ ದೇವರನ್ನು ಪೂಜಿಸೋದರಿಂದ ಅವನ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಶನಿವಾರ, ಶನಿ ಯಂತ್ರ ಅಥವಾ ವಿಗ್ರಹದ (Idol) ಮುಂದೆ ಎಳ್ಳೆಣ್ಣೆ ದೀಪವನ್ನು ಬೆಳಗಿಸೋದು ವಿಶೇಷವಾಗಿ ಒಳ್ಳೆಯದನ್ನು ಮಾಡುತ್ತೆ. ಶನಿ ಮಂತ್ರವನ್ನು ಪಠಿಸುವುದು ಅಥವಾ ಶನಿ ಚಾಲೀಸಾವನ್ನು ಪಠಿಸುವುದು ಸಹ ಸಕಾರಾತ್ಮಕ ಶಕ್ತಿಯನ್ನು ನೀಡುತ್ತೆ.

ದಯೆ ಮತ್ತು ದಾನದ ಕಾರ್ಯಗಳಲ್ಲಿ ತೊಡಗುವುದು ಶನಿಯ ಸಾಡೇ ಸಾಥ್ನ ನಕಾರಾತ್ಮಕ(Negative) ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡುತ್ತೆ. ಬಡವರಿಗೆ ಆಹಾರ, ಬಟ್ಟೆ ಅಥವಾ ಹಣವನ್ನು ದಾನ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಕಾಣಬಹುದು.

ನೀಲಮಣಿ ಎಂದೂ ಕರೆಯಲ್ಪಡುವ ನೀಲಿ ರತ್ನದ ಕಲ್ಲುಗಳನ್ನು(Gem stone) ಧರಿಸುವುದು ಶನಿಯ ಪ್ರಭಾವದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತೆ ಎಂದು ನಂಬಲಾಗಿದೆ. ಆದರೆ, ಯಾವುದೇ ರತ್ನವನ್ನು ಧರಿಸುವ ಮೊದಲು ಜ್ಯೋತಿಷಿಯನ್ನು ಸಂಪರ್ಕಿಸೋದು ಅವಶ್ಯಕ. 
 

ಶನಿವಾರದ ಉಪವಾಸವು(Fasting) ಶನಿ ದೇವರನ್ನು ಮೆಚ್ಚಿಸುತ್ತೆ ಮತ್ತು ಶನಿಯ ಸಾಡೇ ಸಾಥ್ ಸಮಯದಲ್ಲಿ ಎದುರಿಸುವ ಸವಾಲುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.

ಶನಿ ದೇವರಿಗೆ ಅರ್ಪಿತವಾದ ವಿಶೇಷ ಮಂತ್ರಗಳನ್ನು ನಿಯಮಿತವಾಗಿ ಪಠಿಸೋದರಿಂದ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಮತ್ತು ಒಬ್ಬರ ಜೀವನದಲ್ಲಿ ಸಕಾರಾತ್ಮಕ(Positivity) ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತೆ.

ಶನಿ 2025 ರವರೆಗೆ ಕುಂಭ ರಾಶಿಯಲ್ಲಿ(Aquarius) ಇರುತ್ತಾನೆ. ಈ ಸಮಯದಲ್ಲಿ, ಕುಂಭ, ಮಕರ ಮತ್ತು ಮೀನ ರಾಶಿಯ ಜನರು ಶನಿಯ ಸಾಡೇ ಸಾಥ್ ನಿಂದ ಪ್ರಭಾವಿತರಾಗುತ್ತಾರೆ. ಆದ್ದರಿಂದ, ಈ ರಾಶಿಯವರು ಶನಿ ದೇವರನ್ನು ಮೆಚ್ಚಿಸಲು ಮೇಲೆ ತಿಳಿಸಿದ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

click me!